Thursday 25th, April 2024
canara news

ಆಧಾರ್ ಕಾರ್ಡ್ ಪಡೆಯಲು ಮುಗಿಬಿದ್ದ ಜನ

Published On : 22 Aug 2017   |  Reported By : Canaranews Network


ಮಂಗಳೂರು : ಸರ್ಕಾರದ ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೋಳಿಸುತ್ತಿರುವ ಬೆನ್ನಲ್ಲಿಯೇ ಎಲ್ಲೆಡೆ ಆಧಾರ್ ಗಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ,ಸಬ್ಸಿಡಿ ಸೀಮೆಎಣ್ಣೆ , ಅಟಲ್ ಪಿಂಚಣಿ ಸವಲತ್ತುಗಳಿಗೆ ಆಧಾರ್ ಕಡ್ಡಾಯ.ಅದಕ್ಕೆ ಪೂರಕವೆಂಬಂತೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿಗೆ ಟೋಕನ್ ವ್ಯವಸ್ಥೆ ಮಾಡಲಾಗಿತ್ತು.

ಆಧಾರ್ ಕಾರ್ಡ್ ಮಾಡಿಸಲು ಮತ್ತು ತಿದ್ದುಪಡಿಗಾಗಿ ಟೋಕನ್ ಪಡೆಯಲು ಸುಮಾರು 250 ಮೀಟರ್ ಉದ್ದದ ಸಾಲಿನಲ್ಲಿ ಜನರು ಕಾಯುತ್ತಿದ್ದ ದೃಶ್ಯ ಕಾಣಿಸಿತು.ಸಮಸ್ಯೆಯ ಕುರಿತು ಪ್ರತಿಕ್ರಿಯಿಸಿದ ಡಾ. ಜಗದೀಶ್, 'ಇವತ್ತು ಇಲ್ಲಿ ಟೋಕನ್ ಪಡೆಯಲು ಬಂದವರಲ್ಲಿ 95% ತಿದ್ದುಪಡಿಗಾಗಿ ಬಂದವರು ಆಗಿದ್ದು, ತಿದ್ದುಪಡಿ ವ್ಯವಸ್ಥೆ ಮಂಗಳೂರು ವನ್, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಮಾಡಲಾಗಿದ್ದರೂ ಜನ ಅಲ್ಲಿ ಹೋಗುತ್ತಿಲ್ಲ.ಅಲ್ಲಿ ಟೋಕನ್ ಪಡೆದು, ಬಹಳ ದಿನ ಕಾಯಬೇಕೆಂಬ ಆತಂಕದಿಂದ ಇದೀಗ ಜನ ಇಲ್ಲಿ ಸೇರಿದ್ದಾರೆ.

ಅವರಿಗೆಲ್ಲರಿಗೂ ಟೋಕನ್ ನೀಡುವ ವ್ಯವಸ್ತೆ ಮಾಡಲಾಗಿದೆ.ಕಚೇರಿ ಅವಧಿ 10 ಗಂಟೆಗಾಗಿದ್ದರೂ, ಟೋಕನ್ ನೀಡುವುದಕ್ಕಾಗಿ ಬೆಳಿಗ್ಗೆ 9 ಗಂಟೆಯಿಂದ ವ್ಯವಸ್ಥೆ ಮಾಡಲಾಗಿತ್ತು. ದಿನವೊಂದಕ್ಕೆ ಕೇಂದ್ರವೊಂದರಲ್ಲಿ 30 ಮಂದಿಗೆ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶವಿದೆ ಎಂದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here