Saturday 10th, May 2025
canara news

ಕುಂದಾಪುರ ವ್ಯಾಪರಿಗಳಿಂದ ಸ್ವಾತಂತ್ರ್ಯತ್ಸೋವ ದಿನಾಚರಣೆ+

Published On : 16 Aug 2017   |  Reported By : Bernard J Costa


ಕುಂದಾಪುರ, ಅ.15: ಕುಂದಾಪುರದ ಚಿಕ್ಕನ್‍ಸಾಲ್ ರಸ್ತೆಯಲ್ಲಿರುವ ಕೋಸ್ತಾ ಕಾಂಪ್ಲೆಕ್ಸ್ ಪರಿಸರದ ಹಲವಾರು ವ್ಯಾಪರಿಗಳು ಮತ್ತು ಕಟ್ಟಡ ಮಾಲೀಕರು ಕೋಸ್ತಾ ಕಾಂಪ್ಲೆಕ್ಸ್ ಆವರಣದಲ್ಲಿ 71 ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರು.

 

ಕೋಸ್ತಾ ಕಾಂಪ್ಲೆಕ್ಸನಲ್ಲಿ ವ್ಯವರಿಸುತ್ತಿರುವ ಚಿಲ್ಲರೆ ಮೀನುಗಾರದ ಸಂಘದ ನಿರ್ದೇಶಕರದಾದ ಮಂಜುನಾಥ ಬಾಳಿಕೆರೆ ಧ್ವಜಾ ರೋಹಣ ಮಾಡಿದರು. ಸಾಹಿತಿ ಪತ್ರಕರ್ತ ಬರ್ನಾಡ್ ಡಿಕೋಸ್ತಾ ‘ನಮಗೆ ಸ್ವಾತಂತ್ರ್ಯ ಸಿಗಲಿಕ್ಕಾಗಿ ನಮ್ಮ ಸುಮಾರು ಒಂದು ಲಕ್ಷಕಿಂತ ಸ್ವಾತಂತ್ರ್ಯ ಹೋರಾಟಗಾರು ತಮ್ಮ ಪ್ರಾಣವನ್ನು ಬಲಿಕೊಟ್ಟಿದ್ದಾರೆ, ಅವರು ಗಳಿಸಿಕೊಟ್ಟ ಸ್ವಾತಂತ್ರ್ಯ ಇಂದು ಸದುಪಯೋಗ ಆಗುವುದು ಕಂಡು ಬರುತ್ತಿಲ್ಲಾ, ರಾಜಾಕಾರಣಿಗಳು ರಾಜಕೀಯ ಕುಂತ್ರಕ್ಕಾಗಿ ಜಾತಿ ಧರ್ಮ ತಂದು ನಾಗರಿಕರನ್ನು ವಿಚಲಿತರನ್ನಾಗಿ ಮಾಡಿಸುತ್ತಾರೆ. ಆದರೆ ನಾಗರಿಕರಾದ ನಾವು ವಿಚಲಿತರಾಗದೆ ನಾವೆಲ್ಲಾ ಜಾತಿ ಧರ್ಮ ಮರೆತು ದೇಶ ಕಟ್ಟ ಬೇಕಾಗಿದೆ’ ಎಂದು ಸಂದೇಶ ನೀಡಿದರು. ಅತಿಥಿಗಳಾಗಿ ಕೋಸ್ತಾ ಕಾಂಪ್ಲೆಕ್ಷನ ಪಾಲುದಾರಾರ ವಿನಯಾ ಡಿಕೋಸ್ತಾ, ವಿಜಯ್ ಡಿಕೋಸ್ತಾ, ಲೋಬೊ ಕಾಂಪ್ಲೆಕ್ಷನ ಜೋಸೆಫ್ ಲೋಬೊ, ಶರ್ಮೀಳಾ ಡಿಕೋಸ್ತಾ, ಸೇರೆಗಾರ್ ಕಾಂಪ್ಲೆಕ್ಸನ ವಿಠಲ ಸೇರೆಗಾರ್, ಕೆ.ಬಾವ್ತಿಸ್ ಡಿಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವ್ಯಾಪರಿಗಳಾದ ರವೀಂದ್ರ, ಗೀರಿಶ, ದಿನಕರ, ಗಣೇಶ್, ರಿಚ್ಚರ್ಡ್ ಕರ್ವಾಲ್ಲೊ, ನಾಗರಾಜ್ ಭಂಡಾರಿ, ವಿಜಯ್, ಚೇತನ್, ರಮೇಶ್, ಸಂತೋಷ್ ಮಂಜುನಾಥ ಮತ್ತಿತರರು ಕಾರ್ಯಕ್ರಮದ ನೇತ್ರತ್ವ ವಹಿಸಿದ್ದರು, ಕಾರ್ಯಕ್ರಮವನ್ನು ಮಂಜುನಾಥ್ ಭಂಡಾರಿ ನೆಡೆಸಿ ದನ್ಯವಾದಗಳನ್ನು ಅರ್ಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here