Saturday 10th, May 2025
canara news

ಡಾ| ಸದಾನಂದ ಪೆರ್ಲರಿಗೆ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ

Published On : 04 Aug 2017   |  Reported By : Rons Bantwal


ಮುಂಬಯಿ, ಆ.04: ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲರಿಗೆ ಬೆಂಗಳೂರಿನ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಪ್ರತಿಷ್ಠಾನವು ಬೆಳ್ಳಿ ಹಬ್ಬದ ಪ್ರಯುಕ್ತ ರಾಜ್ಯಮಟ್ಟದ `ವಿಶ್ವೇಶ್ವರಯ್ಯ ಸಾಹಿತ್ಯ' ಪ್ರಶಸ್ತಿ ನೀಡಿ ಗೌರವಿಸಿದೆ.

ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದ ಪುಲಕೇಶಿ ರಂಗಮಂದಿರದಲ್ಲಿ ಇತ್ತೀಚಿಗೆ ನಡೆದ ಸಮಾರಂಭದಲ್ಲಿ ರಾಜ್ಯದ ಮಾಜಿ ಸಚಿವರಾದ ರಾಮಚಂದ್ರಗೌಡರು ಮತ್ತು ಪ್ರತಿಷ್ಠಾನದ ಅಧ್ಯಕ್ಷರಾದ ರಮೇಶ ಸುರ್ವೆ ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ನಡೆದ ಅಖಿಲ ಕರ್ನಾಟಕ ಮಕ್ಕಳ ಸಾಹಿತ್ಯ ಮತ್ತು ಸಾಂಸ್ಕøತಿಕ ಎಂಟನೇ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ| ಚೆನ್ನಣ್ಣ ವಾಲೀಕಾರ, ಅಥಣಿ ಶಿವಯೋಗಿಶ್ವರ ಸ್ವಾಮೀಜಿ ಚಂದ್ರಕಾಂತ ಬೆಲ್ಲದ ಮತ್ತಿತರ ಗಣ್ಯರು ಹಾಜರಿದ್ದರು. `ಕಯ್ಯಾರ ಕಿಞÐಣ್ಣ ರೈಯವರ ಸಾಹಿತ್ಯ ಮತ್ತು ಕಾಸರಗೋಡಿನ ಹೋರಾ' ಕುರಿತ ಸಂಶೋಧನಾ ಪ್ರಬಂಧ ಬರೆದ ಡಾ: ಪೆರ್ಲರು ಕಾಸರಗೋಡಿನ ಕನ್ನಡ ಹೋರಾಟ, ಶರಣ ಹೆಂಡದ ಮಾರಯ್ಯ ಒಂದಿಷ್ಟು ಮಾತು ಮುಂತಾದ `ಅಭಿವೃದ್ಧಿ ಪತ್ರಿಕೋದ್ಯಮ' ಪ್ರಶಸ್ತಿಯನ್ನು ಕರ್ನಾಟಕ ಸರಕಾರ ನೀಡಿ ಗೌರವಿಸಿದೆ.

ಆಕಾಶವಾಣಿಯಲ್ಲಿ ಕಳೆದ 23 ವರ್ಷಗಳಿಂದ ವಿನೂತನ ಕಾರ್ಯಕ್ರಮಗಳನ್ನು ಕೇಳುಗರಿಗೆ ನೀಡಿ ಶ್ರಾವ್ಯ ಮಾದ್ಯಮವನ್ನು ಪ್ರಯೋಗಶಾಲೆಯನ್ನಾಗಿಸಿ ಶಿಕ್ಷಣ, ಮಾಹಿತಿ, ಮನರಂಜನೆಯನ್ನು ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಕಲಬುರ್ಗಿಯಲ್ಲಿ ನಡೆದ ಸಮಾರಂಭದಲ್ಲಿ ಮಾದ್ಯಮ ಸೇವೆಗಾಗಿ ಅರಸು ಜನ್ಮ ಶತಮಾನೋತ್ಸವದ ಪ್ರಯುಕ್ತ ಅವರಿಗೆ `ಅರಸು ಪ್ರಶಸ್ತಿ' ಕೂಡಾ ಸಂದಿರುವುದನ್ನು ಇಲ್ಲಿ ಸ್ಮರಿಸಬಹುದು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here