Saturday 10th, May 2025
canara news

ಜೋಗೇಶ್ವರಿಶ್ರೀ ಜಗದಂಬಾ ಕಾಳಭೈರವ ದೇವಸ್ಥಾನದಲ್ಲಿ ಅದ್ದೂರಿಯಾಗಿ ಜರುಗಿಸಲ್ಪಟ್ಟ ವಾರ್ಷಿಕ ನಾಗರ ಪಂಚಮಿ

Published On : 29 Jul 2017   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ ಜು.29: ಉಪನಗರ ಜೋಗೇಶ್ವರಿ ಪೂರ್ವದ ಕೇವ್ಸ್ ರಸ್ತೆಯಲ್ಲಿನ ಕೃಷ್ಣಾ ನಗರದ ಗುಂಫಾ ಟೆಕಡಿಯಲ್ಲಿನ ಮಹಾನಗರ ಮುಂಬಯಿ ಅಲ್ಲಿನ ಏಕೈಕ ಶ್ರೀ ಜಗದಂಬಾ ಕಾಳಭೈರವ ದೇವಸ್ಥಾನದಲ್ಲಿ ಇಂದಿಲ್ಲಿ ಗುರುವಾರ ಹೇಮಲಂಬಿನಾಮ ಸಂವತ್ಸರದ ಶ್ರಾವಣ ಶುದ್ಧ ಪಂಚಮಿ ಶುಭಾವಸರÀದಲ್ಲಿ ಬೆಳಿಗ್ಗೆಯಿಂದ ಶ್ರೀ ನಾಗರ ಪಂಚಮಿಯನ್ನು ಅದ್ದೂರಿಯಾಗಿ ಆಚರಿಸಲ್ಪಟ್ಟಿತು.

ದೇವಸ್ಥಾನದ ಪ್ರಧಾನ ಅರ್ಚಕ ಪಾದೂರು ನರಹರಿ ತಂತ್ರಿ ತಮ್ಮ ಪೌರೋಹಿತ್ಯದಲ್ಲಿ ವಿವಿಧ ಪೂಜಾಧಿ ಕಾರ್ಯಗಳನ್ನು ನೆರವೇರಿಸಿ ನೆರೆದ ಭಕ್ತರನ್ನು ಅನುಗ್ರಹಿಸಿದರು. ವಿಶ್ವಕುಮಾರ ತಂತ್ರಿ, ಮಧುಸೂದನ ಭಟ್, ಶ್ರಾವಣ ಭಟ್, ರಘುಚಂದ್ರ ಆಚಾರ್ಯ ಪೂಜಾಧಿಗಳಿಗೆ ಸಹಯೋಗವ್ನ್ನಿತ್ತರು.

ನಾಗರ ಪಂಚಮಿಯ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಅಶ್ಲೇಷ ಬಲಿ, ನಾಗತಂಬಿಲ, ನಾಗತನು, ಸೀಯಾಳ, ಪಂಚಾಮೃತ ಹಾಗೂ ಹಾಲಿನ ಅಭಿಷೇಕ, ಮಹಾಪೂಜೆ ಸೇರಿದಂತೆ ಅನೇಕ ಧಾರ್ಮಿಕ ವಿಧಿಗಳು ನೆರವೇರಿದ್ದು ಬಳಿಕ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.

ಈ ಶುಭಾವಸರದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ಪಿ.ಪೂಜಾರಿ, ಕೋಶಾಧಿಕಾರಿ ಶೇಖರ್ ಕರ್ಕೇರ, ಉಪಾಧ್ಯಕ್ಷ ಹೆಚ್.ಬಾಬು ಪೂಜಾರಿ, ಸದಸ್ಯರುಗಳಾದ ಜಿ.ಟಿ ಆಚಾರ್ಯ, ಗೋವಿಂದ ಎ.ಶೆಟ್ಟಿ, ಮುದ್ದು ಸಿ.ಸುವರ್ಣ, ಸುಂದರ್ ಸಿ.ಪೂಜಾರಿ, ಡಿ.ಕೆ ಕುಂದರ್, ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಪೆÇಸ್ರಾಲ್ ಸದಾಶಿವ ಕೊಟ್ಯಾನ್, ಉಪಾಧ್ಯಕ್ಷ ಭುಜಂಗ ಅಮೀನ್, ಸಂಚಾಲಕ ಸದಾನಂದ ಅಮೀನ್, ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಸುಶೀಲಾ ಎಸ್.ಪೂಜಾರಿ, ಉಪಕಾರ್ಯಾಧ್ಯಕ್ಷೆ ಕಲಾವತಿ ಡಿ.ಪೂಜಾರಿ, ಸಂಚಾಲಕಿ ವನಿತಾ ಜೆ.ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು, ಮಹಿಳಾ ಮಂಡಳಿ ಹಾಗೂ ಸದಸ್ಯರು, ಪ್ರೇಮನಾಥ ಶೆಟ್ಟಿ (ವೀರಕೇಸರಿ), ಜಯಂತ್ ಸುವರ್ಣ ಸೇರಿದಂತೆ ಅಪಾರ ಸದ್ಭಕ್ತರು ಭಾಗವಹಿಸಿ ಶ್ರೀ ನಾಗದೇವರ ಕೃಪೆಗೆ ಪಾತ್ರರಾದರು. ಉಪಸ್ಥಿತ ಭಕ್ತರು ಪೂಜೆ, ಭಜನೆ ನೆರವೇರಿಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here