Friday 4th, July 2025
canara news

ಮಂಗಳೂರಿನ ಸೌಜನ್ಯಾಗೆ "ಮಿಸಸ್ ಪಾಪ್ಯುಲರ್ 2017' ಕಿರೀಟ

Published On : 16 Aug 2017   |  Reported By : Canaranews Network


ಮಂಗಳೂರು: ವಿಯೆಟ್ನಾಂನಲ್ಲಿ ಜು. 27ರಿಂದ ಆ. 4ರ ವರೆಗೆ ನಡೆದ ಮಿಸಸ್ ಇಂಡಿಯಾ ವರ್ಲ್ಡ್ವೈಡ್ ಪೂರಕ ತರಬೇತಿ ಹಾಗೂ ಸ್ಪರ್ಧೆಯಲ್ಲಿ ಮಂಗಳೂರಿನ ಸೌಜನ್ಯಾ ಹೆಗ್ಡೆ 7ನೇ ಸ್ಥಾನ ಪಡೆಯುವುದರೊಂದಿಗೆ "ಮಿಸಸ್ ಪಾಪ್ಯುಲರ್ 2017' ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸೌಜನ್ಯಾ, ಹಾಟ್ ಮೊಂಡೆ ಸಂಸ್ಥೆಯು ಈ ಸ್ಪರ್ಧೆಯನ್ನು ನಡೆಸಿತ್ತು ಎಂದರು.ವಿವಿಧ ದೇಶಗಳ 8,000 ಸ್ಪರ್ಧಿಗಳು ಭಾಗವಹಿಸಿದ್ದರು. ಅಂತಿಮವಾಗಿ "ಬ್ಯೂಟಿ ವಿತ್ ಹಾರ್ಟ್' ಸೇರಿದಂತೆ 15 ವಿವಿಧ ಟೈಟಲ್ಗಳಿಗಾಗಿ 60 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿತ್ತು.

ಇದರರಲ್ಲೂ ಶಾರ್ಟ್ಲಿಸ್ಟ್ ಮಾಡಿ 50ಕ್ಕೆ ಇಳಿಸಲಾಗಿತ್ತು. ಬಳಿಕ ಟಾಪ್ 25 ಮಂದಿಯನ್ನು ಆಯ್ಕೆ ಮಾಡಲಾಯಿತು. ಬಳಿಕ ಟಾಪ್ 14ರ ಆಯ್ಕೆ ನಡೆದಿದ್ದು, ಇದರಲ್ಲೂ ನಾನು ಆಯ್ಕೆಯಾಗಿದ್ದೆ. ಅಂತಿಮವಾಗಿ 7ನೇ ಸ್ಥಾನ ಪಡೆಯುವುದರೊಂದಿಗೆ ಮಿಸಸ್ ಪಾಪ್ಯುಲರ್ 2017 ಕಿರೀಟ ಪಡೆದುಕೊಂಡೆ ಎಂದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here