Friday 4th, July 2025
canara news

ಅಶ್ಲೀಲ ಫೋಟೊ ಫೇಸ್ಬುಕ್ಗೆ ಅಪ್ಲೋಡ್: ಆರೋಪಿಗೆ ಶಿಕ್ಷೆ

Published On : 13 Aug 2017   |  Reported By : Canaranews network


ಮಂಗಳೂರು: ಪ್ರೇಯಸಿ ವಂಚಿಸಿದಳೆಂದು ಆರೋಪಿಸಿ ಆಕೆಯೊಂದಿಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ ಫೋಟೊಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ ಆರೊಪಿಗೆ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 1 ವರ್ಷ ಕಠಿನ ಸಜೆ ಮತ್ತು 12 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.ಸುಳ್ಯ ಆಲೆಟ್ಟಿ ಮೊರಂಗಲ್ಲು ನಿವಾಸಿ ಕುಸುಮಾಧರ್ (30) ಶಿಕ್ಷೆಗೊಳಗಾದ ಆರೋಪಿ.

ಘಟನೆ ವಿವರ
ಕುಸುಮಾಧರ್ ಮತ್ತು ಸುಳ್ಯದ ಯುವತಿಯೋರ್ವಳಿಗೆ ಸಮಾರಂಭವೊಂದರಲ್ಲಿ ಪರಿಚಯವಾಗಿದ್ದು, ಆಕೆಯ ಜತೆ ಮಾತನಾಡುವಾಗ ಕುಸುಮಾಧರ್ ತಾನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಟೀ ಸ್ಟಾಲ್ ವ್ಯವಹಾರ ನಡೆಸುತ್ತಿರುವುದಾಗಿ ನಂಬಿಸಿದ್ದ. ಇಬ್ಬರಲ್ಲೂ ಆತ್ಮೀಯತೆ ಬೆಳದು ಮೊಬೈಲ್ ಫೋನ್ ನಂಬರ್ ಗಳನ್ನು ವಿನಿಮಯ ಮಾಡಿಕೊಂಡಿ ದ್ದರು.

ದಿನ ಕಳೆದಂತೆ ಅವರೊಳಗಿನ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಯುವತಿ ಮನೆಯಿಂದ ಸ್ವಲ್ಪ ದೂರ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು. 2013ರ ಎ.14ರಂದು ಕುಸುಮಾ ಧರ್ ಆಕೆಯನ್ನು ಭೇಟಿಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಯುವತಿಯ ಬಾಡಿಗೆ ಮನೆಗೆ ಬಂದಿದ್ದ. ಸಂಜೆ ಹೊತ್ತು ಬಸ್ ಸಿಗಲಿಲ್ಲ ಎಂಬ ನೆಪದಲ್ಲಿ ಆ ದಿನ ಅಲ್ಲೇ ಉಳಿದುಕೊಂಡಿದ್ದ ಆತ ಮದುವೆ ಯಾಗುವುದಾಗಿ ನಂಬಿಸಿ ರಾತ್ರಿ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು.

ಈ ಸಂದರ್ಭದಲ್ಲಿ ಆತನು ಅತ್ಯಾಚಾರದ ಕೃತ್ಯವನ್ನು ತನ್ನ ಮೊಬೈಲ್ನಲ್ಲಿ ಯುವತಿಗೆ ಗೊತ್ತಾಗದಂತೆ ರೆಕಾರ್ಡ್ ಮಾಡಿದ್ದನು. ಈ ಘಟನೆ ನಡೆದು ಕೆಲವು ದಿನಗಳು ಕಳೆದಾಗ ಯುವತಿಗೆ ಕುಸುಮಾಧರ್ನಡತೆ ಮೇಲೆ ಸಂಶಯ ಬಂದಿತ್ತು. ಅಲ್ಲದೆ ಆತ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸ್ವತಃ ಟೀ ಸ್ಟಾಲ್ ವ್ಯವಹಾರ ನಡೆಸುತ್ತಿಲ್ಲ; ಬದಲಾಗಿ ಅಲ್ಲಿನ ಹೊಟೇಲೊಂದರಲ್ಲಿ ಕೆಲಸಕ್ಕಿರುವುದೆಂದು ತಿಳಿಯಿತು. ಈ ಕಾರಣಕ್ಕಾಗಿ ಆಕೆ ಆತನಿಂದ ದೂರ ವಾಗಲು ಪ್ರಯತ್ನಿಸಿದ್ದಳು. ಇದರಿಂದ ಕೋಪಗೊಂಡ ಕುಸುಮಾಧರ್ ಆಕೆಯ ಅಶ್ಲೀಲ ವೀಡಿಯೋ ತುಣುಕುಗಳನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದನು. ಇದು ಯುವತಿಯ ಸಂಬಂಧಿಕರಿಗೆ ಗೊತ್ತಾ ಗಿದ್ದು, ಜೂ.19ರಂದು ಯುವತಿ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ದಾಖಲಿಸಿದ್ದಳು.ಇದರಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here