Saturday 10th, May 2025
canara news

ಬಂಟರ ಸಂಘದ ಶ್ರೀಮಹಾವಿಷ್ಣು ದೇವಸ್ಥಾನದ ನಾಗದೇವರ ಸನ್ನಿಧಿಯಲ್ಲಿ ಜ್ಞಾನ ಮಂದಿರ ಸಮಿತಿಯಿಂದ ಸಂಭ್ರಮಿಸಲ್ಪಟ್ಟ ನಾಗರಪಂಚಮಿ

Published On : 29 Jul 2017   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಜು.29 ಬಂಟರ ಸಂಘ ಮುಂಬಯಿ ಇದರ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಜ್ಞಾನ ಮಂದಿರ (ದೇವಾಲಯ) ಸಮಿತಿಯಿಂದ ದೇವಸ್ಥಾನದ ಆವರಣದಲ್ಲಿನ ನಾಗದೇವರ ಸನ್ನಿಧಿಯಲ್ಲಿ ವಾರ್ಷಿಕ ನಾಗರ ಪಂಚಮಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ರೈ ಸಾರಥ್ಯದಲ್ಲಿ ಆಚರಿಸಲ್ಪಟ್ಟ ವಾರ್ಷಿಕ ನಾಗರ ಪಂಚಮಿಯಲ್ಲಿ ಪ್ರತಿಷ್ಠಾಪಿತ ನಾಗದೇವರಿಗೆ ಪುಷ್ಪಾಲಂಕೃತಗೊಳಿಸಿ ಸ್ವರ್ಣ ಕವಚ ಹೊದಿಸಿ ದೇವಸ್ಥಾನದ ಪ್ರಧಾನ ಆರ್ಚಕ ವಿದ್ವಾನ್ ಅರವಿಂದ ಬನ್ನಿಂತ್ತಾಯ ವಿವಿಧ ಪೂಜಾಧಿಗಳನ್ನು ನೆರವೇರಿಸಿ ಪ್ರಸಾದ ವಿತರಿಸಿ ಅನುಗ್ರಹಿಸಿದರು.

ಮಹಾನಗರದ ಹಿರಿಯ ಉದ್ಯಮಿ ಜಯರಾಮ ಪಿ.ಶೆಟ್ಟಿ ಮತ್ತು ವಿನೋದಾ ಜೆ.ಪಿ ಶೆಟ್ಟಿ ದಂಪತಿಗಳು ಈ ಬಾರಿಯ ನಾಗರ ಪಂಚಮಿಯ ವಿಶೇಷ ಸೇವಾಥಿರ್üಗಳಾಗಿದ್ದು ಸರ್ವಸೇವೆ, ಅಶ್ಲೇಷಬಲಿ, ನಾಗತಂಬಿಲ ಸೇರಿದಂತೆ ಅನೇಕ ಪೂಜಾಕೈಂಕರ್ಯಗಳು ನಡೆಸಲ್ಪಟ್ಟವು. ಕೃಷ್ಣ ಭಟ್, ನರಸಿಂಹ ಮಯ್ಯ, ಪ್ರಸಾದ್ ಭಟ್, ರಾಜೇಶ್ ಭಟ್, ವೆಂಕಟೇಶ್ ಕಾರಂತ ಮತ್ತಿತರ ಪುರೋಹಿತರು ವಿವಿಧ ಪೂಜಾಧಿಗಳನ್ನು ನೆರವೇರಿಸಿದರು.

ಸಂತೋಷ್ ಕೇಟರರ್ಸ್‍ನ ರಾಘು ಪಿ.ಶೆಟ್ಟಿ ಮತ್ತು ಸಂತೋಷ್ ಎಸ್.ಶೆಟ್ಟಿ ಅವರ ಸೇವಾರ್ಥ ಪ್ರಸಾದ ರೂಪಿತ ಫಲಹಾರ ನೀಡಿದ್ದು, ಈ ಸಂದರ್ಭದಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ನಿಕಟಪೂರ್ವ ಕಾರ್ಯಾಧ್ಯಕ್ಷೆ ಲತಾ ಪಿ.ಶೆಟ್ಟಿ, ಜ್ಞಾನ ಮಂದಿರ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಜಗನ್ನಾಥ ಎನ್.ರೈ, ದಿವಾಕರ ಬಿ.ಶೆಟ್ಟಿ ಕುರ್ಲಾ, ಬಂಟ್ಸ್ ಸಂಘ ಮುಂಬಯಿ ಇದರ ಪ್ರಧಾನ ವ್ಯವಸ್ಥಾಪಕ ಪ್ರವೀಣ್ ಎಸ್.ಶೆಟ್ಟಿ ಸೇರಿದಂತೆ ಸಂಘದ ಇತರ ಪದಾಧಿಕಾರಿಗಳು, ವಿವಿಧ ಪ್ರಾದೇಶಿಕ ಸಮಿತಿಗಳ ಮುಖ್ಯಸ್ಥರು, ಸದಸ್ಯರನೇಕರು ಹಾಜರಿದ್ದು ಶ್ರೀ ನಾಗದೇವರಿಗೆ ಪೂಜಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here