Friday 4th, July 2025
canara news

ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವಾಗ ವಿದ್ಯಾರ್ಥಿ ಅಸ್ವಸ್ಥಗೊಂಡು ಹಠಾತ್ ಸಾವು

Published On : 16 Aug 2017   |  Reported By : Bernard J Costa


ಕುಂದಾಪುರ: ನಗರದ ಬಿ.ಬಿ.ಹೆಗ್ಡೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿ ಹಟ್ಟಿಕುದ್ರು ನಿವಾಸಿ ದುರ್ದೈವಿ ಅಮಿತ್ ಪೂಜಾರಿ(18) ಸಾವನ್ನಪ್ಪಿದ . ಸ್ವಾತಂತ್ರ್ಯೋತ್ಸವ ದಿನಾಚರಣೆ ಆಚರಿಸಲು ಕಾಲೇಜಿನಲ್ಲಿ ಸೇರಿದಾಗ ಈ ದುರ್ದೈವದ ಘಟನೆ ನೆಡೆಯಿತು.

ಅಮಿತ್ಗೆ ಈ ಹಿಂದೆಯೇ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆ ಇದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದು ತಿಳಿದು ಬಂದಿದೆ.

ಆಗಸ್ಟ್ ೧೫ ರಂದು ಬಿ.ಬಿ ಹೆಗ್ಡೆ ಕಾಲೇಜಿನಲ್ಲಿ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯೋತ್ಸವದ ದ್ವಜಾರೋಹಣ ಕಾರ್ಯಕ್ರಮ ಮುಗಿದ ಬಳಿಕ ಅಮಿತ್ ಎಲ್ಲಾ ವಿದ್ಯಾರ್ಥಿಗಳ ಜೊತೆಗೆ ಕಾಲೇಜಿನ ಸಭಾಂಗಣಕ್ಕೆ ಬಂದು ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದರು.

ಈ ಸಂದರ್ಭದಲ್ಲಿ ಅವರಿಗೆ ಎದೆ ನೋವು ಕಾಣಿಸಿಕೊಂಡು ಕುಳಿತಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಕಾಲೇಜಿನ ಪ್ರಾಧ್ಯಾಪಕವೃಂದ ಹಾಗೂ ಸಹಪಾಠಿಗಳು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಅಮಿತ್ ಕೊನೆಯುಸಿರೆಳೆದಿದ್ದಾರೆ.

ಕಾಲೇಜು ಶೋಕ ಸಾಗರದಲ್ಲಿ ಮುಳುಗಿತು
71ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದ ಅಮಿತ್ ಬೆಳಗ್ಗೆ ಕಾಲೇಜಿಗೆ ತಯಾರಾಗಿ ನಗುನಗುತಾ ಬಂದಿದ್ದು, ತನ್ನ ಸ್ನೇಹಿತರ ಜೊತೆ ಲವಲಿಕೆಯಿಂದ ಇದ್ದಿದ್ದರು ಎನ್ನಲಾಗಿದೆ. ಸ್ವಾತ್ರ್ಯೋತ್ಸವ ಸಂಭ್ರಮದಲ್ಲಿದ್ದ ಇಡೀ ಕಾಲೇಜು ಅಮಿತ್ ಸಾವಿನ ಸುದ್ದಿ ಬಳಿಕ ಶೋಕದಲ್ಲಿ ಮುಳುಗಿದೆ.

ಹಟ್ಟಿಕುದ್ರು ಜಡ್ಡಿನಕುದ್ರು ನಿವಾಸಿ ಆನಂದ ಹಾಗೂ ಸುಗಂಧಿ ದಂಪತಿಗಳ ಪ್ರಥಮ ಪುತ್ರರಾಗಿರುವ ಅಮಿತ್ ಈ ಹಿಂದೆ ಆರ್.ಎನ್ ಶೆಟ್ಟಿ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ್ದರು. ತಂದೆ ಬಾಂಬೆಯಲ್ಲಿ ಹೊಟೇಲ್ ಉದ್ಯೋಗಿಯಾಗಿದ್ದಾರೆ. ಅಮಿತ್ ತಂದೆ-ತಾಯಿ ಹಾಗೂ ಇಬ್ಬರು ಸಹೋದರಿಯರಾದ ಐಶ್ವರ್ಯ ಹಾಗೂ ಅನುಶ್ರೀಯನ್ನು ಅಗಲಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here