Saturday 10th, May 2025
canara news

ಕುಂದಾಪುರ ಚರ್ಚಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

Published On : 15 Aug 2017   |  Reported By : Bernard D'Costa


ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದಿಂದ ಕುಂದಾಪುರ ಹೋಲಿ ರೋಜರಿ ಮಾತೆಯ ಇಗರ್ಜಿಯ ಮೈದಾನದಲ್ಲಿ, 71 ನೇಯ ಸ್ವಾತಂತ್ರ್ಯತ್ಸೊವನ್ನು ಆಚರಿಸಿಲಾಯಿತು.

ಚರ್ಚಿನ ಸಹಾಯಕ ಧರ್ಮಗುರು ವಂ| ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಎನ್.ಸಿ.ಸಿ. ಕೆಡೇಟಗಳಿಂದ ಗೌರವ ಸ್ವೀಕರಿಸಿ ಧ್ವಜಾ ರೋಹಣ ಗೈದರು ‘ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗಲು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಪ್ರಾಣ ಬಲಿದಾನವನ್ನು ನೀಡಿದ್ದಾರೆ, ಅವರು ಪ್ರಮಾಣಿಕ ದೇಶ ಭಕ್ತಿಗಳಾಗಿದ್ದರು. ಅವರ ಬಲಿದಾನದ ಫಲ, ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಈಗ ದೇಶದಲ್ಲಿ ಭ್ರಶ್ಟತೆ, ಅಶಾಂತಿಯ ವಾತವರಣ ಇದೆ, ಪಾರ್ಲಿಮೆಂಟನಲ್ಲಿ ಕೂಡ ಅಶಾಂತಿ ಇದೆ, ಸ್ಪೀಕರ ಮೇಲೆ ಪತ್ರ ಎಸೆಯುವುದು, ಆಸನಗಳನ್ನು ಚೆಲ್ಲಪಿಲ್ಲಿ ಮಾಡುವುದು ಇದೆಲ್ಲಾ ನಮ್ಮ ಸಂಸ್ಕ್ರತಿಗೆ ಹೇಳಿಸಿದಲ್ಲ, ನಮ್ಮ ಸ್ವಾತಂತ್ರ್ಯವನ್ನು ದೇಶದ ಒಳಿತಿಗಾಗಿ ಬಳಸಿಕೊಳ್ಳುವ’ ಎಂದು ಸಂದೇಶ ನೀಡಿದರು.

 

ಚರ್ಚಿನ ಪ್ರಧಾನ ಧರ್ಮಗುರು ವಂ|ಅನಿಲ್ ಡಿಸೋಜಾ, ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಧರ್ಮಗುರು ವಂ|ಪ್ರವೀಣ್ ಎ ಮಾರ್ಟಿಸ್, ನಿರ್ಗಮನ ಅಧ್ಯಕ್ಷ ವಿಲ್ಸನ್ ಆಲ್ಮೇಡಾ, ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು. ಘಟಕದ ನಿಯೋಜಿತ ಅಧ್ಯಕ್ಷೆ ಶೈಲಾ ಆಲ್ಮೇಡಾ ಸ್ವಾಗತ ಕೋರಿದರು. ಇಗರ್ಜಿಯ ಗಾಯನ ಮಂಡಳಿ ರಾಸ್ಠ್ರ ಭಕ್ತಿ ಗೀತೆಗಳನ್ನು ಹಾಡಿತು. ಸಹ ಕಾರ್ಯದರ್ಶಿಜೂಲಿಯೆಟ್ ಪಾಯ್ಸ್ ವಂದಿಸಿದರು. ಕಾರ್ಯಕ್ರಮವನ್ನು ವಿನಯಾ ಡಿಕೋಸ್ತಾ ನಿರುಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here