ಕುಂದಾಪುರ, ಬೈಂದೂರು ಚರ್ಚ್ ವ್ಯಾಪ್ತಿಯ ಬಂಕೇಶ್ವರದ ಬಳಿಯ 40 ವರ್ಷದ ಮಹಿಳೆ ಶ್ರೀಮತಿ ಶಾಂತಿ ಪಾಯ್ಸ್ 27 ರ ಬೆಳಗ್ಗಿನ ಜಾವ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದು ಬಂದಿದೆ.
ಇವರ ಪತಿ ಡಾ|ರೋಶನ್ ಪಾಯ್ಸ್ ಬೈಂದೂರಿನಲ್ಲಿ ಪ್ರಸಿದ್ದ ಹೋಮಿಯೊ ಪತಿ ವೈದ್ಯರಾಗಿದ್ದು. ಪತ್ನಿ ಮುಂಜಾನೆ 3 ಗಂಟೆಗೆ ಎದ್ದಿದನ್ನು ಗಮನಿಸಿದ್ದಾರೆ. ಬಹುಶ ನೀರು ಕುಡಿಯಲು ಎದ್ದಿದ್ದಾರೆಂದು ತಿಳಿದು ಅವರು ಮಲಗಿದ್ದಾರೆ. ಆದರೆ ಬೆಳಿಗ್ಗೆ ಅವರು ಕಾಣಾದಾಗ ಹುಡುಕಲು ತೊಡಗಿದಾಗ ಅವರ ಶವವವನ್ನು ಬಾವಿಯಲ್ಲಿ ಕಂಡು ಬಂದಿದೆಯನ್ನು ತಿಳಿಸಿದ್ದಾರೆ.
ಶ್ರೀಮತಿ ಶಾಂತಿ (ಲೋಬೊ) ಪಾಯ್ಸ್ ಮೂಲತಹ ತ್ರಾಸಿಯವರಾಗಿದ್ದು, ಅವರಿಗೆ ನಾವುಂದದ ರೋಶನ್ ಪಾಯ್ಸ್ ಅವರಿಗೆ ಮದುವೆ ಕೊಡಲಾಗಿತ್ತು. ದದ ನಂತರ ಅವರು ಬೈಂದೂರಿನಲ್ಲಿ ನೆಲೆಯಾಗಿದ್ದರು.
ಶಾಂತಿ ಪಾಯ್ಸ್ ತಂದೆ ಬಾಲ್ತೆಜûರ್ ಲೋಬೊ ನಿವ್ರತ್ತ ಬ್ಯಾಂಕ್ ಉದ್ಯೋಗಿ ತಾಯಿ ಆನ್ನಿ ಲೋಬೊ ನಿವ್ರತ್ತ ಕುಂದಾಪುರದ ಶಾಲಾ ಕ್ಲಾರ್ಕ್ ಆಗಿದ್ದು ಇಬ್ಬರು ಜನಾನುರಾಗಿಯಾಗಿದ್ದರು.
ಶಾಂತಿ ಪಾಯ್ಸ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದರು ಅಂದು ತಿಳಿದು ಬಂದಿದೆ. ಅದರ ಹಿಂದಿನ ದಿನಅವರಿಗೆ ಸಂಬಂದ್ದ ಪಟ್ಟ ವೈದ್ಯರನ್ನು ಕಂಡು ಬಂದಿದ್ದಾರೆಂದು ತಿಳಿದು ಬಂದಿದೆ. ಶಾಂತಿ ಅವರು ಮೊದಲು ಶಿಕ್ಷಕಿಯ ಸೇವೆ ಮಾಡಿದ್ದರು. ಮಕ್ಕಳಾದ ನಂತರ ಶಿಕ್ಷಕಿ ವ್ರತ್ತಿಯನ್ನು ತೊರೆದಿದ್ದರು. ಶಾಂತಿ ಪಾಯ್ಸಗೆ ಇಬ್ಬರು ಮಕ್ಕಳಾಗಿದ್ದು ಒಂದು ಹೆಣ್ಣು ನೇಹಾ ಮತ್ತು ಗಂಡು ನಿಯೋಲ್ ಅವರನ್ನು ಅಗಲಿದ್ದಾರೆ.
ಇವರ ಅಂತಿಮ ಕ್ರಿಯೆಯು 28 ಸುಕ್ರವಾರದಂದು ಬೆಳಿಗ್ಗೆ 10 ಗಂಟೆಗೆ ಮನೆಯಿಂದ ಆರಂಭಗೊಂಡು ಬೈಂದೂರು ಇಗರ್ಜಿಯಲ್ಲಿ 10.30 ಕ್ಕೆ ನೆಡಸಲಾಗುವುದೆಂದು ತಿಳಿದು ಬಂದಿದೆ