ಮಂಗಳೂರು: ಕರಾವಳಿಯ ವಿವಿಧೆಡೆ ಭಾನುವಾರ ಆಟಿ ಅಮಾವಾಸ್ಯೆ ಆಚರಣೆ ನಡೆಯಿತು. ಮನೆ ಮನೆಗಳಲ್ಲಿ ಹಾಲೆ ಮರದ ಕಷಾಯವನ್ನು ತಯಾರಿಸಿ ಕುಡಿದರು. ವಿವಿಧೆಡೆ ಸಂಘಟನೆಗಳು ಆಟಿಡೊಂಜಿ ದಿನವನ್ನು ಆಚರಿಸಿದರು.
ಬಂಟ್ವಾಳ ತಾಲೂಕಿನ ಕಾರಿಂಜ ಕ್ಷೇತ್ರ, ನರಹರಿ ಪರ್ವತದಲ್ಲಿ ತೀರ್ಥಸ್ನಾನ ಜಾತ್ರೆಗಳು ನಡೆದವು, ಸಾವಿರಾರು ಜನರು ತೀರ್ಥ ಸ್ನಾನಗೈದರು.ಸೋಮವಾರದಿಂದ ಶ್ರಾವಣ ಮಾಸ ಆರಂಭವಾಗಲಿದ್ದು ವಾರ್ಷಿಕ ಹಬ್ಬ ಹರಿದಿನಗಳು ಆರಂಭವಾಗಲಿವೆ.