Saturday 10th, May 2025
canara news

ಪೊವಾಯಿ ಪಂಚಕುಟೀರದ ನಾಗಬನದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲ್ಪಟ್ಟ ನಾಗರ ಪಂಚಮಿ

Published On : 28 Jul 2017   |  Reported By : Rons Bantwal


ನಾಗರಾಧನೆ ಸಂತುಷ್ಟತೆಯ ಪಂಚಮಿಯಾಗಿದೆ : ಎಡನೀರು ಕೇಶವಾನಂದ ಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ ಜು.27: ರಾಷ್ಟ್ರದ ಆಥಿ೯ಕ ರಾಜಧಾನಿ ಬೃಹನ್ಮುಂಬಯಿಯ ನಾಗಕ್ಷೇತ್ರ ಎಂದೇ ಪ್ರಸಿದ್ಧಿಯ ಉಪನಗರದ ಪೊವಾಯಿ ಇಲ್ಲಿನ ಪಂಚಕುಟೀರ (ಸುವರ್ಣ ಮಂದಿರ) ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರದಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ ಅವರ ಆಶೀರ್ವದ ಮತ್ತು ಮಾರ್ಗದರ್ಶನದಲ್ಲಿ ವಾರ್ಷಿಕ ನಾಗರ ಪಂಚಮಿಯನ್ನು ಸಂಭ್ರಮ ಸಡಗರದಿಂದ ಆಚರಿಸಲ್ಪಟ್ಟಿತು.

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ನಾಗಬನ ಮತ್ತು ಹತ್ತು ಹೆಡೆಯ ನಾಗದೇವರುಗಳನ್ನು ಸ್ಥಾಪಿಸಲ್ಪಟ್ಟಿರುವ ಕ್ಷೇತ್ರದಲ್ಲಿ ಕಳೆದ ಸುಮಾರು ಆರುವರೆ ದಶಕಗಳಿಂದ ನಾಗರಪಂಚಮಿ ಉತ್ಸವವನ್ನು ವೈವಿಧ್ಯಮಯವಾಗಿ ನಡೆಸಲಾಗುತ್ತಿದ್ದು ವರ್ಷಂಪ್ರತಿಯಂತೆ ಈ ಬಾರಿಯೂ ಇಂದಿಲ್ಲಿ ಗುರುವಾರ ಹೇಮಲಂಬಿನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿ ಶುಭಾವಸರÀದಲ್ಲಿ ಸಂಭ್ರಮ ಸಡಗರದಿಂದ ನಾಗರ ಪಂಚಮಿ ಆಚರಿಸಲ್ಪಟ್ಟಿತು.

ಬೆಳಗ್ಗಿನಿಂದ ಶ್ರೀ ಮಹಾಗಣಪತಿ ಪೂಜೆ ಸ್ವಸ್ತಿ ವಾಚನ, ನವಗ್ರಹ ಹೋಮ, ದಿಕ್ಪಾಲ ಹೋಮ, ಅಷ್ಟ ದಿಕ್ಪಾಲ ಬಲಿ (ಪ್ರಕಾರ ಬಲಿ), ಶಿಖರ ಕುಂಭಾಭಿಷೇಕ (ಬ್ರಹ್ಮಕಲಶ) ಶ್ರೀ ನಾಗರದೇವರ ಸನ್ನಿಧಿಯಲ್ಲಿ ನವಕ ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಸಹಸ್ರ ನಾರಿಕೇಳಾಭಿಷೇಕ, ನವಕಲಶ ಮಹಾಭಿಷೇಕ, ನಾಗದೇವರ ಮೂರ್ತಿಬಲಿ, ನಾಗದರ್ಶನ ಮತ್ತು ತೀರ್ಥಪ್ರಸಾದ ವಿತರಣೆ ನೆರವೇರಿಸಲ್ಪಟ್ಟಿತು.

ಕಾಸರಗೋಡುನ ಎಡನೀರು ಮಠದ ಶ್ರೀಮದ್ ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯ ಥೋಟಕಾಚಾರ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮಿಜಿ ಪಾದಾರ್ಪಣೆಗೈದು ನೆರೆದ ಸದ್ಭಕ್ತರನ್ನು ಹರಸಿದರು. ನಾಗರಾಧನೆ ಸಂತುಷ್ಟತಾ ಪಂಚಮಿ ಆಗಿದ್ದು ಸಹೋದರ ಸಹೋದರಿಯರ ಬಾಂಧವ್ಯದ ಪ್ರತೀಕವೂ ಹೌದು. ಹಿಂದೂ ಸಂಪ್ರದಾಯದಲ್ಲಿ ನಾಗನು ದೇವರಿಗೆ ಸಮಾನ. ಪುರಾತನಕಾಲದಿಂದಲೂ ದೇವರ ಶಕ್ತಿಯ ವಿವಿಧ ರೂಪಗಳನ್ನು ಆರಾಧಿಸುವ ಹಿಂದೂಗಳು ಶ್ರಾವಣ ಮಾಸದಲ್ಲಿ ನಾಗದೇವರಿಗೆ ಪೂಜೆ ಸಲ್ಲಿಸುವ ಆಚರಣೆಯೇ ನಾಗಪಂಚಮಿ. ನಾಗನನ್ನು ಪೂಜಿಸಿ ಕೋರುವ ಬೇಡಿಕೆಗಳನ್ನು ಶಿವನು ಮನ್ನಿಸುತ್ತಾನೆ ಎಂಬ ನಂಬಿಕೆ ಪ್ರಧಾನವಾದ ಆಚರಣೆ ಇದಾಗಿದೆ. ಕಾಲಿಯಾನ ಮೇಲೆ ಕೃಷ್ಣ ಸಾಧಿಸಿದ ವಿಜಯವೇ ನಾಗಪಂಚಮಿಯಾಗಿ ಆಚರಿಸುವ ಪದ್ಧತಿ ಇದಾಗಿದೆ. ನಾಗನಿಗೆ ಮಾಡುವ ಪ್ರಾರ್ಥನೆ ದೇವರಿಗೆ ಕೂಡಲೇ ಅರ್ಪಣೆ ಆಗುತ್ತದೆ ಎನ್ನುವುದು ವಾಡಿಕೆಯಲ್ಲಿದೆ. ಶಿವನನ್ನು ಒಲಿಸಿಕೊಳ್ಳಲು ನಾಗಪಂಚಮಿ ಪೂಜೆ ಶ್ರೇಯಸ್ಕರ ಎಂದು ಹಿಂದೂಗಳ ನಂಬಿಕೆ. ನಾಗರಪಂಚಮಿ ಎಂದರೆ ನಾಡಿಗೆಲ್ಲಾ ಹಬ್ಬ. ತನ್ನ ಪರಿವಾರ ಮತ್ತು ಸಹೋದರರ ಒಳಿತಿಗಾಗಿ ಹೆಂಗಳೆಯರು ಈ ದಿನದಂದು ವಿಶೇಷವಾಗಿ ನಾಗನನ್ನು ಪ್ರಾಥಿರ್üಸುವ ವಾಡಿಕೆ. ನಾಗನಿಗೆ ಮಾಡುವ ಯಾವುದೇ ಪ್ರಾರ್ಥನೆ ದೇವರಿಗೆ ಕೂಡಲೇ ಅರ್ಪಣೆಯಾಗುತ್ತದೆ ಎಂಬ ಮಾತಿದೆ ಎಂದು ಎಡನೀರುಶ್ರೀಗಳು ತಿಳಿಸಿ ಭಕ್ತಿಗೀತೆಗಳನ್ನಾಡಿ ನೆರೆದ ಭಕ್ತರಿಗೆ ಸಂತುಷ್ಟ ಪಡಿಸಿದರು.

ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ರಾಜ್ಯ ಅಬಕಾರಿ ಆಯುಕ್ತೆ ಆಶ್ವಿನಿ ಜೋಶಿ, ಮಾಜಿ ಗೃಹ ಸಚಿವ ಕೃಪಾಶಂಕರ್ ಸಿಂಗ್, ಶಿವಸೇನಾ ನೇತಾರರುಗಳಾದ ಅನಿಲ್ ಪರಬ್, ಶೈಲೇಶ್ ಪೆÇನ್ಸಾರೆ, ನಾಡಿನ ದಿಗ್ಗಜರಾದ ಜಯ ಸಿ.ಸುವರ್ಣ, ಐಕಳ ಹರೀಶ್ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ಸುನಂದ್ರ ಸುರೇಂದ್ರ ಶೆಟ್ಟಿ, ಪ್ರಕಾಶ್ ಹೆಗ್ಡೆ ವಸಾಯಿ, ಮಹೇಶ್ ಎಸ್.ಶೆಟ್ಟಿ, ರತ್ನಾಕರ್ ಬಂಗೇರಾ ಸೇರಿದಂತೆ ನಾಡಿನ ಹೆಸರಾಂತ ಉದ್ಯಮಿಗಳು, ಸಮಾಜಸೇವಕರು ಮಹಾನೀಯರು ಆಗಮಿಸಿ ಶ್ರೀನಾಗ ದೇವರಿಗೆ ಪೂಜೆ ನೆರವೇರಿಸಿ ಶ್ರೀ ನಾಗದೇವರ ಕೃಪೆಗೆ ಪಾತ್ರರಾದರು.

ನೆರೆದಿದ್ದ ಸಾವಿರಾರು ಸಂಖ್ಯೆಯ ಸದ್ಭಕ್ತರನ್ನು ಪೂಜಾಧಿ ಕಾರ್ಯಕ್ರಮಗಳÀಲ್ಲಿ ಭಾಗವಹಿಸಿದ್ದು, ಬಿಲ್ಲವರ ಅಸೋಸಿಯೇಶನ್ ಮುಮ್ಬಯಿ ಇದರ ಸೇವಾದಳವು ದಳಪತಿ ಗಣೇಶ್ ಕೆ.ಪೂಜಾರಿ ನೇತೃತ್ವದಲ್ಲಿ ಶಿಸ್ತುಬದ್ಧತಾ ವ್ಯವಸ್ಥೆ ನಡೆಸಿದರು. ಧಾರ್ಮಿಕ ಹಾಗೂ ಸಮಾಜ ಸೇವಕರುಗಳಾದ ಕೇಶವ ಅಂಚನ್, ಸುಧಾಕರ ಪೂಜಾರಿ, ನ್ಯಾ| ರವಿ ಕೋಟ್ಯಾನ್, ಜಗದೀಶ್ ಸುವರ್ಣ, ರಾಹುಲ್ ಸುವರ್ಣ, ಸಂತೋಷ್ ಸುವರ್ಣ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು. ಗಣೇಶ್ ಎರ್ಮಾಳ್ ಮತ್ತು ಬಳಗವು ಭಕ್ತಿ ರಸಮಂಜರಿ ಪ್ರಸ್ತುತ ಪಡಿಸಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here