Saturday 10th, May 2025
canara news

ಮುಂಬಯಿಯಲ್ಲಿನ ಕಲಾರಂಗದ ಧ್ರುವತಾರೆ-ಮಯೂರಿ ನರ್ತಕಿ-ಅಪ್ರತಿಮ ಕಲಾವಿದೆ ಗೋಕುಲ ಕಲಾಶ್ರೀ ಬಿರುದಾಂಕಿತ ತಾರಾ ಎಸ್.ರಾವ್ ನಿಧನ

Published On : 22 Aug 2017   |  Reported By : Rons Bantwal


ಮುಂಬಯಿ, ಆ.22: ಬೆಂಗಳೂರಿನ ಟೂರಿಸ್ಟ್ ಹೋಟೆಲಿನ ಮಾಲಕರಾದ ಪಿ.ವಾದಿರಾಜ್ ಮತ್ತು ಶ್ರೀಮತಿ ಜಯಲಕ್ಷ್ಮೀ ಅವರ ಸುಪುತ್ರಿ, ಮಂಗಳೂರು ಸುರತ್ಕಲ್ ಬಾಳ ಅಲ್ಲಿನ ಮೂಲ ನಿವಾಸಿ, ಸದ್ಯ ಕಾಂಜೂರುಮಾರ್ಗ್ ಪಶ್ಚಿಮದ ಗ್ರೇಟ್‍ಈಸ್ಟರ್ನ್ ಗಾರ್ಡನ್ಸ್ ಅಪಾರ್ಟ್‍ಮೆಂಟ್‍ನ ನಿವಾಸಿ, ಮಯೂರಿ ನರ್ತಕಿ-ಅಪ್ರತಿಮ ಕಲಾವಿದೆ ಗೋಕುಲ ಕಲಾಶ್ರೀ ಬಿರುದಾಂಕಿತ ತಾರಾ ಎಸ್.ರಾವ್ (55) ಇಂದಿಲ್ಲಿ ಮುಂಬಯಿ ಉಪನಗರದ ಭಾಂಡೂಪ್ ಪಶ್ಚಿಮದ ಸೆಂಟ್ರಲ್ ಹೆಲ್ತ್ ಹೋಮ್‍ನಲ್ಲಿ ವಿಧಿವಶರಾದರು. ತಾರಾ ರಾವ್ ಅವರು ಪತಿ ಬಾಳ ಸುಬ್ರಹ್ಮಣ್ಯ ರಾವ್ ಸುಪುತ್ರ ಸಾತ್ವಿಕ್ ಹಾಗೂ ಮಗಳು ತೃಪ್ತಿ ರಾವ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಮಾಹಾರಾಣಿ ಕಾಲೇಜ್‍ನಿಂದ ಬಿಎ ಪದವೀಧರೆ, ತನ್ನ ಆರನೇ ವಯಸ್ಸಿನಿಂದಲೇ ಪ್ರಸಿದ್ಧ ಗುರುಗಳಿಂದ ಸಂಗೀತ ನೃತ್ಯಾಭ್ಯಾಸ ಮಾಡುತ್ತಾ ಕರ್ನಾಟಕ ಸಂಗೀತ, ಭರತನಾಟ್ಯ ಮತ್ತು ಓರಿಯಂಟಲ್ ನೃತ್ಯಗಳಲ್ಲಿ ಪ್ರವೀಣತೆಯನ್ನು ಪಡೆದ ಈಕೆ ನಾಟ್ಯರಂಗ ಮಾತ್ರವಲ್ಲದೆ ಅಭಿನಯದಲ್ಲೂ ಅತ್ಯಂತ ಒಲವು ತೋರಿದ ಈಕೆ ಬಾಲ್ಯದಲ್ಲಿಯೇ ಹಲವಾರು ಪುರಸ್ಕಾರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅಲ್ಲದೆ ಅಂದಿನ ರಾಷ್ಟ್ರಪತಿ ಸಂಜೀವ ರೆಡ್ಡಿ, ಕರ್ನಾಟಕದ ಮುಖ್ಯಮಂತ್ರಿ ದೇವರಾಜ ಅರಸು, ವೀರಪ್ಪ ಎಂ.ಮೊೈಲಿ ಮತ್ತು ಹಲವಾರು ಮಠಾಧೀಶರಿಂದ ಪುರಸ್ಕೃತರಾಗಿದ್ದಾರೆ.

ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿಯೇ ದೈವ ಬೀರು, ಸಾತ್ವಿಕ ಸ್ವಭಾವದ ಬಾಳ ಸುಬ್ರಹ್ಮಣ್ಯ ರಾವ್ ಅವರ ಧರ್ಮಪತ್ನಿಯಾಗಿ ದೆಹಲಿಯಲ್ಲಿ ಹನ್ನೊಂದು ವರ್ಷಗಳ ತನಕ ನೆಲೆಸಿ ಅಲ್ಲಿಯೂ ತನ್ನ ಕಲಾ ಸೇವೆ ಮಾಡಿದ ಹೆಗ್ಗಳಿಕೆ ಇವರಿಗೆದೆ. ಕಳೆದ 22 ವರ್ಷಗಳಿಂದ ಮುಂಬಯಿಯಲ್ಲಿ ನೆಲೆಸಿ, ಶಿಕ್ಷಕಿ, ಸಂಗೀತ-ಭಜನಾ ಗಾಯಕಿಯಾಗಿ, ಸಮಾಜ ಸೇವಕಿಯಾಗಿ, ಉತ್ತಮ ಸಂಘಟಕಿಯಾಗಿ ಇಂದು ಮುಂಬಯಿ ಹಾಗೂ ಉಪನಗರಗಳಲ್ಲಿರುವ ಪ್ರತಿಯೊಂದು ತುಳು ಕನ್ನಡ ಸಂಘ ಸಂಸ್ಥೆಗಳಲ್ಲಿ ಚಿರಪರಿಚಿತೆ ಆಗಿದ್ದಾರೆ. ಪ್ರತಿಭಾವಂತರಾದ ಇಬ್ಬರು ಮಕ್ಕಳನ್ನು ಹೊಂದಿರುತ್ತಾರೆ.

ಮುಂಬಯಿಯ ಪ್ರತಿಷ್ಟಿತ ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಇದರ ಸಕ್ರೀಯÀ ಸದಸ್ಯೆಯಾಗಿದ್ದು ಹಲವಾರು ವರ್ಷಗಳ ತನಕ ಕಾರ್ಯಕಾರೀ ಸಮಿತಿಯಲ್ಲಿದ್ದುಕೊಂಡು ಗೋಕುಲ ಕಲಾವೃಂದದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಕಲಾವಿದರನ್ನು ಸಂಘಟಿಸಿ ಉತ್ತಮ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಹಕರಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಗೋಕುಲ ಕಲಾವೃಂದ ಭಜನಾ ಮಂಡಳಿಯನ್ನು ಸ್ಥಾಪಿಸಿ ಮಹಿಳೆಯರನ್ನು ಸಂಘಟಿಸಿ, `ಮನೆ ಮನೆಯಲ್ಲಿ ಭಜನೆ' ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರುವುದಲ್ಲದೆ, ಮುಂಬಯಿಯ ಸಂಘ ಸಂಸ್ಥಗಳು ಆಯೋಜಿಸುತ್ತಿರುವ ಭಜನಾ ಸ್ಪರ್ಧೆಯಲ್ಲಿ ಸ್ಪರ್ಧಿಸುವಂತೆ ಮಹಿಳೆಯರನ್ನು ಹುರಿದುಂಬಿಸಿರುವರು. ಮಹಿಳೆಯರಿಗೆ ಅವರೊಂದು ಪ್ರೇರಣಾ ಶಕ್ತಿ. ಎಲ್ಲಿಯೇ ಆಗಲಿ ನೃತ್ಯಕ್ಕೆ ಸರಿಯಾದ ಹಾಡು ಭಜನೆ ಕೇಳಿದರೆ ಸರಿ, ಸೆರಗು ಕಟ್ಟಿ ಕೂಡಲೇ ನವಿಲಿನಂತೆ ನರ್ತಿಸುವ ಮಯೂರಿ ಈಕೆ. ಇವರ ಬಹುಮುಖ ಪ್ರತಿಭೆಯನ್ನು ಗುರುತಿಸಿ ಬೈಲೂರು ಬಾಲಚಂದ್ರ ರಾವ್ ರವರು ತಮ್ಮ ಮಾತಾಪಿತರ ಸ್ಮರಣಾರ್ಥ ಬಿಎಸ್‍ಕೆಬಿಎ ಸ್ಥಾಪಿತ `ಗೋಕುಲ ಕಲಾ ಶ್ರೀ' ಪ್ರಶಸ್ತಿಗೆ ಭಾಜನರಾದ ಹೆಮ್ಮೆಯ ಕಲಾವಿದೆ.

ರಂಗಭೂಮಿ ಕಲಾವಿದೆಯಾಗಿ ಪ್ರಸಿದ್ಧ ದಿಗ್ದರ್ಶಕರ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಪಾತ್ರವಹಿಸಿ `ಉತ್ತಮ ನಟಿ' ಪ್ರಶಸ್ತಿ ಪಡೆದಿದ್ದಾರೆ. ಕೇವಲ ಸಂಗೀತ, ನೃತ್ಯ ನಾಟಕಗಳು ಮಾತ್ರವಲ್ಲದೆ ಗಂಡು ಕಲೆಯಾದ ಯಕ್ಷಗಾನದಲ್ಲಿಯೂ ತರಬೇತಿ ಪಡೆದು ಮುಂಬಯಿಯ ಪ್ರತಿಷ್ಟಿತ ಯಕ್ಷಗಾನ ನಿರ್ದೇಶಕರ ನಿರ್ದೇಶನದಲ್ಲಿ ಹಲವಾರು ಯಕ್ಷಗಾನ ಪ್ರಸಂಗಗಳಲ್ಲಿ ಭಾಗವಹಿಸಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಯಕ್ಷಗಾನದ ವೇಷ ಧರಿಸಿ ಮುಂಬಯಿ ಮ್ಯಾರಥಾನ್ ಹಾಗೂ ಬೆಳಗಾವಿಯಲ್ಲಿ ನಡೆದ ಎರಡನೇ ವಿಶ್ವ ಕನ್ನಡ ಸಮ್ಮೇಳನ ವೇದಿಕೆಯಲ್ಲಿಯೂ ಮಿಂಚಿರುವ ಮುಂಬಯಿಯ ತುಳು ಕನ್ನಡಿಗರಲ್ಲಿನ ಅಭಿಮಾದ ಪ್ರತಿಭೆ ಇವರಾಗಿದ್ದರು.

ಉತ್ತಮ ಗೃಹಿಣಿಯಾಗಿ, ನಟಿಯಾಗಿ, ನೃತ್ಯ ಪಟುವಾಗಿ, ಯಕ್ಷಗಾನ ಕಲಾವಿದೆಯಾಗಿ, ಸಂಘಟಕಿಯಾಗಿ ಇವರು ಗಳಿಸಿದ ಪ್ರಶಸ್ತಿಗಳು ಹಲವಾರು. ಮುಂಬೈ ಮಾತ್ರವಲ್ಲದೆ ದೆಹಲಿ, ಮತ್ತು ಇತರ ರಾಜ್ಯದ ಸಂಘ ಸಂಸ್ಥೆಗಳೂ ಇವರನ್ನು ಗೌರವಿಸಿವೆ. ಇತ್ತಿಚೆಗಷ್ಟೇ ಸಿಂಗಾಪುರದಲ್ಲಿ ಉದ್ಯೋಗ ನಿಮಿತ್ತ ನೆಲೆಸಿರುವ ತನ್ನ ಪತಿಯೊಂದಿಗೆ ಸಿಂಗಾಪುರಕ್ಕೆ ತೆರಳಿ ಅಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ.

ತಾರಾ ಎಸ್. ರಾವ್ ನಿಧನಕ್ಕೆ ಸಂತಾಪದ ಮಹಾಪೂರ
ತಾರಾ ರಾವ್ ಅಗಲುವಿಕೆ ಮುಂಬಯಿಯ ಇಡೀ ಕಲಾರಂಗ ಇವರ ತುಂಬಲಾಗದ ನಷ್ಟವಾಗಿದೆ. ಅವರೋರ್ವ ಸಾಮರಸ್ಯದ ಧ್ಯೋತಕವಾಗಿದ್ದು ಕಲಾರಂಗದ ಮಿನುಗುತಾರೆಯಾಗಿ ಜನಾನುರೆಣಿಸಿದ್ದರು. ತಾರಾ ನಿಧನÀ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಅಪಾರ ಸಂಖ್ಯೆಯ ಹಿತೈಷಿ ಕಲಾಭಿಮಾನಿಗಳು, ಸಂಘಸಂಸ್ಥೆಯ ಮುಖ್ಯಸ್ಥರು ಆಸ್ಪತ್ರೆಗೆ ಧಾವಿಸಿದ್ದಾರೆ. ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್'ಸ್ ಅಸೋಸಿಯೇಶನ್ (ಬಿಎಸ್‍ಕೆಬಿಎ) ಸಂಸ್ಥೆಯ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಗೌರವ ಪ್ರಧಾನ ಕಾರ್ಯದರ್ಶಿ ಅನಂತ ಪದ್ಮನಾಭ ಕೆ.ಪೆÇೀತಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‍ನ ವಿಶ್ವಸ್ಥ ಮಂಡಳಿ, ಗೋಕುಲವಾಣಿ ಮಾಸಿಕದ ಗೌರವ ಸಂಪಾದಕ ಡಾ| ವ್ಯಾಸರಾಯ ನಿಂಜೂರು, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಪೂರ್ವಾಧ್ಯಕ್ಷ ಎಲ್.ವಿ ಅವಿೂನ್, ಭಾರತ್ ಬ್ಯಾಂಕ್‍ನ ಉಪಕಾರ್ಯಾಧ್ಯಕ್ಷ ನ್ಯಾ| ರೋಹಿಣಿ ಜೆ.ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷ ವಿ.ಆರ್ ಕೋಟ್ಯಾನ್, ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಅಧ್ಯಕ್ಷ ಸುರೇಂದ್ರ ಕುಮಾರ್ ಹೆಗ್ಡೆ, ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ್ ಎಲ್.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಲತಾ ಜಯರಾಮ ಶೆಟ್ಟಿ, ತೀಯಾ ಸಮಾಜ, ಮುಂಬಯಿ ಇದರ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ, ರಾಮರಾಜ ಕ್ಷತೀಯ ಸೇವಾ ಸಂಘ ಮುಂಬಯಿ ಅಧ್ಯಕ್ಷ ರಾಜ್‍ಕುಮಾರ್ ಕಾರ್ನಾಡ್, ಭಂಡಾರಿ ಮಹಾ ಮಂಡಲ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಭಂಡಾರಿ, ಹೆಚ್.ಬಿ.ಎಲ್ ರಾವ್, ಬಿ.ರಮಾನಂದ ರಾವ್, ಕಲೀನ, ಐ.ಕೆ ಪ್ರೇಮಾ ಎಸ್.ರಾವ್, ಕೃಷ್ಣ ಆಚಾರ್ಯ, ಪೆರ್ಣಂಕಿಲ ಹರಿದಾಸ್ ಭಟ್, ಎಸ್.ಎನ್ ಉಡುಪ, ಕೈರಬೆಟ್ಟು ವಿಶ್ವನಾಥ ಭಟ್, ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ, ಶ್ರೀ ಅದಮಾರು ಮಠದ ದಿವಾನ ಲಕ್ಷಿ ್ಮೀನಾರಾಯಣ ಮುಚ್ಚಿತ್ತಾಂಯ ಪಡುಬಿದ್ರಿ ವಿ.ರಾಜೇಶ್, ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಅಜೆಕಾರು ಬಾಲಕೃಷ್ಣ ಶೆಟ್ಟಿ, ಪಂಡಿತ್ ನವೀನ್‍ಚಂದ್ರ ಆರ್.ಸನೀಲ್, ಹಿರಿಯ ಕಲಾವಿದರಾದ ಮೋಹನ್ ಮಾರ್ನಾಡ್, ಚಂದ್ರಪ್ರಭಾ ಸುವರ್ಣ, ಜ್ಯೂಲಿಯೆಟ್ ಪಿರೇರಾ, ಚಂದ್ರವತಿ ದೇವಾಡಿಗ, ಸುಧಾ ಶೆಟ್ಟಿ, ವಿಜಯಲಕ್ಷ್ಮೀ ಆರ್.ಪೂಜಾರಿ, ಕೆ.ಭೋಜರಾಜ್, ಕನ್ನಡ ವಿಭಾಗ ಮುಂಬಯಿ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ, ಡಾ| ಸುನೀತಾ ಎಂ.ಶೆಟ್ಟಿ, ತೋನ್ಸೆ ಸಂಜೀವ ಪೂಜಾರಿ, ಎನ್.ಟಿ ಪೂಜಾರಿ ಸೇರಿದಂತೆ ನೂರಾರು ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here