Saturday 10th, May 2025
canara news

ಬಿಲ್ಲವರ ಅಸೋಸಿಯೇಶನ್ ಗೋರೆಗಾಂವ್ ಸ್ಥಳೀಯ ಕಚೇರಿಯಿಂದ ವಾರ್ಷಿಕ ವಿದ್ಯಾಥಿ೯ ವೇತನ

Published On : 31 Jul 2017   |  Reported By : Canaranews Network


ಮುಂಬಯಿ, ಜು.30: ಬಿಲ್ಲವರ ಅಸೋಸಿಯೇಶನ್ ಗೋರೆಗಾಂವ್ ಸ್ಥಳೀಯ ಕಚೇರಿ ವತಿಯಿಂದ ವರ್ಷಂಪ್ರತಿ ಆಚರಿಸುವ ಗುರುಪೂಜೆ ಕಳೆದ ಗುರುವಾರ (ಜು.27) ಸಂಜೆ ಗೋರೆಗಾಂವ್ ಪಶ್ಚಿಮದಲ್ಲಿನ ಸ್ಥಳೀಯ ಅಸೋಸಿಯೇಶನ್‍ನ ಕಚೇರಿಯಲ್ಲಿ ನೇರವೇರಿತು.

ಗುರುಪೂಜೆಯ ನಂತರ ಪರಿಸರದ ಆಥಿರ್sಕವಾಗಿ ಹಿಂದುಳಿದ ಸಮಾಜ ಬಾಂಧವರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ, ವಿದ್ಯಾಥಿರ್sವೇತನ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಕೇಂದ್ರ ಸಮಿತಿ ಉಪಾಧ್ಯಕ್ಷ ಶಂಕರ ಡಿ.ಪೂಜಾರಿ ಅಧ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿsಯಾಗಿ ಸಿಎ| ಅಭಿಷೇಕ್, ಅಸೋಸಿಯೇಶನ್‍ನ ವಿದ್ಯಾ ಉಪಸಮಿತಿ ಕಾರ್ಯಾಧ್ಯಕ್ಷ ಭಾಸ್ಕರ ವಿ.ಬಂಗೇರ, ಕಾರ್ಯದರ್ಶಿ ವಿಶ್ವನಾಥ ತೋನ್ಸೆ, ಸ್ಥಳೀಯ ಸಮಿತಿ ಗೌರವ ಕಾರ್ಯಧ್ಯಕ್ಷ ಜೆ.ವಿ ಕೋಟ್ಯಾನ್, ಕಾರ್ಯಾಧ್ಯಕ್ಷ ಸಚೀಂದ್ರ ಕೆ.ಕೋಟ್ಯಾನ್, ಉಪ ಕಾರ್ಯಾ ಧ್ಯಕ್ಷ ರಮೇಶ್ ಸುವರ್ಣ ಉಪಸ್ಥಿತರಿದ್ದು ಫಲಾನುಭವಿ ಮಕ್ಕಳಿಗೆ ಶೈಕ್ಷಣಿಕ ನೆರವು ವಿತರಿಸಿ ಶುಭಾರೈಸಿದರು.

ಸಿಎ| ಅಭಿಷೇಕ್ ಮಾತನಾಡಿ ಫಲಾನುಭವಿ ವಿದ್ಯಾಥಿರ್sಗಳನ್ನು ಹಾಗೂ ಸಂಘಟಿಗರನ್ನು ಅಭಿನಂದಿಸಿ ತನ್ನಿಂದಾದ ಸಹಕಾರವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.

ವಿಶ್ವನಾಥ ತೋನ್ಸೆ ಮಾತನಾಡಿ ನಮ್ಮಸಂಸ್ಥೆಯು ಗುರುನಾರಾಯಣ ಸ್ವಾಮಿ ಅವರ ವಿಚಾರದಾರೆಯಂತೆ ಸಮಾಜದ ಯಾರು ವಿದ್ಯೆಯಿಂದ ವಂಚಿತರಾಗಬಾರದು ಎಂದು ಶೈಕ್ಷಣಿಕ ನೆರವು ದತ್ತು ಸ್ವೀಕಾರದ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪ್ರತಿ ವರುಷ ಮುಂಬಯಿ ಹಾಗೂ ಊರಿನಲ್ಲಿ ಲಕ್ಷಾಂತರ ಹಣವನ್ನು ವಿದ್ಯಾಭ್ಯಾಸಕ್ಕೆ ವ್ಯಯ ಮಾಡುತ್ತೇವೆ.

ಭಾಸ್ಕರ ಬಂಗೇರ ಮಾತನಾಡಿ ಇಂದಿನ ಮಕ್ಕಳು ತುಂಬಾ ಜಾಣರು ಅವರ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪೆÇ್ರೀತ್ಸಾಹಿಸಬೇಕು. ಸರಿಯಾದ ಮಾರ್ಗದರ್ಶನ ನೀಡಿ ಬೆಳೆಸಬೇಕು. ಸಹವಾಸ ದೋಷದಿಂದ ಮಕ್ಕಳು ಅಡ್ಡ ದಾರಿ ಇಡಿಯದಂತೆ ಅವರ ಮೇಲೆ ನಿಗ ಇಡಬೇಕು ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

ಪರಿಸರದ ಸಮಾಜ ಬಾಂಧವರು ನೀಡಿದ ದೇಣಿಗೆಯನ್ನು ಬಡ ಕುಟುಂಬಗಳನ್ನು ಗುರುತಿಸಿ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಾಮಾಣಿಕವಾಗಿ ನೀಡುತ್ತೇವೆ. ಇದಕ್ಕೆ ಎಲ್ಲರ ಸಹಕರ ಅಗತ್ಯ. ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು ಮಕ್ಕಳ ಭವಿಷ್ಯ ನಿರೂಪಿಸುವುದರಲ್ಲಿ ತಾಯಿ ಪಾತ್ರ ದೊಡ್ಡರು. ಕಚೇರಿಯಲ್ಲಿ ಜರಗುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಮಹಿಳೆಯರು ಸಹಕರಿಸಿದ್ದಾರೆ ಎಂದು ಕಾರ್ಯಾಧ್ಯಕ್ಷ ಸಚೀಂದ್ರ ಕೋಟ್ಯಾನ್ ತಿಳಿಸಿದರು.

ಸಂಸ್ಥೆ ನೀಡುವ ಶೈಕ್ಷಣಿಕ ನೆರವು ಗುರು ಪ್ರಸಾದವೆಂದು ತಿಳಿದು ಅದನ್ನು ಅವರು ಸದುಪಯೋಗ ಪಡಿಸಬೇಕು. ಫಲಾನುಭವಿ ವಿದ್ಯಾಥಿರ್sಗಳು ಶಿಕ್ಷಣದ ಮೂಲಕ ಗಮನಾರ್ಹ ಸಾಧನೆ ಮಾಡಬೇಕು ಮತ್ತು ಸಮಾಜದ ಋಣವನ್ನು ಮರೆಯಬಾರದು. ಸ್ಥಳೀಯ ಕಚೇರಿ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಷಯ ಎಂದು ಅಧ್ಯಕ್ಷೀಯ ನುಡಿಗಳನ್ನಾನಾಡಿ ಶಂಕರ ಪೂಜಾರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಕಚೇರಿ ಕೋಶಾಧಿಕಾರಿ ಮೋಹನ್ ಬಿ.ಅಮೀನ್, ಜತೆ ಕಾರ್ಯದರ್ಶಿ ಸತೀಶ್ ಜೆ.ಕೋಟ್ಯಾನ್, ಜತೆ ಕೋಶಾಧಿಕಾರಿ ದಿನೇಶ್ ಎ.ಪೂಜಾರಿ, ಸಮಿತಿ ಸದಸ್ಯರಾದ ಪದ್ಮಾವತಿ ಎಲ್.ಪೂಜಾ ರಿ, ವಿಠ್ಠಲ್ ಪೂಜಾರಿ, ಟಿ.ವಿ.ಪೂಜಾರಿ, ಆನಂದ ಪಿ.ಐಲ್, ಜನಾರ್ಧನ್ ಕೋಟ್ಯಾನ್, ನವೀನ್ ಪೂಜಾರಿ, ವಿದ್ಯಾ ಸಮಿತಿ ಸದಸ್ಯ ಗಣೇಶ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಸುರೇಶ್ ಪೂಜಾರಿ ಅವರ ಪುರೋಹಿತ್ವದಲ್ಲಿ ಗುರು ಪೂಜೆ ನೇರವೇರಿದ್ದು ಮಾ| ಅನಿಕೇತ್ ಪೂಜಾರಿ ಗುರುಪೂಜೆ ಸೇವೆಗೈದರು. ಸುಚಾಲತ ಪೂಜಾರಿ ಅತಿಥಿsಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಶಶಿಧರ ಬಂಗೇರ ನಿರೂಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here