Thursday 28th, March 2024
canara news

ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Published On : 17 Aug 2017   |  Reported By : Rons Bantwal


ಮುಂಬಯಿ, ಆ.17: ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಹಾಗೂ ಬಿ. ಎಸ್.ಕೆ.ಬಿ. ಎಸೋಸಿಯೇಶನ್,ಗೋಕುಲ ಸಾಯನ್, ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಸೋಮವಾರ, ದಿನಾಂಕ 14.8.2017 ರಂದು ಶ್ರೀ ಕೃಷ್ಣ ಬಾಲಾಲಯ, ಆಶ್ರಯ, ನೆರೂಲ್ ನಲ್ಲಿ ವಿಜೃಂಭಣೆಯಿಂದ ಆಚರಿಸಿತು.

ಗೋಕುಲ ಸ್ಥಾಪಕ ಸದಸ್ಯರಲ್ಲೊಬ್ಬರಾದ ದಿ. ಯು.ವಿ. ಉಪಾಧ್ಯರವರ ಕುಟುಂಬ ಸದಸ್ಯರು ಬಾಲಾಲಯ ಹಾಗೂ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯ ವಿಶೇಷ ಅಲಂಕಾರಕ್ಕಾಗಿ ವಿವಿಧ ಪುಷ್ಪಗಳನ್ನು ಪ್ರಾಯೋಜಿಸಿದ್ದರು. ವೇ. ಮೂ. ದಿನೇಶ್ ಉಪ್ಪರ್ಣ ಮತ್ತು ಸಹ ಅರ್ಚಕ ವರ್ಗದವರು ಶ್ರೀ ದೇವರ ಮೂರ್ತಿಯನ್ನು ಅತ್ಯಂತ ಆಕರ್ಷಕವಾಗಿ ಅಲಂಕರಿಸಿದ್ದರು. ಎಚ್ ಬಿ. ಎಲ್. ರಾವ್ ಅವರು ದೇಣಿಗೆ ನೀಡಿದ ಕಾಲುದೀಪದ ದೀಪ ಪ್ರಜ್ವಲನೆ ಗೈಯುವುದರೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಗೋಕುಲ ಭಜನಾ ಮಂಡಳಿ, ಶ್ರೀ ಹರಿಕೃಷ್ಣ ಭಜನಾ ಮಂಡಳಿ ಹಾಗೂ ಶ್ರೀ ಕೃಷ್ಣ ಭಜನಾ ಮಂಡಳಿಯವರಿಂದ ಸುಮಾರು 3 ಗಂಟೆಗಳ ಕಾಲ ಭಜನೆ ನೆರವೇರಿದ ನಂತರ ಅರ್ಚಕ ವರ್ಗ ಹಾಗೂ ಭಜನಾ ಮಂಡಳಿಗಳಿಂದ ವಿಷ್ಣು ಸಹಸ್ರ ನಾಮ, ಶ್ರೀ ಕೃಷ್ಣಾಷ್ಟೋತ್ತರ ಸ್ತೋತ್ರ ಪಠನೆಗಳೊಂದಿಗೆ ಪೂಜಾ ವಿಧಿಗಳನ್ನು ಶ್ರೀ ದಿನೇಶ್ ಉಪ್ಪರ್ಣ ಅವರು ವಿಧಿವತ್ತಾಗಿ ನೆರವೇರಿಸಿದರು. ದಿನೇಶ್ ಉಪ್ಪರ್ಣ ರವರು ಕಂಸನ ಹಾಗೂ ಅನೇಕ ದೈತ್ಯರ ವಧೆ ಮತ್ತು ಧರ್ಮ ಸಂಸ್ಥಾಪನೆಗಾಗಿ ಅವತರಿಸಿದ ಶ್ರೀ ಕೃಷ್ಣನ ಜನ್ಮದಿನವಾದ ಇಂದು ಉಪವಾಸ, ಭಜನೆ, ಕೀರ್ತನೆ, ಸ್ತೋತ್ರ ಪಠನೆ, ಮಂತ್ರ ಪುಷ್ಪಾರ್ಚನೆಗಳಿಂದ ಶ್ರೀಕೃಷ್ಣನ ಆರಾಧನೆಯನ್ನು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಭಕ್ತಿ ಶ್ರದ್ಧಾ ಪೂರ್ವಕವಾಗಿ ಮಾಡಿದ್ದೇವೆ.

ಶ್ರೀ ದೇವರ ಅನುಗ್ರಹದಿಂದ ಹಾಗೂ ಭಕ್ತಾದಿಗಳ ಸಹಕಾರದಿಂದ ಶ್ರೀ ಕೃಷ್ಣ ಮಂದಿರದ ನವ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನೆರವೇರಿ ಶ್ರೀ ಗೋಪಾಲಕೃಷ್ಣ ದೇವರ ಪುನರ್ ಪ್ರತಿಷ್ಠಾಪನೆ ಅತಿ ಶೀಘ್ರವಾಗಿ ನೆರೆವೇರುವಂತಾಗಲಿ' ಎಂದು ಪ್ರಾರ್ಥಿಸಿದರು. ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ವಿಶ್ವಸ್ಥ ಮಂಡಳಿ ಹಾಗೂ ಬಿ.ಎಸ್ ಕೆ.ಬಿ. ಎಸೋಸಿಯೇಶನ್ ಅಧ್ಯಕ್ಷರಾದ ಡಾ. ಸುರೇಶ್ ಎಸ್ ರಾವ್, ಉಪಾಧ್ಯಕ್ಷರಾದ ವಾಮನ್ ಹೊಳ್ಳ, ಕಾರ್ಯದರ್ಶಿ ಎ. ಪಿ. ಕೆ. ಪೆÇೀತಿ, ಕೋಶಾಧ್ಯಕ್ಷ ಹರಿದಾಸ್ ಭಟ್, ಜೊತೆ ಕಾರ್ಯದರ್ಶಿಗಳಾದ ಪಿ.ಸಿ.ಎನ್ ರಾವ್, ಗುರುರಾಜ್ ಭಟ್, ಪೂಜಾ ಸಮಿತಿಯ ಸದಸ್ಯರುಗಳಾದ ಪ್ರೇಮಾ ರಾವ್, ಸಹನಾ ಪೆÇೀತಿ, ಶಿವರಾಯ ರಾವ್, ಬಿ.ಎಸ್. ಕೆ. ಬಿ. ಎಸೋಸಿಯೇಶನ್ ಕಾರ್ಯಕಾರೀ ಸಮಿತಿ ಸದಸ್ಯರುಗಳಾದ ಚಂದ್ರಶೇಖರ ಭಟ್, ಪ್ರಶಾಂತ್ ಹೆರ್ಲೆ, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಹಾಗೂ ನೂರಾರು ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅರ್ಘ್ಯ ಪ್ರಧಾನ, ತೀರ್ಥ ಪ್ರಸಾದ ವಿತರಣೆ ಹಾಗೂ ಲಘು ಉಪಹಾರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here