Saturday 10th, May 2025
canara news

ಕಲಾಪೋಷಕ ಸನ್ಮಾನಕ್ಕೆ ಭಾಜನರಾದ ಸುರೇಶ್ ಎಸ್ ಭಂಡಾರಿ-ಕೇಶವ ಅಂಚನ್

Published On : 09 Aug 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಆ.09: ಯುಗಪುರುಷ ಕಿನ್ನಿಗೋಳಿ ಯಕ್ಷಲಹರಿ (ರಿ.) ಸಂಸ್ಥೆಯು ಕಳೆದ ಭಾನುವಾರ ಕಿನ್ನಿಗೋಳಿ ಇಲ್ಲಿನ ಸಭಾಗೃಹದಲ್ಲಿ ನಡೆಸಿದ ಯಕ್ಷಗಾನ ತಾಳಮದ್ದಲೆ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದರ ಆಡಳಿತ ಮೊಕ್ತೇಸರ ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಇದರ ಕಾರ್ಯಾಧ್ಯಕ್ಷ, ಮುಂಬಯಿ ಅಲ್ಲಿನ ಉದಾರ ದಾನಿಯಾಗಿ ಸರ್ವೋತ್ಕೃಷ್ಟ ಸಮಾಜ ಸೇವಕರೆಣಿಸಿದ ಕಡಂದಲೆ ಸುರೇಶ್ ಎಸ್.ಭಂಡಾರಿ ಮತ್ತು ಮೊಂಜಿನೀಸ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಇದರ ಉಪ ಕಾರ್ಯಾಧ್ಯಕ್ಷ, ಭಾರತ ಸರಕಾರ ಅಧೀನದ ಜನತಾ ದೂರು ಸಮಿತಿ (ಪೀಪಲ್ ಗ್ರೀವ್ಹನ್ಸ್ ಸೆಲ್) ಇದರ ಸಂಘಟಕ, ಮಹಾರಷ್ಟ್ರ ಸರಕಾರದ ವಿಶೇಷ ಕಾರ್ಯನಿರ್ವಾಹಕಾಧಿಕಾರಿ, ಅಖಿಲ ಭಾರತ ಮಾನವ ಹಕ್ಕುಗಳ ಸಾಮಾಜಿಕ ಕಾನೂನು ಸಂಸ್ಥೆಯ ಸದಸ್ಯ ಕೇಶವ ಎನ್.ಅಂಚನ್ ಮತ್ತು ಜಯರಾಮ ಎಂ.ಶೆಟ್ಟಿ ಅವರಿಗೆ ಕಲಾಪೆÇೀಷಕ ಸನ್ಮಾನ ಪ್ರದಾನಿಸಿ ಗೌರವಿಸಲಾಯಿತು. ಹಾಗೂ ಕೆ.ಶ್ರೀಪತಿ ಭಟ್ ಅವರು ಸುಬ್ರಾಯ ಭಟ್ ಮುಚ್ಚೂರು ಅವರಿಗೆ ಕಲಾಪೆÇೀಷಕ ಸಮ್ಮಾನವನ್ನಿತ್ತು ಗೌರವಿಸಿದರು. ವಿದ್ಯಾ ರಮೇಶ್ ಭಟ್ ಅವರಿಗೆ ಅಭಿನಂದನಾ ಗೌರವ ಪ್ರದಾನಿಸಲಾಯಿತು.

ಕರ್ನಾಟಕ ಬ್ಯಾಂಕ್‍ನ ಹಿರಿಯ ಮಹಾ ಪ್ರಬಂಧಕ ರಾಘವೇಂದ್ರ ಭಟ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರ ಕಟೀಲು ಇದರ ವೇ| ಮೂ| ಲಕ್ಷಿ ್ಮೀನಾರಾಯಣ ಅಸ್ರಣ್ಣ ಅನುಗ್ರಹಿಸಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು, ಲ| ಶಾಂಭವಿ ಎಸ್.ಶೆಟ್ಟಿ, ರೊ| ಸೆವ್ರಿನ್ ಲೋಬೊ ಗೌರವ ಅತಿಥಿüಗಳಾ ಗಿ ಉಪಸ್ಥಿತರಿದ್ದು ಶೈಕ್ಷಣಿಕ ದಾನಿ ಎ.ಸುಧಾಕರ್ ನಾಯಕ್ ವಿದ್ಯಾಥಿರ್ü ವೇತನ ಪ್ರದಾನಿಸಲಾಯಿತು.

ಈ ಸಂದರ್ಭದಲ್ಲಿ ಕೆ.ಭುವನಾಭಿರಾಮ ಉಡುಪ, ವಸಂತ ದೇವಾಡಿಗ, ರೊ| ಪಿ.ಸತೀಶ್ ರಾವ್, ಪೆÇ್ರ| ಜಗದೀಶ್ ಹೊಳ್ಳ, ಎಸ್.ಪಶುಪತಿ ಶಾಸ್ತ್ರಿ, ದೇವಪ್ರಸಾದ್ ಪುನರೂರು ಮತ್ತು ದೀಪ್ತಿ ಬಾಲಕೃಷ್ಣ ಭಟ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here