Saturday 10th, May 2025
canara news

ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಸುವರ್ಣ ಸಂಭ್ರಮ:ಅಂತರ್ ಶಾಲಾ ಸಾಂಸ್ಕøತಿಕ ಸ್ಪರ್ಧೆ

Published On : 14 Aug 2017   |  Reported By : Bernard J Costa


ಕುಂದಾವುರ: ಸುವರ್ಣ ಸಂಭ್ರಮದಲ್ಲಿರುವ ಸೈಂಟ್ ಮೇರಿಸ್ ಪ್ರೌಢಶಾಲೆ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಮೂಡಿಸುವ ಅಂತರ್ ಶಾಲಾ ಸಾಂಸ್ಕøತಿಕ ಸ್ಪರ್ಧೆಯನ್ನು ಸಂಘಟಿಸಿ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಹೆಚ್ಚಿಸಲು ಪ್ರಯತ್ನಿಸಿದ ಕ್ರಮ ಶ್ಲಾಘನೀಯ ಎಂದು ಎಲ್‍ಐಸಿ ಅಧಿಕಾರಿ, ಹಿರಿಯ ರೋಟೆರಿಯನ್ ಎಚ್.ಎಸ್ ಹತ್ವಾರ್ ಹೇಳಿದರು.

ಅವರು ಶುಕ್ರವಾರ ಕುಂದಾಪುರದ ಸೈಂಟ್ ಮೇರಿಸ್ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಅಂಗವಾಗಿ, ರೋಟರಿ ಕ್ಲಬ್ ಕುಂದಾಪುರ, ಸೈಂಟ್ ಮೇರಿಸ್ ಪ್ರೌಢಶಾಲೆಯ ಇಂಟರ್ಯಾಕ್ಟ್ ಕ್ಲಬ್ ಆಶ್ರಯದಲ್ಲಿ ಆಯ್ದ ಪ್ರೌಢಶಾಲೆಗಳ ಇಂಟರ್ಯಾಕ್ಟ್ ಕ್ಲಬ್ ಸದಸ್ಯರಿಗಾಗಿ ನಡೆದ ಅಂತರ್ ಶಾಲಾ ಸಾಂಸ್ಕøತಿಕ ಸ್ಪರ್ಧೆ ಮಾ ತುಜೇ ಸಲಾಂನ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ವಂ.ಫಾ. ಅನಿಲ್ ಡಿ. ಸೋಜಾ ವಹಿಸಿದ್ದರು.
ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಗಣೇಶ್ ಐತಾಳ್ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಹಳೆ ವಿದ್ಯಾರ್ಥಿ, ಖ್ಯಾತ ಇಂಜಿನೀಯರ್ ಸತ್ಯಶಂಕರ್, ತೀರ್ಪುಗಾರರಾದ ಗಣೇಶ್ ಗಂಗೊಳ್ಳಿ, ರವಿಶಂಕರ್ ಹೆಬ್ಬಾರ್, ಶಿವಾನಂದ ಕೋಟೇಶ್ವರ,ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಚೇತನಾ, ಶಾಲಾ ವಿದ್ಯಾರ್ಥಿ ನಾಯಕಿ ಸ್ಮಿತಾ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾಜಿ ಸೈನಿಕ ಸುಂದರ್ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸುವರ್ಣ ಮಹೋತ್ಸವದ ಸಮಿತಿಯ ಅಧ್ಯಕ್ಷ ಲೂಯಿಸ್ ಫೆರ್ನಾಂಡಿಸ್ ಸ್ವಾಗತಿಸಿದರು. ಹಿರಿಯ ಶಿಕ್ಷಕ ಸ್ಟ್ಯಾನ್ಲಿ ದಿನಮಣಿ ಪ್ರಾಸ್ತಾವನೆಗೈದರು. ಶಿಕ್ಷಕಿಯರಾದ ಅಸುಂತ ಲೋಬೋ, ಪ್ರೀತಿ ಪಾಯಸ್ ಸಹಕರಿಸಿದರು. ಶಿಕ್ಷಕಿ ಸ್ಮಿತಾ ಡಿ ಸೋಜಾ ವಿಜೇತರ ಪಟ್ಟಿ ವಾಚಿಸಿದರು. ಶಿಕ್ಷಕರಾದ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿ,ಭಾಸ್ಕರ ಗಾಣಿಗ ವಂದಿಸಿದರು.

ಆಯ್ದ ಪ್ರೌಢಶಾಲೆಗಳ ಇಂಟರ್ಯಾಕ್ಟ ಕ್ಲಬ್ಬ್‍ನ ಸದಸ್ಯರಿಗೆ ಏರ್ಪಡಿಸಿದ ಈ ಸ್ಪರ್ಧೆಯಲ್ಲಿ ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಪ್ರಥಮ ಸ್ಥಾನ ಪಡೆದರೆ, ಹಂಗಳೂರಿನ ಸೈಂಟ್ ಪಿಯುಸ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಪಡೆಯಿತು. ಹೆಮ್ಮಾಡಿಯ ಜನತಾ ಪ್ರೌಢಶಾಲೆ ತೃತೀಯ ಸ್ಥಾನ ಪಡೆದಿದೆ. ಇದೇ ಶಾಲೆ ಅತ್ಯುತ್ತಮ ನಿರೂಪಣೆಗೆ ಪ್ರಶಸ್ತಿ ಪಡೆಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here