Saturday 10th, May 2025
canara news

`ರಚನಾ' ನೂತನ ಅಧ್ಯಕ್ಷರಾಗಿ ಸ್ಟ್ಯಾನಿ ಆಲ್ವಾರಿಸ್ ಆಯ್ಕೆ

Published On : 01 Aug 2017   |  Reported By : Rons Bantwal


ಮುಂಬಯಿ, ಜು.31: ಕ್ರೈಸ್ತ ಉದ್ಯಮಿಗಳ ಒಕ್ಕೂಟ ಮಂಗಳೂರು `ರಚನಾ' ಇದರ 2017-19 ಸಾಲಿನ ಅಧ್ಯಕ್ಷರಾಗಿ ಬೊಂದೇಲ್‍ನ ಯುವ ಮುಖಂಡ ಸ್ಟ್ಯಾನಿ ಆಲ್ವಾರಿಸ್ ಆಯ್ಕೆಯಾಗಿದ್ದಾರೆ.

ನಗರದ ವಾಲೆನ್ಸಿಯಾ ಚರ್ಚ್ ಸಭಾಂಗಣದಲ್ಲಿ ಕಳೆದ ಭಾನುವಾರ ನಡೆದ ಸಂಘಟನೆಯ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು.

ಇತರೆ ಪದಾಧಿಕಾರಿಗಳಾಗಿ ಎಲಿಯಾಸ್ ಸಾಂಕ್ತಿಸ್ (ಉಪಾಧ್ಯಕ್ಷ), ಅನಿಲ್ ವಾಸ್ (ಕಾರ್ಯದರ್ಶಿ), ಫೆಲಿಕ್ಸ್ ಪಿಂಟೊ (ಖಜಾಂಚಿ), ನೆಲ್ಸನ್ ಮೊಂತೇರೊ (ಜತೆ ಕಾರ್ಯದರ್ಶಿ), ಗಿಲ್ಬರ್ಟ್ ಡಿ'ಸೋಜ (ನಿಕಟಪೂರ್ವ ಅಧ್ಯಕ್ಷ)

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಾನ್ ಮೊಂತೇರೊ, ಲಾರೆನ್ಸ್ ಡಿಸೋಜ, ಯುವ್ಲಾಲಿಯಾ ಡಿಸೋಜ, ಲೂವಿಸ್ ಲೋಬೊ, ವಿನ್ಸೆಂಟ್ ಕುಟಿನ್ಹಾ, ಜೇಮ್ಸ್ ಮಾಡ್ತಾ, ಅನಿಲ್ ಲೋಬೊ ಇವರನ್ನು ಸಭೆಯು ಆಯ್ಕೆಗೊಳಿಸಿತು.

ಸ್ಟ್ಯಾನಿ ಆಲ್ವಾರಿಸ್: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿಯಾಗಿ ಮಂಗÀಳೂರು ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ನ ಬೆಳವಣಿಗೆಗೆ ದುಡಿದಿದ್ದಾರೆ. ಮಾಂಡ್ ಸೊಭಾಣ್ ಕೊಂಕಣಿ ಸಾಂಸ್ಕøತಿಕ ಸಂಘಟನೆಯ ಉಪಾಧ್ಯಕ್ಷರಾಗಿ ಕೊಂಕಣಿ ಭಾಷೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಶಾಲೆಗಳಲ್ಲಿ ಕೊಂಕಣಿ ಕಲಿಕೆಗೆ ಸಹಕಾರಿಯಾಗಲು ಸ್ಥಾಪಿಸಲ್ಪಟ್ಟ ಸರಕಾರೇತರ ಸಂಸ್ಥೆ ಕೊಂಕಣಿ ಪ್ರಚಾರ ಸಂಚಾಲನ ಇದರ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸಿದ್ದಾರೆ.

ಹಲವಾರು ಕೊಂಕಣಿ ನಾಟಕಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ಕೊಂಕಣಿಯ ಹಲವಾರು ಚಲನಚಿತ್ರಗಳಲ್ಲಿ ಕೂಡಾ ನಟಿಸಿ ಯಶಸ್ವಿ ನಟನೆನಿಸಿದ್ದಾರೆ. ಇತ್ತೀಚೆಗೆ ಬಂದ ನಶಿಬಾಚೊ ಖೆಳ್, ಏಕ್ ಆಸ್ಲ್ಯಾರ್ ಏಕ್ ನಾ, ಅಶೆಂ ಜಾಲ್ಯಾರ್ ಕಶೆಂ ಮತ್ತು ಸೊಫಿಯಾ ಚಿತ್ರಗಳಲ್ಲಿ ಪ್ರಮುಖ ಭೂಮಿಕೆಯನ್ನು ನಿರ್ವಹಿಸಿದ್ದಾರೆ. ಸ್ಟ್ಯಾನಿ ಆಲ್ವಾರಿಸ್ ಕೊಂಕಣಿ, ಕನ್ನಡ ಮತ್ತು ತುಳು ಭಾಷೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿ ಯಶಸ್ವಿಯಾಗಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here