Saturday 10th, May 2025
canara news

ಜು.30: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಸೌಹಾರ್ದ ಸಂಭ್ರಮ

Published On : 29 Jul 2017   |  Reported By : Rons Bantwal


ಮುಂಬಯಿ, ಜು. 29: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮಾತೃಸಂಸ್ಥೆಯೊಂದಿಗೆ ವಿಲೀನಿಕರಣ ಗೊಂಡ ಬಿಲ್ಲವ ಜಾಗೃತಿ ಬಳಗದೊಂದಿಗೆ ಸೌಹಾರ್ದ ಸಂಭ್ರಮ ಕಾರ್ಯಕ್ರಮ ಇದೇ ಜು.30ರ ಆದಿತ್ಯವಾರ ಸಂಜೆ 4.30 ಗಂಟೆಗೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಮುಲ್ಕಿ ಅಧ್ಯಕ್ಷ ಮತ್ತು ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣರ ಉಪಸ್ಥಿತಿ ಹಾಗೂ ಅಸೋಸಿಯೇಶನ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರಗಲಿದೆ.

     

Jaya C. Suvarna                          Nityananda D.Kotyan                            N T Poojary

ಬಿಲ್ಲವರ ಛೇಂಬರ್ ಆಫ್ ಕಾಮರ್ಸ್ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ, ಹಿರಿಯ ಉದ್ಯಮಿ ಮತ್ತು ಸಂಘಟಕರುಗಳಾದ ಸೂರು ಸಿ.ಕರ್ಕೇರ, ಸುರೇಶ್ ಎಸ್.ಪೂಜಾರಿ, ಕೆ.ಭೋಜರಾಜ್, ಬಿಲ್ಲವರ ಅಸೋಸಿ ಯೇಶನ್‍ನ ನಿಕಟಪೂರ್ವ ಅಧ್ಯಕ್ಷ ಎಲ್. ವಿ ಅಮೀನ್, ಉದ್ಯಮಿಗಳಾದ ಗಂಗಾಧರ್ ಅಮೀನ್ ನಾಸಿಕ್, ದಯಾನಂದ ಬೋಂಟ್ರಾ ಬರೋಡ, ಭಾರತ್ ಬ್ಯಾಂಕ್‍ನ ಮಾಜಿ ಕಾರ್ಯಾಧ್ಯಕ್ಷ ವಾಸುದೇವ ಆರ್. ಕೋಟ್ಯಾನ್, ಭಾರತ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ.ಸಾಲ್ಯಾನ್, ನ್ಯಾಯವಾದಿಗಳಾದ ಗೋಪಾಲ್ ಸಿ.ಪೂಜಾರಿ ಮತ್ತು ಆನಂದ ಪೂಜಾರಿ, ಅಂ. ಅಶ್ವಜಿತ್ ಹೆಜ್ಮಾಡಿ ಗೌರವ ಅತಿಥಿüಗಳಾಗಿ ಪಾಲ್ಗೊಳ್ಳಲಿದ್ದಾರೆ.

ಅಸೋಸಿಯೇಶನ್ ಮತ್ತು ವಿಲೀನ ಪೂರ್ವ ಜಾಗೃತಿ ಬಳಗದ ಎಲ್ಲಾ ಪದಾಧಿಕಾರಿಗಳು, ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಹಿತೈಷಿಗಳು, ದಾನಿಗಳು ಈ ಸಂಭ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಿಲ್ಲವ ಜಾಗೃತಿ ಬಳಗ ಸಂಸ್ಥೆಯು ಅಧಿಕೃತವಾಗಿ ಈಗಾಗಲೇ ಅಸೋಸಿಯೇಶನ್ ಜೊತೆಗೆ ವಿಲೀನ ಗೊಂಡಿದ್ದು ಅಸೋಸಿಯೇಶನ್‍ನ ಸದಸ್ಯತನದ ಪುನ:ರ್ ಜೋಡಣೆಯ ಯಾದಿಯ ಕೆಲಸವು ಅಂತಿಮ ಹಂತದಲ್ಲಿದೆ. ಸುಮಾರು 85 ವರ್ಷಗಳ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆ ಬಿಲ್ಲವರ ಅಸೋಸಿಯೇಶನ್ ಸದ್ಯ 22 ಸ್ಥಳೀಯ ಕಛೇರಿಗಳನ್ನು ಹೊಂದಿ ಸುಮಾರು 27,000 ಕ್ಕೂ ಅಧಿಕ ಸದಸ್ಯತ್ವ ಹೊಂದಿದೆ. ಅಸೋಸಿಯೇಶನ್‍ನ ಸಂಚಾಲಕತ್ವದ ಭಾರತ್ ಬ್ಯಾಂಕ್ 101 ಶಾಖೆಗಳನ್ನು ಹೊಂದಿದ್ದು ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ರಾಜ್ಯಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ಮಾಡುತ್ತಿದ್ದು ಒಟ್ಟು ವ್ಯವಹಾರ ರೂ.17,000 ಕೋಟಿ ರೂಪಾಯಿಗಳಿಗೂ ಮಿಕ್ಕಿದೆ.

ಸಂಸ್ಥೆಗಳ ವಿಲೀನಿಕರಣ ಸಂದರ್ಭ ಆಯೋಜಿಸಲಾಗಿರುವ ಸೌಹಾರ್ದ ಸಂಭ್ರಮದಲ್ಲಿ ನೃತ್ಯ ವಿಶೇಷ, ಸಾಕ್ಷ ್ಯ ಚಿತ್ರಗಳ ಪ್ರದರ್ಶನವಿದ್ದು ಕೇಂದ್ರ ಕಾರ್ಯಕಾರಿ ಸಮಿತಿಗೆ ಹೆಚ್ಚುವರಿ ನೂತನ ಪದಾಧಿಕಾರಿಗಳ ಸೇರ್ಪಡೆ ನಡೆಯಲಿದೆ ಎಂದು ಬಿಲ್ಲವರ ಎಸೋಸಿಯೇಶನ್‍ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ್ ಜಿ. ಅಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here