Saturday 10th, May 2025
canara news

ರಾಷ್ಟ್ರಪತಿ ಭವನದಲ್ಲಿ ಭರತನಾಟ್ಯಗೈದ ಕು| ಪ್ರಿಯಂಜಲಿ ರಾವ್

Published On : 03 Aug 2017   |  Reported By : Rons Bantwal


ಮುಂಬಯಿ, ನವದೆಹಲಿ ಅಲ್ಲಿನ ರಾಷ್ಟ್ರಪತಿ ಭವನದಲ್ಲಿ ಇತ್ತೀಚೆÉಗೆ ನಡೆಸಲ್ಪಟ್ಟ ರಾಷ್ಟ್ರಪತಿ ಪ್ರಣಾಬ್ ಮುಖಾರ್ಜಿ ವಿದಾಯ ಕೂಟದಲ್ಲಿ ಆಯೋಜಿಸಲಾಗಿದ್ದ ಭವ್ಯ ನೃತ್ಯಾವಳಿ ಕಾರ್ಯಕ್ರಮದಲ್ಲಿ ನೃತ್ಯರಂಜನಿ ಫೈನ್ ಆರ್ಟ್ಸ್ ಅಕಾಡೆಮಿ ಇದರ ವಿದ್ಯಾಥಿü9ನಿ, ಮಹಾನಗರದಲ್ಲಿನ ಅಪ್ರತಿಮ ಕಲಾವಿದೆ, ತುಳುಕನ್ನಡತಿ, ನೃತ್ಯ ಕಲಾ ವಸುಧರೆ ಕು| ಪ್ರಿಯಂಜಲಿ ರಾವ್ ಭರತನಾಟ್ಯಗೈದು ಪ್ರಶಂಸೆಗೆ ಪಾತ್ರರಾದರು.

ನೃತ್ಯಗುರು ಪ್ರದ್ಮಶ್ರೀ ಪದ್ಮಭೂಷಣ ಡಾ| ಸರೋಜ್ ವೈದ್ಯನಾಥನ್ ಅವರ ಜೊತೆಗಿನ ಒಂದು ತಿಂಗಳ ನಮಮಿ ಗಂಗೇ ಪಾಂಡಿತ್ಯ ವಾಸ್ತವ್ಯದಲ್ಲಿ ಪಾಲ್ಗೊಂಡು ಪ್ರಶಂಸೆಗೆ ಪಾತ್ರವಾಗಿದ್ದ ಈಕೆ ಐಐಟಿ ಮೂಡ್ ಇಂಡಿಗೋ ಶಾಸ್ತ್ರೀಯ ನೃತ್ಯ ಸ್ಪರ್ಧೆಯ ವಿಜೇತೆಯಾಗಿದ್ದಾರೆ. ಡಾ| ಸರೋಜ್ ಅವರ ಆಹ್ವಾನದ ಮೇರೆಗೆ ಪ್ರಿಯಂಜಲಿ ವಿವಿಧ ನೃತ್ಯ ಪ್ರದರ್ಶಿಸಿದ್ದು ಕಾರ್ಯಕ್ರಮವನ್ನು ವೀಕ್ಷಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಸಚಿವೆ ಸ್ಮೃತಿ ಇರಾನಿ ಇನ್ನಿತರ ಗಣ್ಯರು ಸಂತಸ ವ್ಯಕ್ತ ಪಡಿಸಿ ಅಭಿನಂದಿಸಿದರು.

ಶ್ರೀಮತಿ ರೇವತಿ ಶ್ರೀನಿವಾಸ್ ರಾಘವನ್ ಇವರ ಶಿಷ್ಯೆ ಆಗಿರುವ ಕು| ಪ್ರಿಯಂಜಲಿ ರಾವ್ ಈಕೆ ಖಾರ್ ಪಶ್ಚಿಮದ ನಿವಾಸಿ ವಿದ್ಯಾ ಆರ್.ರಾವ್ ದಂಪತಿ ಸುಪುತ್ರಿಯಾಗಿದ್ದು, ಪ್ರಸಿದ್ದಹ ಸಮಾಜ ಸೇವಕರುಗಳಾದ ಎ.ಬಿ ರಾವ್ ಮತ್ತು ತಾರಾ ಬಿ.ರಾವ್ ಅವರ ಮೊಮ್ಮಗಳಾಗಿದ್ದಾರೆ. 2012ರಲ್ಲಿ ದಾದರ್ ಪಶ್ಚಿಮದ ರವೀಂದ್ರ ನಾಟ್ಯ ಮಂದಿರದಲ್ಲಿ ರಂಗಪ್ರವೇಶ (ಅರಂಗೆಟ್ರಮ್) ಗೈದ ಪ್ರಿಯಂಜಲಿ ನೃತ್ಯ ವಸುಧರೆಯಾಗಿ ದೇಶವಿದೇಶಗಳ ನೂರಾರು ರಂಗಭೂಮಿಯಲ್ಲಿ ಪ್ರತಿಭೆ ಪ್ರದರ್ಶಿಸಿದ ಯುವಪ್ರತಿಭೆ.

ಭರತನಾಟ್ಯದ ಒಲವು ಮೂಡಿ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ನೃತ್ಯಕಲೆಯ ತವರೂರಾದ ತಂಜಾವೂರು ಇಲ್ಲಿನ ಭಕ್ತಿಪೂರ್ವಕ ಕಲೆಯನ್ನು ಆರಾಧಿಸಿ ಭರತನಾಟ್ಯ ನೃತ್ಯವನ್ನು ಮೈಗೂಡಿಸಿಕೊಂಡ ಕು| ಪ್ರಿಯಂಜಲಿ ರಾವ್ ಸಾವಿರಾರು ನೃತ್ಯ ಪ್ರದರ್ಶನ ನೀಡಿ ಹೆಗ್ಗಳಿಕೆಗೆ ಪಾತ್ರರಾದ ಅಪ್ರತಿಮ ಕಲಾವಿದೆ ಆಗಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ನೃತ್ಯ ಕಲೆಯಲ್ಲಿ ಆಸಕ್ತಿ ಬೆಳೆಸಿದ್ದ ಪ್ರಿಯಂಜಲಿ ಶಾಲೆ ದಿನಗಳಲ್ಲೇ ಹಲವಾರು ನೂರಾರು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಪ್ರತಿಭಾಹ್ವಾನಿತ ಬೆಡಗಿಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಭರತನಾಟ್ಯ ಅಭ್ಯಾಸ ನಿರತರಾಗಿರುವ ಪ್ರಿಯಂಜಲಿ ಹಲವು ಪುರಸ್ಕಾರಗಳಿಂದ ಗೌರವಿಸಲ್ಪಟ್ಟು ಜನಮನ್ನಣೆ ಪಡೆದ ಕಲಾವಿದೆ ಆಗಿ ಮೆರೆದಿದ್ದಾರೆ. ತನ್ನ ಶಾಲಾ ದಿನದಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ನಗರದ ಅನೇಕ ಕಾರ್ಯಕ್ರಮಗ ಳಲ್ಲಿ ನೀಡಿದ ನೃತ್ಯ ಪ್ರದರ್ಶನಗಳೇ ಇವರ ಸಾಧನೆಗೆ ಸಾಕ್ಷಿಯಾಗಿವೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here