Saturday 10th, May 2025
canara news

ಅಸಹಾಯಕ ವ್ಯಕ್ತಿಗೆ ನೂತನ ತಾರಸಿ ನಿವಾಸ ಹಸ್ತಾಂತರಿಸಿ

Published On : 15 Aug 2017   |  Reported By : Rons Bantwal


ಸಂತ ಕ್ರಿಸ್ಟೋಫರ್ ಅಸೋಸಿಯೇಶನ್ ಬಂಟ್ವಾಳ ಸಂಭ್ರಮಿಸಿದ 35ನೇ ವಾರ್ಷಿಕೋತ್ಸವ ಮುಂಬಯಿ (ಬಂಟ್ವಾಳ), ಆ.15: ಸಂತ ಕ್ರಿಸ್ಟೋಫರ್ ಅಸೋಸಿಯೇಶನ್ (ರಿ.) ಬಂಟ್ವಾಳ ಮತ್ತು ಮೊಡಂಕಾಪು ಚರ್ಚ್ ಘಟಕವು ತನ್ನ 35ನೇ ವಾರ್ಷಿಕೋತ್ಸವವನ್ನು ಕಳೆದ ಭಾನುವಾರ ಮೊಡಂಕಾಪು ಅಲ್ಲಿನ ಇನ್ಫೆಂಟ್ ಜೀಜಸ್ ಚರ್ಚ್‍ನಲ್ಲಿ ಅದ್ದೂರಿಯಾಗಿ ಸಂಭ್ರಮಿಸಿತು.

ವಾರ್ಷಿಕೋತ್ಸವದ ಅಂಗವಾಗಿ ಇನ್ಫೆಂಟ್ ಜೀಜಸ್ ಚರ್ಚ್‍ನ ಧರ್ಮಗುರು ರೆ| ಫಾ| ಮೆಕ್ಸಿಮ್ ಎಲ್.ನೊರೊನ್ಹಾ ಅಭಿವಂದನಾ ಸಂಭ್ರಮಿಕಪೂಜೆ ನೇರವೇರಿಸಿ ಉಪಸ್ಥಿತ ಎಲ್ಲಾ ವಾಹನಗಳನ್ನು ಆಶೀರ್ವಚಿಸಿ ನೆರೆದ ಸರ್ವ ವಾಹನ ಚಾಲಕ-ಮ್ಹಾಲಕರನ್ನು ಹರಸಿದರು ಹಾಗೂ ವಾರ್ಷಿಕೋತ್ಸವ ಸ್ಮರಣಾರ್ಥ ಪಲ್ಲಮಜಲು ಕುಪ್ಪಿಲ ನಿವಾಸಿ ಸ್ಟೇನಿ ಡಿ'ಸೋಜಾ ಎಂಬ ಅಸಹಾಯಕರಿಗೆ ಅಸೋಸಿಯೇಶನ್ ಹೊಸದಾಗಿ ನಿರ್ಮಿಸಿದ 550 ಚದರ ಅಡಿ ವಿಸ್ತೀರ್ಣವುಳ್ಳ ತಾರಸಿ ನೂತನ ನಿವಾಸವನ್ನು ಆಶೀರ್ವಚಿಸಿ ಹಸ್ತಾಂತರಿಸಿದ ತನ್ನ ಅಧ್ಯಕ್ಷತೆಯಲ್ಲಿ ಫಾ| ನೊರೊನ್ಹಾ ಸಮಾರಂಭದ ನೇರವೇರಿದರು.

ಮುಖ್ಯ ಅತಿಥಿsಗಳಾಗಿ ಉದ್ಯಮಿ ಫೆsÀ್ರಡ್ರಿಕ್ ಡಿ'ಸೋಜಾ ಆಗ್ರಾರ್, ಅತಿಥಿüಗಳಾಗಿ ಬಿ.ಸಿ.ರೋಡುನ ಯುವ ಹೆಸರಾಂತ ವಕೀಲ ನ್ಯಾಯವಾದಿ ರೋ| ಅಶ್ವನಿ ಕುಮಾರ್ ರೈ ಮತ್ತು ಚರ್ಚ್‍ನ ಸಹಾಯಕ ಧರ್ಮಗುರು ಫಾ| ಆಶ್ವಿನ್ ಕಾರ್ಡೊಜಾ, ಅಸೋಸಿಯೇಶನ್‍ನ ಕೋಶಾಧಿಕಾರಿ ಸಂದೀಪ್ ಮಿನೇಜಸ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಅಸೋಸಿಯೇಶನ್‍ನ ಶಾಂತಿಪ್ರಕಾಶ್ ಡಿ'ಸೋಜಾ ಸ್ವಾಗತಿಸಿ ಪ್ರಸ್ತಾವನೆಗೈದರು. ಫ್ರಾನ್ಸಿಸ್ ಸಲ್ಡಾನಾ ಕಾರ್ಯಕ್ರಮದ ಕಾರ್ಯನಿರ್ವಹಿಸಿದರು. ಕಾರ್ಯದರ್ಶಿ ಲಿಯೋ ಬೇಸಿಲ್ ಫೆರ್ನಾಂಡಿಸ್ ಧನ್ಯವದಿಸಿದ್ದು ಬಡ ವ್ಯಕ್ತಿಯೋರ್ವರಿಗೆ ಸ್ವಂತ ನಿವಾಸ ಕೊಡಿಸುವ ಮುಖೇನ ಉಪಸ್ಥಿತ ಸರ್ವರೂ ವಾರ್ಷಿಕೋತ್ಸವವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here