(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)
ಮುಂಬಯಿ,: ಜೆರಿಮೆರಿಯಲ್ಲಿನ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ಸಂಭ್ರಮೋಲ್ಲಾಸದಿಂದ ನಾಗರ ಪಂಚಮಿ ಆಚರಿಸಲಾಯಿತು. ಆ ಪ್ರಯುಕ್ತ ಬೆಳಿಗ್ಗೆ ಉಮಾಮಹೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ದೇವಸ್ಥಾನದ ಶಿಲಾಮಯ ಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ದೇವಸ್ಥಾನದ ಪ್ರಧಾನ ಆರ್ಚಕ ಶ್ರೀನಿವಾಸ ಎನ್.ಉಡುಪ ತನ್ನ ಪೌರೋಹಿತ್ಯದಲ್ಲಿ ಸಾಮೂಹಿಕ ಅಶ್ಲೇಷ ಬಲಿ, ನಾಗತಂಬಿಲ, ನಾಗತನು, ಸೀಯಾಳ, ಪಂಚಾಮೃತ ಹಾಗೂ ಕ್ಷೀರಾಭಿಷೇಕ, ಮಹಾಪೂಜೆ ನಡೆಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಕೆ ಶೀನ ಪೂಜಾರಿ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ನಾಗರ ಪಂಚಮಿ ಉತ್ಸವದಲ್ಲಿ ಲಲಿತಾ ಶೀನ, ಸೋನಿಯಾ ಪ್ರಸಿಲ್, ನಿಶಾ ವಿವೇಕ್ ವಿಶೇಷವಾಗಿ ಉಪಸ್ಥಿತರಿದ್ದು ಆರ್ಚಕರಾರ ರಾಜೇಶ್ ಭಟ್, ರಮಾನಂದ ಭಟ್, ನಾಗರಾಜ ಐತಾಳ, ಶ್ರೀನಿವಾಸ ಭಟ್ ಕುರ್ಲಾ ಮತ್ತಿತರ ವಿದ್ವಾನರು ಉಪಸ್ಥಿತ ಭಕ್ತರಿಗೆ ತೀರ್ಥಪ್ರಸಾದ ವಿತರಿಸಿ ಹರಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಭಕ್ತವೃಂದದ ತೋನ್ಸೆ ಸಂಜೀವ ಪೂಜಾರಿ, ಬಿ.ಎನ್ ಶೆಟ್ಟಿ, ದಿವಾಕರ್ ಸುವರ್ಣ, ಮೋಹಿನಿ ಕೋಟ್ಯಾನ್, ದೀಪಾ ಪಟಾಳಿ, ಗೀತಾ ಶೆಟ್ಟಿ, ಶುಭಾ ದೇವಾಡಿಗ, ಪ್ರಕಾಶ್ ರಾವ್, ಸತೀಶ್ ಪೂಜಾರಿ, ವಸಂತಿ ನಾಯಕ್ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕರ್ತರು ಸೇವಾಥಿರ್üಗಳಾಗಿ ಸಹಕರಿಸಿದರು. ರವೀಂದ್ರ ಎ.ಅವಿೂನ್ ಮತ್ತು ಬಳಗವು ಭಜನೆ ಗೈದರು. ಮಧ್ಯಾಹ್ನ ಮಹಾಪೂಜೆ, ಮಹಾರತಿ ನೆರವೇರಿಸಿ ಮಹಾ ಅನ್ನಸಂತಾರ್ಪಣೆ, ತೀರ್ಥಪ್ರಸಾದ ನಡೆಸಲ್ಪಟ್ಟು ವಾರ್ಷಿಕ ನಾಗರ ಪಂಚಮಿ ಆಚರಿಸಲ್ಪಟ್ಟಿತು.