Saturday 10th, May 2025
canara news

ಖಾರ್ ಪೂರ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯಿಂದ ಪಠ್ಯಪುಸ್ತಕಗಳ ವಿತರಣೆ

Published On : 02 Aug 2017   |  Reported By : Rons Bantwal


ಶೈಕ್ಷಣಿಕ ಪೆÇ್ರೀತ್ಸಾಹ ಸರ್ವೋನ್ನತವಾದದ್ದು : ಸಿಎ| ಪ್ರಕಾಶ್ ಶೆಟ್ಟಿ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,: ಮುಂಬಯಿ ಉಪನಗರದ ಖಾರ್ ಪೂರ್ವದ ಜವಹಾರ್‍ನಗರ್‍ನ ಪಹೇಲ್ವಾನ್ ಚಾಳ್‍ನ ತುಳು ಕನ್ನಡಿಗರ ಸಂಚಾಲಕತ್ವದ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯು ಇಂದಿಲ್ಲಿ ಆದಿತ್ಯವಾರ ಸಾಯಿಧಾಮ್ ಆವರಣದಲ್ಲಿ ಬಡ ಮತ್ತು ಅವಶ್ಯಕ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳ ವಿತರಿಸಿತು.

ಸೇವಾ ಸಮಿತಿಯ ಲೆಕ್ಕಪರಿಶೋಧಕ ಸಿಎ| ಪ್ರಕಾಶ್ ಶೆಟ್ಟಿ ಅವರು ತನ್ನ ಮಾತೃಶ್ರೀ ದಿವಂಗತ ಶ್ರೀಮತಿ ಕಮಲಾ ಸೀನ ಶೆಟ್ಟಿ ಸ್ಮಾರಕರ್ಥ ಧರ್ಮಾರ್ಥವಾಗಿ ಕೊಡಮಾಡಿದ ಕಾರ್ಯಕ್ರಮದಲ್ಲಿ ಶಿವ ಸೇನೆಯ ಮಾಜಿ ನಗರ ಸೇವಕ ರಾಜು ಭೂತ್ಕÀರ್, ಸೇವಾ ಸಮಿತಿ ಅಧ್ಯಕ್ಷ ಶಂಕರ್ ಕೆ.ಸುವರ್ಣ, ಮಾಜಿ ಕಾರ್ಯಧ್ಯಕ್ಷ ಭೋಜ ಸಿ.ಪೂಜಾರಿ, ಜೊತೆ ಕೋಶಾಧಿಕಾರಿ ನಾಗೇಶ್ ಸುವರ್ಣ, ಜನಾರ್ಧನ್ ಎನ್.ಸಾಲಿಯಾನ್, ಅರ್ಚಕ ಕೃಷ್ಣ ಕುಲಾಲ್, ಉಪಸ್ಥಿತರಿದ್ದು ಮಹಿಳಾ ಮಂಡಳಿ ಮುಖ್ಯಸ್ಥೆ ಕೇಸರಿ ಬಿ.ಅಮೀನ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿಶಾ ಪ್ರಕಾಶ್ ಶೆಟ್ಟಿ ದಂಪತಿ ಮಕ್ಕಳಿಗೆ ಪಠ್ಯಪುಸ್ತಕಗಳನ್ನು ವಿತರಿಸಿ ಶುಭಾರೈಸಿದರು.

ಮನೋವಿಕಾಸನಕ್ಕೆ ವಿದ್ಯಾರ್ಜನೆ ಇಂಧನವಿದ್ದಂತೆ. ಶೈಕ್ಷಣಿಕ ನೆರವು ಇಂತಹ ಇಂಧನವಾದಗ ಯಾವನೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಾರರÀು. ವಿದ್ಯಾವಂತರಾಗುವಲ್ಲಿ ಶೈಕ್ಷಣಿಕ ಪೆÇ್ರೀತ್ಸಾಹ ಸರ್ವೋನ್ನತವಾದದ್ದು. ಆದುದರಿಂದ ಸಾಮಾಜಿಕ ಚಿಂತನೆಯ ಸಂಘಟನೆಗಳು ಇಂತಹ ಪುಣ್ಯ ಕಾಯಕದಲ್ಲಿ ಸಕ್ರೀಯರಾಗಬೇಕು ಎಂದು ಶಿಕ್ಷಣಪ್ರೇಮಿ ಪ್ರಕಾಶ್ ಶೆಟ್ಟಿ ಕರೆಯಿತ್ತರು.

ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವೈಜ್ಞಾನಿಕ ಶಿಕ್ಷಣ ಪೆÇ್ರೀತ್ಸಾಹದ ಅವಶ್ಯ ಹೆಚ್ಚಾಗಿದೆ. ಇಂತಹ ಕಲಿಕಾ ವ್ಯವಸ್ಥೆಯಿಂದ ಮಕ್ಕಳಲ್ಲಿ ಮನೋಬಲ ವಿಕಾಸ ಸಾಧ್ಯವಾಗ ಬಲ್ಲದು ಎಂದು ಶಂಕರ್ ಸುವರ್ಣ ತಿಳಿಸಿದರು.

ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಯುವ ವೃಂದದ ಕಾರ್ಯದಕ್ಷ ವಿಜಯ್ ಸಾಲಿಯಾನ್, ಜೊತೆ ಕೋಶಾಧಿಕಾರಿ ವಿನೋದ್ ವೈ.ಹೆಜಮಾಡಿ. ಜೊತೆ ಕಾರ್ಯದರ್ಶಿ ಯುವರಾಜ್ ಚಿನ್ಮಯ ಶೆಟ್ಟಿ, ರಮೇಶ್ ಪೂಜಾರಿ, ಜಯರಾಮ ಶೆಟ್ಟಿ, ಕಾರ್ಯಕರ್ತರಾದ ಅಶೋಕ್ ಶೆಟ್ಟಿ, ಹರೀಶ್ ಶೆಟ್ಟಿ, ರವಿ ನಾಯಕ್, ಅಸೀಶ್ ಎಸ್.ಸಾಲಿಯಾನ್, ಸಚಿನ್ ಬಿ.ಪೂಜಾರಿ. ದೀಕ್ಷಿತ್ ದೇವಾಡಿಗ, ಅಭಿಷೇಕ್ ಕೋಟ್ಯಾನ್, ಮಹಿಳಾ ಮಂಡಳಿ ಉಪ ಕಾರ್ಯಧ್ಯಕ್ಷೆ ಸರಸ್ವತಿ ಭೋಜ ಪೂಜಾರಿ, ಕಾರ್ಯದರ್ಶಿ ರೇವತಿ ಶೆಟ್ಟಿ, ಶೋಭಾ ಪೂಜಾರಿ, ಪುಷ್ಪ ಅಂಚನ್, ವಿಮಲಾ ರವಿ ಕೋಟ್ಯಾನ್, ಶೋಭಾ ಸಾಲಿಯಾನ್ ಮತ್ತಿತರ ಪದಾಧಿಕಾರಿಗಳು, ಮಹಿಳಾ ಮಂಡಳಿ, ಯುವ ವಿಭಾಗದ ಸದಸ್ಯರನೇಕರು ಸೇರಿದಂತೆ ವಿವಿಧ ಉಪಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು.

ಸೇವಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಯೋಗೆಶ್ ಕೆ.ಹೆಜ್ಮಾಡಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಜೊತೆ ಕಾರ್ಯದರ್ಶಿ ರಮೇಶ್ ಪೂಜಾರಿ ಧನ್ಯವದಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here