Friday 26th, April 2024
canara news

ಕನ್ನಡ ಚಿಂತನ-ಸಾಂಸ್ಕೃತಿಕ ಸೌರಭ ಮತ್ತು ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ ಯಲ್ಲಿ ಪ್ರಭಾ ಸುವರ್ಣ ಮುಂಬಯಿ ಇವರ `ಗೊಂಚಲು' ಕೃತಿ ಬಿಡುಗಡೆ

Published On : 17 Aug 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಆ.17: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಮಂಜುನಾಥ್ ಎಜ್ಯುಕೇಶನ್ ಟ್ರಸ್ಟ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕಳೆದ ಸೋಮವಾರ ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಕನ್ನಡ ಚಿಂತನ ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಸಲ್ಪಟ್ಟಿತು. ಇದೇ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಿಶೇಷ ಆಮಂತ್ರಿತ ಸದಸ್ಯೆ, ಸಮಾಜ ಸೇವಕಿ ಪ್ರಭಾ ಎನ್.ಪಿ ಸುವರ್ಣ ಇವರ `ಗೊಂಚಲು' ಕೃತಿ ಬಿಡುಗಡೆ ಗೊಳಿಸಲ್ಪಟ್ಟಿತು.

ಕಾರ್ಯಕ್ರಮವನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಬಿ.ಎ.ಮೊಯಿದ್ದೀನ್ ಬಾವ ಉದ್ಘಾಟಿಸಿ ಉಡುಪಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತ್ ಗೌರವ ಕಾರ್ಯದರ್ಶಿ ಡಾ| ಸುಬ್ರಹ್ಮಣ್ಯ ಶೆಟ್ಟಿ ಕುಂದಾಪುರ ಅವರಿಗೆ ಕರ್ನಾಟಕ ಸೌರಭ ಪ್ರಶಸ್ತಿ ನೀಡಿ ಗೌರವಿಸಿದರು. ಚಿರಾಗ್ ಮಂಗಳೂರು ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕಾರ್ಯಾಧ್ಯಕ್ಷ ಇಂ| ಬಿ.ಹೇಮಂತ್ ಕುಮಾರ್ ಮತ್ತು ಮಹಾನಗರದಲ್ಲಿನ ಹಿರಿಯ ಸಮಾಜ ಸೇವಾಕರ್ತ ಎನ್.ಪಿ ಸುವರ್ಣ ಮುಂಬಯಿ ಮುಖ್ಯ ಅತಿಥಿüಗಳಾಗಿದ್ದರು.

ಗೌರವ ಅತಿಥಿüಯಾಗಿ ಉಪಸ್ಥಿತ ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಶಾಂತಕುಮಾರ್ ಹೆಚ್.ಎಂ ಅವರು ಪ್ರಭಾ ಸುವರ್ಣ ಮುಂಬಯಿ ಬರೆದ `ಗೊಂಚಲು' ಕೃತಿ ಬಿಡುಗಡೆ ಗೊಳಿಸಿ ಇಂತಹ ಅನೇಕ ಕೃತಿಗಳು ಹೊರಬರಲಿ.ನಮ್ಮಲ್ಲಿ ಓದುವ ಪ್ರವೃತ್ತಿ ಬೆಳೆಯಲಿ ಎಂದು ಶಾಂತಕುಮಾರ್ ಹಾರೈಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶ ನಾವೆಲ್ಲರೂ ಒಂದು ಎಂಬುದನ್ನು ಸಾರುತ್ತಿದೆ. ಕನ್ನಡದ ಕೆಲಸದಿಂದ ನಮ್ಮೆಲ್ಲರನ್ನು ಒಂದು ಗೂಡಿಸುವ ಒಳ್ಳೆಯ ಕಾರ್ಯ ಇಲ್ಲಿ ನಡೀತಾ ಇದೆ.ನಾವು ಮನುಷ್ಯ ಪ್ರೀತಿ ಬೆಳೆಸಿಕೊಳ್ಳಬೇಕು. ಸಂಕುಚಿತ ಮನೋಭಾವದ ಅಡ್ಡಗೋಡೆಗಳನ್ನು ಕೆಡವಿ ಹಾಕಬೇಕು. ಕನ್ನಡದ ಕೆಲಸ ನಮ್ಮನ್ನು ಒಂದು ಗೂಡಿಸಲಿ ಎಂದÀು ಶಾಸಕ ಬಾವ ತಿಳಿಸಿದರು.

ನಮ್ಮ ಕನ್ನಡ ಜನ ಇವತ್ತು ಇಂಗ್ಲಿಷ್ ಬಂಧನದಲ್ಲಿ ಒದ್ದಾಡುತ್ತಾ ಇದ್ದೇವೆ. ಕನ್ನಡ ಬರೇ ಕೊರಳಿನ ಭಾಷೆ ಆಗದೆ ಕರುಳಿನ ಭಾಷೆ, ಹೃದಯದ ಭಾಷೆ ಆಗಬೇಕು. ಆಗಮಾತ್ರ ನಮ್ಮಲ್ಲಿ ಭಿನ್ನತೆ ಮಾಯವಾಗುತ್ತದೆ. ಚಳಿಗಾಳಿ,ಮಳೆ ಬಿಸಿಲೆನ್ನದೆ ಸಧೃಡವಾಗಿ ನಿಂತಿರುವ ಬಾಹುಬಲಿ ಯಂತಹ ದೃಢ ಮನಸ್ಸನ್ನು ನಾವು ಬೆಳೆಸಿ ಕೊಳ್ಳಬೇಕು.ಕನ್ನಡ ಬೆಳೆಸುವ ಕೆಲಸ ನಿರಂತರವಾಗಿ ಸಾಗಬೇಕು ಎಂದÀು ಪ್ರಶಸ್ತಿಗೆ ಉತ್ತರಿಸಿ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿದರು.

ತುಳು ಅಕಾಡೆಮಿ ಸದಸ್ಯರಾದ ಸಾಹಿತಿ ಚಂದ್ರಶೇಖರ ಗಟ್ಟಿ ಬೋಳೂರು ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ ನಡೆಸಲ್ಪಟ್ಟಿದ್ದು ಶಿವಣ್ಣ ಬಿ.ಬಿ ಶೀತರ್ ಮೈಸೂರು, ಪ್ರಭಾ ಸುವರ್ಣ, ಮುಸ್ತಾಫ ಕೆ.ಹೆಚ್ ಕೊಡಗು, ಕು| ಪ್ರಿಹಾಲಿ ಹರೀಶ್, ಕುದ್ರೆಪ್ಪಾಡಿ ಜಗನ್ನಾಥ ಆಳ್ವಾ, ಗುಣವತಿ ಕಿನ್ಯ ಸ್ವರಚಿತ ಕವನ ವಾಚಿಸಿದರು.

ಸರಿಯಾದ ಕಾರ್ಯಕ್ರಮ ಸರಿಯಾದ ವೇದಿಕೆಯಲ್ಲಿ ನಡೆದರೆ ಎಲ್ಲ ಸರಿಯಾಗಿ ನಡೆಯುತ್ತದೆ ಎನ್ನುವುದನ್ನು ಈ ಸಭೆ ಸಾಬೀತು ಪಡಿಸಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ನಮ್ಮಲ್ಲಿ ಸ್ಲಂಗಳು ಮಾಯವಾಗಿಲ್ಲ. ಅಲ್ಲಿ ಬಡವರು ಇನ್ನೂ ನರಳುತ್ತ ಇದ್ದಾರೆ ಇದು ದುರದೃಷ್ಟಕರ ಎಂದÀು ಡಾ| ಸುಬ್ರಹ್ಮಣ್ಯ ಅವರು ಕನ್ನಡ ಚಿಂತನ ಉಪನ್ಯಾಸ ನೀಡಿ ತಿಳಿಸಿದರು.

ಹೃದಯ ವಾಹಿನಿ ಕರ್ನಾಟಕವು ಕನ್ನಡದ ಕೆಲಸವನ್ನು ಮಂಗಳೂರಲ್ಲಿ ಮಾತ್ರವಲ್ಲ ಸಾಗರದಾಚೆ ಕೂಡ ಮಾಡಿ ಕನ್ನಡದ ಕಂಪನ್ನು ಪಸರಿಸುತ್ತಿದ್ದಾರೆ. ತಿಂಗಳಿಗೊಂದು ಕಾರ್ಯ ಕ್ರಮ ಮಾಡುತ್ತಿದ್ದಾರೆ. ಈ ರೀತಿಯ ಕವಿಗೋಷ್ಠಿಯಿಂದಾಗಿ ಹೊಸ ಹೊಸ ಕವಿಗಳು, ಕವಿತೆಗಳು ಹುಟ್ಟಲು ಅವಕಾಶ ವಾಗುತ್ತದೆ ಎನ್ನುತ್ತಾ ಚಂದ್ರಶೇಖರ ಗಟ್ಟಿ ತಮ್ಮ ತುಳು ಮತ್ತು ಕನ್ನಡ ಕವನ ವಾಚಿಸಿದರು.

ಎನ್.ಪಿ ಸುವರ್ಣ ಮಾತನಾಡಿ ಗೊಂಚಲು ಕೃತಿ ಪ್ರಕಟಿಸುವ ಕನಸು ಯಾವ ರೀತಿ ಸಾಕಾರಗೊಂಡಿತು ಎಂಬುದನ್ನು ವಿವರಿಸಿ ಮಂಜುನಾಥ ಸಾಗರ್‍ರಿಗೆ ಕೃತಜ್ಞತೆ ಸಲ್ಲಿಸಿದರು.

ಸ್ವರಸಂಗಮ ತಂಡದ ಭಗವಾನ್ ಚೇಳಾರು, ಚಿತ್ರಲೇಖ ಭಗವಾನ್, ಲತಾ ಶಾಂತಕುಮಾರ್ ಮತ್ತು ಶಾಂತ ಕುಮಾರ್ ರಿಂದ ಕನ್ನಡ ಗೀತೆ ಚಿತ್ರಗೀತೆಗಳ ಗಾಯನ ನಡೆಯಿತು. ಸ್ವಾತಂತ್ರ್ಯೋತ್ಸವ ಮತ್ತು ದೇಶಪ್ರೇಮದ ಬಗ್ಗೆ ವಿದ್ಯಾಥಿರ್üಗಳಿಗೆ ಏರ್ಪಡಿಸಿದ್ದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತ ರಾದ ಪ್ರಜೇಶ್ ಶೆಟ್ಟಿ (ಪ್ರಥಮ) ಅನೂಪ್ ಎ. (ದ್ವಿತೀಯ) ಓಜಸ್ವಿ (ತೃತೀಯ )ಯವರಿಗೆ ಬಹುಮಾನ ವಿತರಿಸಲಾಯಿತು.

ಅಧ್ಯಕ್ಷ ಭಾಷಣದಲ್ಲಿ ಹೃದಯವಾಹಿನಿ ಅಧ್ಯಕ್ಷ ಇಂ| ಕೆ.ಪಿ.ಮಂಜುನಾಥ ಸಾಗರ್ ಮಾತನಾಡಿ ಪ್ರತಿ ತಿಂಗಳೂ ಕನ್ನಡದ ಕಾರ್ಯ ಕ್ರಮ ನಡೆಸುತ್ತಿದ್ದೇವೆ.ಕರ್ನಾಟಕ ರಾಜ್ಯದ ಗಡಿಯಲ್ಲಿ ಇತರ ಅನೇಕ ರಾಜ್ಯಗಳು ಇರುವುದರಿಂದ ಕನ್ನಡದ ಮೇಲೆ ಇತರ ಭಾಷೆ ಗಳ ಒತ್ತಡ ಇದೆ.ಹಾಗಾಗಿ ಸದಾಕಾಲ ಕನ್ನಡ ಬಳಸುವ, ಬೆಳೆಸುವ ಕಾರ್ಯ ಕ್ರಮ, ಕನ್ನಡ ಚಿಂತನೆ ನಡೆಯ ಬೇಕಾದ ಅನಿವಾರ್ಯತೆ ಇದೆ ಎಂದರು.

ಎಸ್.ಭಗವಾನ್ ಪ್ರಾರ್ಥನೆಯನ್ನಾಡಿದರು. ರವಿ ಎಂ.ಕುಲಶೇಖರ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಿಯಾ ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ಕಾಸರಗೋಡು ಅಶೋಕ್ ಕುಮಾರ್ ವಂದಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here