Saturday 10th, May 2025
canara news

ಆಗಸ್ಟ್-5: ಬಾನುಲಿ `ಸ್ವರ ಮಂಟಮೆ' 9ನೇ ಸಂಚಿಕೆ ನೇರಪ್ರಸಾರ

Published On : 04 Aug 2017   |  Reported By : Rons Bantwal


ಮುಂಬಯಿ, ಆ.04: ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರ ಮಂಟಮೆ ಇದರ 9ನೇ ಸಂಚಿಕೆಯ ನೇರಪ್ರಸಾರದ ಕಾರ್ಯಕ್ರಮ ಆಗಸ್ಟ್ 5ರಂದು ಬೆಳಿಗ್ಗೆ 10.30 ಗಂಟೆಗೆ ಪ್ರಸಾರವಾಗಲಿದೆ. ಕವಿ ಕುದ್ರೆಪ್ಪಾಡಿ ಜಗನ್ನಾಥ ಆಳ್ವರ `ದೇಶ ಭಕ್ತಿಗೀತೆಲ್' ಕವನ ಸಂಕಲನ ಮತ್ತು `ಗುತ್ತುದ ಗೌರವೊ' ಕಾದಂಬರಿ ಕೃತಿಗಳ ಅನಾವರಣ ನಡೆಯಲಿದೆ.

ಕೃತಿಗಳನ್ನು ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅನಾವರಣಗೊಳಿಸಲಿದ್ದಾರೆ. `ದೇಶ ಭಕ್ತಿಗೀತೆಲ್' ಕೃತಿಯನ್ನು ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾದ್ಯಾಪಕ ಶ್ರೀನಾಥ ಕಾಸರಗೋಡು ಹಾಗೂ `ಗುತ್ತುದ ಗೌರವೊ' ಕೃತಿಯ ಬಗ್ಗೆ ಕೆ.ಟಿ.ಆಳ್ವ ವಿಮರ್ಶೆ ಮಾಡಲಿರುವರು. ಕೃತಿಗಳ ಲೇಖಕ ಕುದ್ರೆಪ್ಪಾಡಿ ಜಗನ್ನಾಥ ಆಳ್ವ, ಎಂ.ಎಸ್ ಶೆಟ್ಟಿ ಸರಪಾಡಿ ಕಾವೂರು, ಎಂಆರ್‍ಪಿಎಲ್‍ನ ಹಿರಿಯ ವ್ಯವಸ್ಥಾಪಕಿ ವೀಣಾ ಟಿ.ಶೆಟ್ಟಿ, ಭಾರತ್ ಬಿಗ್‍ಸಿನೆಮಾ ಇದರ ವ್ಯವಸ್ಥಾಪಕ ಬಾಲಕೃಷ್ಣ ಶೆಟ್ಟಿ ಮತ್ತಿತರರು ಭಾಗವಹಿಸಲಿರುವರು.

ಲೇಖಕ ಜಗನ್ನಾಥ ಆಳ್ವ ಅವರು ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವವರು. ಕತೆ, ಕವನ, ಕಾದಂಬರಿ ಅಂಕಣ ಬರಹ, ನಾಟಕಗಳನ್ನು ತುಳು-ಕನ್ನಡ ಭಾಷೆಗಳಲ್ಲಿ ಬರೆದು ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ. ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಆಸಕ್ತ ಕೇಳುಗರು ಪಾಲ್ಗೊಳ್ಳಲು (0824-2211999), ಮೊಬೈಲ್ 8277038000ಗೆ ಕರೆ ಮಾಡಬಹುದು ತುಳು ವಿಭಾಗದ ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಉಷಾಲತಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಾನುಲಿಯ ಈ ವೇದಿಕೆ `ಸ್ವರ ಮಂಟಮೆ' ಯು ದುಂದುವೆಚ್ಚ ಪಡೆದು ಹಾರ ತುರಾಯಿಗಳಿಲ್ಲದೆ ಸರಳವಾಗಿ ನಡೆಸುವುದು ಮತ್ತು ಹೆಚ್ಚು ಜನರನ್ನು ತಲುಪುವ ಆಕಾಶವಾಣಿ ಮಾದ್ಯಮದ ಮೂಲಕ ಜನಮನಕ್ಕೆ ಮುಟ್ಟಿಸುವ ಪ್ರಯತ್ನವಾಗಿದೆ.

ಡಿ.3ರಂದು ಬೆಳಿಗ್ಗೆ 10.30ರಿಂದ 11.30 ಗಂಟೆ ವರೆಗೆ ತುಳು ಸಾಹಿತಿ ಮಹೇಂದ್ರನಾಥ ಸಾಲೆತ್ತೂರು ಅವರ `ಕಲ್ಲಕಲೆಂಬಿ' ತುಳು ಚುಟುಕುಗಳ ಸಂಕಲನದ ಬಿಡುಗಡೆ ಕಾರ್ಯಕ್ರಮವಿದೆ. ಸಾಹಿತಿ ಡಾ| ವಾಮನ ನಂದಾವರ ಕೃತಿ ಬಿಡುಗಡೆ ಗೊಳಿಸಲಿದ್ದು ಮಂಗಳೂರು ವಿವಿಇದರ ಬ್ರಹ್ಮ ಶ್ರೀ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ವಿಮರ್ಶೆ ಮಾಡಲಿದ್ದಾರೆ. ಕೃತಿ ರಚನೆಕಾರ ಮಹೇಂದ್ರನಾಥ ಸಾಲೆತ್ತೂರು ಹಾಜರಿದ್ದು ಕಾರ್ಯಕ್ರಮ ವನ್ನು ಡಾ| ಸದಾನಂದ ಪೆರ್ಲ ಮತ್ತು ಸಾವಿತ್ರಿ ನಡೆಸಿ ಕೊಡಲಿದ್ದಾರೆ. ಕೇಳುಗರು ಸಂಪರ್ಕಿಸಲು (0824-2211999 ಹಾಗೂ ಮೊಬೈಲ್ ಸಂಖ್ಯೆ 8277328000 ದೂರವಾಣಿ ಸಂಪರ್ಕಿಸಬಹುದು. ಸ್ವರ ಮಂಟಮೆಯಲ್ಲಿ ಕೃತಿ ಸಿಡಿ ಬಿಡುಗಡೆಗಾಗಿ ನೀವು 9448127672 ದೂರವಾಣಿಗೆ ಸಂಪರ್ಕಿಸಿ ಸಮಗ್ರ ಮಾಹಿತಿ ಪಡೆದುಕೊಳ್ಳಬಹುದು.

ತುಳು ವಿಭಾಗದಲ್ಲಿ `ಗಾಂಪಣ್ಣನ ತಿರ್ಗಾಟೊ' ಹಾಸ್ಯಭರಿತ ಕೌಟುಂಬಿಕ ಚರ್ಚೆ ಮತ್ತು ಪ್ರತೀ ತಿಂಗಳು ತುಳುಭಾಷೆ, ಸಂಸ್ಕøತಿ ಕ್ಷೇತ್ರದಲ್ಲಿನ ಸಾಧಕರು, ಸಿನಿಮಾ, ರಂಗಭೂಮಿ ಕ್ಷೇತ್ರದ ಮಹನೀಯರು, ವಿದ್ವಾಂಸರು ಭಾಗವಹಿಸುವ `ಚಾವಡಿ ಮದಿಪು' ಎಂಬ ವಿನೂತನ ಚರ್ಚೆ, ಸಂವಾದ ನೇರ ಫೋನ್ ಇನ್ ಕಾರ್ಯಕ್ರಮ ಮೂಡಿ ಬರಲಿದೆ. ಕಾರ್ಯಕ್ರಮ ನಿರ್ವಾಹಕರಾದ ಡಾ| ಸದಾನಂದ ಪೆರ್ಲ ಈ ವಿಭಾಗದ ನಿರ್ವಹಣೆ ಮಾಡಲಿದ್ದಾರೆ ಎಂದು ಕಾರ್ಯಕ್ರಮ ಮುಖ್ಯಸ್ಥರಾದ ಡಾ| ವಸಂತಕುಮಾರ್ ಪೆರ್ಲ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here