Saturday 10th, May 2025
canara news

ಬಹುಮುಖ ಶಿಕ್ಷಕ ಪುಂಡಲೀಕ ಬಿ.ಮರಾಠೆ ವಯೋನಿವೃತ್ತಿ ಶಾಲಾಡಳಿತ ಮಂಡಳಿ ಸಾರ್ವಜನಿಕ ಸಂಸ್ಥೆಗಳಿಂದ ಶುಭವಿದಾಯ

Published On : 04 Aug 2017   |  Reported By : Rons Bantwal


ಮುಂಬಯಿ (ಬೆಳ್ಮಣ್), ಆ.04: ಸುಮಾರು 39ವರ್ಷಗಳ ಶಿಕ್ಷಕವೃತ್ತಿಜೀವನದ ಜೊತೆಗೆ ಶಾಲಾ ಹಾಗೂ ವಿದ್ಯಾರ್ಥಿಗಳ-ಪೋಷಕರ ಸರ್ವಾಂಗೀಣ ಪ್ರಗತಿಗೆ ಪೂರಕವಾದ ವಿವಿಧ ಯೋಜನೆಗಳನ್ನು ರೂಪಿಸಿ ರೋಟರಿ ಹಾಗೂ ಶಾಲಾ ಹಳೆವಿದ್ಯಾರ್ಥಿಗಳು,ದಾನಿಗಳ ನೆರವಿನಿಂದ ಯಸ್ವಿಯಾಗಿ ನಿರ್ವಹಿಸಿ ಸಂತೃಪ್ತಿಯಿಂದ ವಯೋನಿವೃತ್ತಿ ಹೊಂದಿದ ಅಜಾತಶತ್ರು ಬಿ.ಪುಂಡಲೀಕ ಮರಾಠೆಯವರಿಗೆ ಸೋಮವಾರ ಬೆಳ್ಮಣ್ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ, ವಿದ್ಯಾಥಿರ್ü ಪೆÇೀಷಕರು ಹಾಗೂ ಬೆಳ್ಮಣ್ ಸಾರ್ವಜನಿಕ ಸಮಾಜಸೇವಾ ಸಂಘಟನೆಗಳು,ನಾಗರಿಕರು ಸಂಯುಕ್ತವಾಗಿ ಏರ್ಪಡಿಸಿದ ಹೃದಯಸ್ಪರ್ಶಿ `ಸನ್ಮಾನ-ಶುಭವಿದಾಯ' ಸಮಾರಂಭದಲ್ಲಿ ಪುಂಡಲೀಕ ಮರಾಠೆ ಮತ್ತು ಉಷಾ ಮರಾಠೆ ದಂಪತಿಯನ್ನು ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ಶಾಲಾ ಸಂಚಾಲಕ ಹಾಗೂ ಬೆಳ್ಮಣ್ ಸಂತ ಜೋಸೆಫ್ ಧರ್ಮಕೇಂದ್ರದ ಹಿರಿಯ ಧರ್ಮಗುರು ರೆ| ಫಾ| ಎಡ್ವಿನ್ ಡಿ'ಸೋಜ ವಹಿಸಿ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಳೆದ 9ವರ್ಷಗಳಿಂದ ನೀಡಿದ ಸೇವೆ ಹಾಗೂ ಕೊಡುಗೆ ಸ್ಮರಿಸಿದರು.

ಸಂಸ್ಥೆಯ ಮಾಜಿ ಸಂಚಾಲಕ ರೆ| ಫಾ| ಲಾರೆನ್ಸ್ ಬಿ. ಡಿ'ಸೋಜ ಮಾತನಾಡಿ ತನ್ನ ಏಳುವರ್ಷಗಳ ಸಂಚಾಲಕತ್ವದ ಅವಧಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣದ ಜೊತೆಗೆ ಕಲೆ,ಸಾಹಿತ್ಯ,ಯಕ್ಷಗಾನ,ಕ್ರೀಡೆ, ದೀಪಾವಳಿ,ಸಾಂಸ್ಕøತಿಕ ಹಾಗೂ ಭೌತಿಕವಾಗಿ ಮೂಲಭೂತ ಸೌಕರ್ಯಗಳ ಪೂರೈಕೆಯಲ್ಲಿ ನೀಡಿದ ಅಪಾರವಾದ ಸೇವಾ ಕಾರ್ಯಗಳು 121ವರ್ಷಗಳ ಇತಿಹಾಸವಿರುವ ಈ ಶಿಕ್ಷಣ ಸಂಸ್ಥೆಯ ಸರ್ವಾಂಗೀಣ ಪ್ರಗತಿಗೆ ಕಲಶಪ್ರಾಯವಾಗಿದೆ ಅಲ್ಲದೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಪ್ರತೀವರ್ಷವೂ ಗಣನೀಯವಾಗಿ ಏರಿಕೆಯಾಗಿರುವುದೇ ನಿದರ್ಶನ ಎಂದರು.

ಶಾಲಾ ಹಳೆವಿದ್ಯಾಥಿರ್ü ಸಂಘದ ಅಧ್ಯಕ್ಷ ಕ್ಸೇವಿಯರ್ ಡಿ'ಮೆಲ್ಲೊ ಮಾತನಾಡಿ, ಮರಾಠೆ ಅವರ ಮಾತುಗಾರಿಕೆ, ಸಂಘಟನಾ ಚಾತುರ್ಯ, ಧನಾತ್ಮಕ ಚಿಂತನೆಗಳು, ಸಂಪನ್ಮೂಲಗಳ ಕ್ರೂಢೀಕರಣ ಹಾಗೂ ಸಾರ್ವಜನಿಕ ಸಂಪರ್ಕ ಹಳೆವಿದ್ಯಾಥಿರ್ü ಸಂಘಕ್ಕೆ ಸ್ಪೂರ್ತಿ ನೀಡಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಪ್ರೇರಣೆ ನೀಡಿದೆ ಎಂದರು.

ಮಂಗಳೂರು ಕೆಥೊಲಿಕ ಶಿಕ್ಷಣ ಮಂಡಳಿಯ ಮಾಜಿ ಕಾರ್ಯದರ್ಶಿ ಹಾಗೂ ಬಿಜೈ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ವಿಲ್ಸನ್ ಡಿ'ಸೋಜ, ಮುಖಾಮಾರ್ (ಸಾಂತೂರು ಕೊಪ್ಲ) ಚರ್ಚ್‍ನ ಧರ್ಮಗುರು ರೆ| ಫಾ| ಲೂವಿಸ್ ಡೇಸಾ, ಶಾಲಾ ಮಾಜಿ ಸಂಚಾಲಕ ಹಾಗೂ ಉಚ್ಚಿಲ ಚರ್ಚ್‍ನ ಹಿರಿಯ ಧರ್ಮಗುರು ರೆ| ಫಾ| ಲಾರೆನ್ಸ್ ರೊಡ್ರಿಗಸ್ ಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು.

ಚರ್ಚ್ ಪಾಲನಾ ಮಂಡಳಿ ಮಾಜಿ ಅಧ್ಯಕ್ಷರಾದ ಗ್ರೆಗರಿ ಮಿನೇಜಸ್, ಸಿಲ್ವೆಸ್ಟರ್ ಡಿ'ಮೆಲ್ಲೊ, ಸುರತ್ಕಲ್ ಎನ್‍ಐಟಿಕೆ ನಿವೃತ್ತ ಉಪನ್ಯಾಸಕ ಪೆÇ್ರ| ರಾಬರ್ಟ್ ಡಿ'ಸೋಜ,ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ರಾವ್, ತಾಲೂಕು ಪಂಚಾಯತ್ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಬೆಳ್ಮಣ್ ರೋಟರಿ ಕ್ಲಬ್ ಅಧ್ಯಕ್ಷ ದೇವೇಂದ್ರ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್‍ಚಂದ್ರ, ಜೆಸಿಐ ಅಧ್ಯಕ್ಷ ರವಿರಾಜ್ ಶೆಟ್ಟಿ, ನಿಕಟಪೂರ್ವ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮೋನಿಕಾ ಮೊಂತೇರೊ, ಸ್ಥಳೀಯ ಕಾನ್ವೆಂಟ್‍ನ ಮುಖ್ಯಸ್ಥೆ ಸಿಸ್ಟರ್ ಉಷಾ ಸ್ಟೆಲ್ಲಾ, ಗ್ರಾಮ ಪಂಚಾಯತ್ ಸದಸ್ಯ ಪ್ರಭಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮರಾಠೆಯವರಿಂದ ಕೃತಜ್ಞತಾರ್ಪಣೆ: 1978ರಲ್ಲಿ ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದ ಮರಾಠೆಯವರು ತನ್ನ ಬಾಲ್ಯದ ಒಂದನೇತರಗತಿಯಲ್ಲಿ ಅಕ್ಷರಾಭ್ಯಾಸ ಕಲಿಸಿದ ಪ್ರಸ್ತುತ 80 ರ ಹರೆಯದ ನಿವೃತ್ತ ಶಿಕ್ಷಕಿ ಲೀಲಾವತಿ ಲಕ್ಷ್ಮೀನಾರಾಯಣ ಪಾಟ್ಕರ್ ರವರನ್ನು ಸನ್ಮಾನಿಸುವ ಮೂಲಕ ತನಗೆ ಜ್ಞಾನಧಾರೆ ಎರೆದ ಸಮಸ್ತ ಶಿಕ್ಷಕರನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು. ತನ್ನ ಆಧ್ಯಾತ್ಮಗುರು ಶ್ರೀಕ್ಷೇತ್ರ ಬಂಟಕಲ್ಲು ದೇವಳದಲ್ಲಿ 75ವರ್ಷಗಳಿಂದ ಅರ್ಚಕರಾಗಿ ವಯೋನಿವೃತ್ತಿ ಹೊಂದಿದ 88ರ ಹರೆಯದ ವೇದಮೂರ್ತಿ ಕೆ.ವೇದವ್ಯಾಸರಾಯ ಭಟ್‍ರವರನ್ನು ಗೌರವಿಸುವ ಮೂಲಕ ಗುರುವಂದನೆ ಸಲ್ಲಿಸಿದರು. ಬಂಟಕಲ್ಲು ಶಾಲೆಯಲ್ಲಿ 23ವರ್ಷ, ಕಾರ್ಕಳದ ಹಿರ್ಗಾನ ಕಾನಂಗಿ ಮಂಗಿಲಾರು ಶಾಲೆಯಲ್ಲಿ ಏಳುವರೆ ವರ್ಷ ಹಾಗೂ ಬೆಳ್ಮಣ್ ಸಂತ ಜೋಸೆಫ್ ಶಾಲೆಯಲ್ಲಿ 9ವರ್ಷಗಳ ಸೇವಾವಧಿಯಲ್ಲಿ ಸಹಪಾಠಿಗಳಾಗಿ ಸೇವೆ ನೀಡಿದ ಎಲ್ಲಾ ಶಿಕ್ಷಕರನ್ನು ಪುಷ್ಪ ನೀಡಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು. ರೋಟರಿ, ಲಯನ್ಸ್, ಜೇಸಿಸ್ ಹಾಗೂ ಸೇವಾವಧಿಯಲ್ಲಿ ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಆಥಿರ್üಕ/ ವಸ್ತುರೂಪದ ದಾನ ನೀಡಿ ಪೆÇ್ರ್ರೀತ್ಸಾಹಿಸಿದ ಎಲ್ಲಾ ದಾನಿಗಳನ್ನು ಸ್ಮರಿಸಿ ಗೌರವಿಸಿದರು.

ಸಮಾರಂಭದಲ್ಲಿ ಕರ್ನಾಟಕ ಸರಕಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರುಗಳಾದ ಎರಿಕ್ ಒಝೇರಿಯೊ, ಕುಂದಾಪುರ ನಾರಾಯಣ ಖಾರ್ವಿ, ರೋಯ್ ಕಾಸ್ತೇಲಿನೊ, ಕೊಂಕಣಿ ಸಂಘಟಕ ವಿತೋರಿ ಕಾರ್ಕಳ್, ಶಿರ್ವ ವಿದ್ಯಾವರ್ಧಕ ಶಿಕ್ಷಕ ಸಂಸ್ಥೆಗಳ ಆಡಳಿತಾಧಿಕಾರಿ ಪೆÇ್ರ| ವೈ.ಭಾಸ್ಕರ ಶೆಟ್ಟಿ, ಕುತ್ಯಾರು ಸೂರ್ಯಚೈತನ್ಯ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಶಂಭುದಾಸ್ ಗುರೂಜಿ, ಕಡಾರಿ ರವೀಂದ್ರ ಪ್ರಭು, ದೇವೇಂದ್ರ ನಾಯಕ್, ಜಯರಾಮ ಪ್ರಭು ಬಂಟಕಲ್ಲು, ಉದ್ಯಮಿ ಎಸ್.ಕೆ ಸಾಲಿಯಾನ್, ಸೂರ್ಯಕಾಂತ್ ಶೆಟ್ಟಿ ಬೆಳ್ಮಣ್, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಲಕ್ಷ್ಮೀಕಾಂತ್ ಭಟ್, ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ವಿ.ಕೆ ರಾವ್ ನಂದಳಿಕೆ, ಪೃಥ್ವಿರಾಜ್ ಜೈನ್, ವಿವಿಧ ಸಂಸ್ಥೆಗÀಳ ಪದಾಧಿಕಾರಿಗಳು,ಅಭಿಮಾನಿಬಂಧುಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಲೂಸಿ ಪಿರೇರಾ ಸ್ವಾಗತಿಸಿದರು. ಜುಲಿಯಾನಾ ಮೊರಾಸ್ ಸನ್ಮಾನಪತ್ರ ವಾಚಿಸಿದರು. ವಿದ್ಯಾಥಿರ್üನಿ ಕುಮಾರಿ ದಿಶಾ ಯು.ಶೆಟ್ಟಿ, ಶಿಕ್ಷಕ ವಿನ್ಸೆಂಟ್ ಪಿಂಟೊ ಶುಭ ಕೋರಿದರು. ವಿದ್ಯಾಥಿರ್ü ಸಮೂಹದಿಂದ ವಿದಾಯಗೀತೆ ಹಾಡಲಾಯಿತು. ವಿನ್ಸೆಂಟ್ ಪಿಂಟೊ ಕಾರ್ಯಕ್ರಮ ನಿರೂಪಿಸಿದ್ದು ಶಿಕ್ಷಕಿ ಲಿಲ್ಲಿ ಡಿ'ಸೋಜ ಧನ್ಯವದಿಸಿದರು

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here