Friday 4th, July 2025
canara news

ಆ.13: ಬಂಟ್ವಾಳ ಮೊಡಂಕಾಪುನಲ್ಲಿ ಸಂತ ಕ್ರಿಸ್ಟೋಫರ್ ಅಸೋಸಿಯೇಶನ್‍ನ 35ನೇ ವಾರ್ಷಿಕೋತ್ಸವ - ವಾಹನಗಳ ಆಶೀರ್ವಚನ

Published On : 12 Aug 2017   |  Reported By : Rons Bantwal


ಬಂಟ್ವಾಳ, ಆ.12: ಸಂತ ಕ್ರಿಸ್ಟೋಫರ್ ಅಸೋಸಿಯೇಶನ್ (ರಿ.) ಬಂಟ್ವಾಳ ವಲಯ ಮತ್ತು ಬಂಟ್ವಾಳ ಚರ್ಚ್ ಘಟಕದ 35ನೇ ವಾರ್ಷಿಕೋತ್ಸವ ಸಮಾರಂಭವನ್ನು ನಾಳೆ ಆ.13ನೇ ರವಿವಾರ ಬಂಟ್ವಾಳ ಇಲ್ಲಿನ ಮೊಡಂಕಾಪು ಅಲ್ಲಿರುವ ಇನ್ಫೇಟ್ ಜೀಜಸ್ ಚರ್ಚ್‍ನಲ್ಲಿ ಸಂಭ್ರಮಿಕ ಬಲಿಪೂಜೆ ನೇರವೇರಿಸಲಾಗುವುದು ಎಂದು ಅಸೋಸಿಯೇಶನ್ ಅಧ್ಯಕ್ಷ ಶಾಂತಿಪ್ರಕಾಶ್ ಡಿ'ಸೋಜಾ ತಿಳಿಸಿದ್ದಾರೆ.

ಪೂಜೆ ನಂತರ ನೆರೆದ ಎಲ್ಲಾ ವಾಹನಗಳ ಆಶೀರ್ವಚನ ಹಾಗೂ ವಾರ್ಷಿಕೋತ್ಸವದ ಅಂಗವಾಗಿ ಚರ್ಚ್ ಸಭಾಗೃಹದಲ್ಲಿ ಇನ್ಫೇಟ್ ಜೀಜಸ್ ಚರ್ಚ್‍ನ ಮುಖ್ಯ ಧರ್ಮಗುರು ರೆ| ಫಾ| ಮೆಕ್ಸಿಮ್ ಎಲ್.ನೊರೊನ್ಹಾ ಅಧ್ಯಕ್ಷತೆಯಲ್ಲಿ ಸಮಾರಂಭ ಆಯೋಜಿಸಲಾಗಿದ್ದು ಮುಖ್ಯ ಅತಿಥಿsಗಳಾಗಿ ಉದ್ಯಮಿ ಫ್ರೆಡ್ರಿಕ್ ಡಿ'ಸೋಜಾ, ಚರ್ಚ್‍ನ ಸಹಾಯಕ ಗುರು ಫಾ| ಆಶ್ವಿನ್ ಕಾರ್ಡೊಜಾ ಮತ್ತಿತರರು ಉಪಸ್ಥಿತರಿರುವರು ಎಂದು ಕೋಶಾಧಿಕಾರಿ ಸಂದೀಪ್ ಮಿನೇಜಸ್ ತಿಳಿಸಿದ್ದರೆ.

ನಾಡಿನ ಸಮಸ್ತ ಕ್ರೈಸ್ತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಾಂ ಕ್ರಿಸ್ಟೋಫರ್ ಕಾರ್ಯದರ್ಶಿ ಲಿಯೋ ಬಾಸಿಲ್ ಫೆರ್ನಾಂಡಿಸ್ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here