Saturday 10th, May 2025
canara news

ವ್ಹಾರೇ..ವ್ಹಾ ಅಮ್ಚೊ ಖೆಳ್ ಗಾದ್ಯಾಂತ್ ಖೆಳ್ಯಾಂ "

Published On : 03 Aug 2017   |  Reported By : Rons Bantwal


ಉಳ್ಳಾಲ: ಕ್ರೀಡಾ ಸ್ಪರ್ಧೆಗಳಲ್ಲಿ ಗುಂಪಾಗಿ ಆಡುವ ಮೂಲಕ ಶರೀರಕ್ಕೆ ವ್ಯಾಯಾಮ ಸಿಗುತ್ತದೆ. ಈ ನಿಟ್ಟಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ನಡೆಯುವ ಗದ್ದೆಯಲ್ಲಿ ಒಂದು ದಿನ ಸ್ಪರ್ಧೆಯು ಎಲ್ಲರಿಗೂ ಸಹಕಾರಿಯಾಗಲಿದೆ ಎಂದು ಪೀಟರ್ ಫೆರ್ನಾಂಡಿಸ್ ಅಭಿಪ್ರಾಯಪಟ್ಟರು.

ಅವರು ಭಾರತೀಯ್ ಕಥೋಲಿಕ್ ಯುವ ಸಂಚಾಲನ್ ತೋಕುರ್ ಘಟಕ್ ಇದರ ವತಿಯಿಂದ " ವ್ಹಾರೇ..ವ್ಹಾ ಅಮ್ಚೊ ಖೆಳ್ ಗಾದ್ಯಾಂತ್ ಖೆಳ್ಯಾಂ " ಕಾರ್ಯಕ್ರಮವು ಭಾನುವಾರದಂದು ತೋಕೂರಿನಲ್ಲಿ ನಡೆಯಿತು.

ಆಷಾಢಮಾಸದಲ್ಲಿ ವಿಪರೀತವಾದ ಮಳೆಯಿಂದಾಗಿ ಕೃಷಿ ಪ್ರಧಾನವಾದ ಕಡೆಗಳಲ್ಲಿ ಕೃಷಿ ಕೆಲಸಕ್ಕೆ ವಿರಾಮವನ್ನು ಹಾಕಲಾಗುತ್ತದೆ ಇಂತಹ ಸಂಧರ್ಭದಲ್ಲಿ ಸಮಯ ಕಳೆಯುವ ದೃಷ್ಟಿಯಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದರು. ಈ ಮೂಲಕ ಇಂತಹ ಗದ್ದೆಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸ್ಪರ್ಧೆಯನ್ನು ಏರ್ಪಡಿಸಿದ ಐಸಿವೈಎಂ ಇವರ ಕಾರ್ಯ ಶ್ಲಾಘನೀಯ ಎಂದರು.
ಕ್ಯಾಥಲಿಕ್ ಸಭಾ ಮಂಗಳೂರು ಇದರ ಅಧ್ಯಕ್ಷ ಅನಿಲ್ ಲೋಬೋ, ತೋಕೂರು ಸಂತ ಸೆಬೆಸ್ತಿಯನ್ನರ ಇಗರ್ಜಿಯ ಉಪಾಧ್ಯಕ್ಷ ಜೆರಾಲ್ಡ್ ಡಿಸೋಜ ಮುಖ್ಯ ಅತಿಥಿಯಾಗಿದ್ದರು.

ಪ್ರಿಯಾ, ಜ್ಯೋತಿ ಸಲ್ದಾನ್ಹ, ಐಸಿವೈಎಂ ಇದರ ಅಧ್ಯಕ್ಷ ಎಲ್‍ರೋಯ್ ಸಲ್ದಾನ್ಹ, ಅನೀಶ್ ಡಿಸೋಜ, ಐರಿನ್ ಡಿಸೋಜ, ಪ್ರಕಾಶ್ ಡಿಸೋಜ, ಪ್ರೆಸಿಲ್ಲಾ ವೇಗಸ್ ಉಪಸ್ಥಿತರಿದ್ದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here