Saturday 10th, May 2025
canara news

ಅಖಿಲ ಕರ್ನಾಟಕ ಜೈನ ಸಂಘದ ಮಾಜಿ ಅಧ್ಯಕ್ಷ ಆದಿರಾಜ್ ಜೈನಿ ನಿಧನ

Published On : 07 Aug 2017   |  Reported By : Rons Bantwal


ಮುಂಬಯಿ, ಆ.07: ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಆದಿರಾಜ್ ಜೈನಿ (96.) ಇಂದಿಲ್ಲಿ ಬೆಳಿಗ್ಗೆ ಕಾಂದಿವಿಲಿ ಪಶ್ಚಿಮದ ಅಲ್ಲಿನ ಮಹಾವೀರ ನಗರದಲ್ಲಿನ ಪಂಚಶೀಲ್ ಹೈಟ್ಸ್ ಅಪಾರ್ಟ್‍ಮೆಂಟನ್ ಸ್ವನಿವಾಸದಲ್ಲಿ ನಿಧನರಾದರು.

ಮೃತರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕುಪ್ಪೆಪದವು ಅಲ್ಲಿನ ಕಿಲ್ಲೆಂಜಾರು ಅರಮನೆ ಶ್ರೀಮಂತ ಜೈಮಮನೆತನದವರಾಗಿದ್ದು, ಮೂರು ಗಂಡು, ಒಂದು ಹೆಣ್ಣು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.

ಜೈನ ಸಮುದಾಯದ ಮುಂಬಯಿಯಲ್ಲಿನ ಹಿರಿಯ ಮುತ್ಸದ್ಧಿಗಳಾಗಿ ಸಂಘದ ಸರ್ವೋಭಿವೃದ್ಧಿಗಾಗಿ ಶ್ರಮಿಸಿ ಅಗಲಿದ ಜೈನಿ ನಿಧನಕ್ಕೆ ಅಖಿಲ ಕರ್ನಾಟಕ ಜೈನ ಸಂಘ ಮುಂಬಯಿ ಅಧ್ಯಕ್ಷ ಬಿ.ಮುನಿರಾಜ ಅಜಿಲ, ಉದಯ ಅಥಿüಕಾರಿ, ಪಿ.ಅನಂತ ರಾಜ, ಮನೀಷ್ ಹೆಗ್ಡೆ, ರಘುವೀರ್ ಹೆಗ್ಡೆ, ಮಹಾವೀರ್ ಜೈನ್ ಮತ್ತು ಇತರ ಪದಾಧಿಕಾರಿಗಳು, ಪವನಂಜಯ ಬಲ್ಲಾಳ್, ಸಂಪತ್‍ಕುಮಾರ್ ಎಸ್.ಜೈನ್, ಲೋಕನಾಥ್ ಜೈನ್, ಭರತ್ ಜೈನ್ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಇಂದಿಲ್ಲಿ ಮಧ್ಯಾಹ್ನ ಕಾಂದಿವಿಲಿ ಪಶ್ಚಿಮದ ಧಾಣುಕರ್‍ವಾಡಿ ಅಲ್ಲಿನ ರುಧ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿದ್ದು ಅಖಿಲ ಕರ್ನಾಟಕ ಜೈನ ಸಂಘದ ಪದಧಿಕಾರಿಗಳು, ಸದಸ್ಯರನೇಕರು ನಲ್ಲೂರು ಧನಂಜಯ ಅಧಿಕಾರಿ, ಪ್ರದೀಪ್ ಜೈನಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.





More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here