Saturday 10th, May 2025
canara news

ಅರ್ಜಿ ಹಾಕಿದರೆ ಕಲ್ಲಡ್ಕ ಶಾಲೆಗೆ ಬಿಸಿಯೂಟ ನೀಡಲು ಸಿದ್ಧ

Published On : 16 Aug 2017   |  Reported By : Canaranews Network


ಮಂಗಳೂರು: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಪ್ರೌಢಶಾಲೆಯ ಮಕ್ಕಳ ಊಟಕ್ಕೆ ಸರಕಾರ ಕನ್ನ ಹಾಕಿದೆ ಎಂಬ ಆರೋಪ ರಾಜಕೀಯ ಪ್ರೇರಿತವಾದುದು.

ಪ್ರಭಾಕರ ಭಟ್ ಅವರು ಅರ್ಜಿಹಾಕಿದರೆ ಅನುದಾನಿತ ಶಾಲೆಯಾಗಿರುವ ಕಲ್ಲಡ್ಕ ಪ್ರೌಢಶಾಲೆಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ಪ್ರೌಢಶಾಲೆಗಳಿಗೆ ಕೊಲ್ಲೂರು ದೇಗುಲದಿಂದ ನೆರವು ರದ್ದು ಮಾಡಿರುವ ಬಗ್ಗೆ ಉಂಟಾಗಿರುವ ವಿವಾದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಕ

ಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಪ್ರೌಢಶಾಲೆಯು ಅನುದಾನಿತ ಶಿಕ್ಷಣ ಸಂಸ್ಥೆಯಾಗಿದೆ. ಇಲ್ಲಿ ಸರಕಾರದ ಬಿಸಿಯೂಟ ಸೌಲಭ್ಯಕ್ಕೆ ಅವಕಾಶವಿದೆ. ಆದರೆ ಪ್ರಭಾಕರ ಭಟ್ ಅವರು ಈ ಶಾಲೆಗೆ ಬಿಸಿಯೂಟ ಸೌಲಭ್ಯ ಬೇಡ ಎಂದು ಬರೆದುಕೊಟ್ಟಿದ್ದರು. ಆ ಮೂಲಕ ಮಕ್ಕಳ ಅನ್ನವನ್ನು ಕಸಿದುಕೊಂಡಿದ್ದಾರೆ. ಮಕ್ಕಳ ಅನ್ನಕ್ಕೆ ರಮಾನಾಥ ರೈ ಕನ್ನ ಹಾಕಿದ್ದಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಲಿ ಎಂದರು.ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆ ಮಾತ್ರ ಅನುದಾನ ರಹಿತ ಖಾಸಗಿ ಶಾಲೆಯಾಗಿದ್ದು ಅದಕ್ಕೆ ಬಿಸಿಯೂಟ ನೀಡಲು ಸರಕಾರದ ನಿಯಮದಂತೆ ಅವಕಾಶವಿಲ್ಲ.

ಅಲ್ಲೇ 100 ಮೀಟರ್ ದೂರದಲ್ಲಿ ಸರಕಾರಿ ಶಾಲೆ ಇದ್ದು, ಅಲ್ಲಿ ಬಿಸಿಯೂಟ, ಹಾಲು, ಸಮವಸ್ತ್ರ, ಶೂ, ಉಚಿತ ಪುಸ್ತಕ ಸಹಿತ ಸರಕಾರದ ಎಲ್ಲ ಸವಲತ್ತು ಲಭ್ಯವಿದೆ. ಆದುದರಿಂದ ಮಕ್ಕಳನ್ನು ಆ ಶಾಲೆಗೆ ಕಳುಹಿಸಿ ಎಂಬುದು ಹೆತ್ತವರಲ್ಲಿ ನನ್ನ ಮನವಿಯಾಗಿದೆ ಎಂದವರು ಹೇಳಿದರು.ಕಲ್ಲಡ್ಕ ವಿದ್ಯಾಸಂಸ್ಥೆ ಆರ್ಥಿಕವಾಗಿ ಬಲಾಡ್ಯವಾಗಿದೆ. ಅವರಿಗೆ ಭಿಕ್ಷೆ ಬೇಡುವ ಪ್ರಮೇಯವಿಲ್ಲ ಎಂದ ಅವರು, ಮಕ್ಕಳ ಹೆಸರಿನಲ್ಲಿ ಹಣ ಸಂಗ್ರಹ ಮಾಡಿ ಇದನ್ನು ದುರುಪಯೋಗ ಮಾಡಲಾಗುತ್ತಿದೆ. ಅವರ ಈ ಶಾಲೆಗಳಲ್ಲಿ ಮಕ್ಕಳ ಮನಸ್ಸುಗಳಲ್ಲಿ ಮತೀಯ ಭಾವನೆಗಳನ್ನು ಬಿತ್ತಲಾಗುತ್ತಿದೆ ಎಂದು ಆರೋಪಿಸಿದರು. ಅನುದಾನಿತ ಶಾಲೆಗಳ ಶಿಕ್ಷಕರು ಸರಕಾರದ ಅಧೀನಕ್ಕೆ ಬರುತ್ತಿದ್ದು ಮಕ್ಕಳನ್ನು ಕರೆತಂದು ಪ್ರತಿಭಟನೆ ನಡೆಸಿರುವುದು ನಿಯಮಬಾಹಿರ. ಅವರ ವಿರುದ್ಧ ಕ್ರಮಕ್ಕೆ ಚಿಂತನೆ ಮಾಡಲಾಗುವುದು ಎಂದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here