Friday 4th, July 2025
canara news

ಕುಂದಾಪುರ ಬೀಜಾಡಿ ದೊಡ್ಮನೆಬೆಟ್ಟು ಗಣೇಶೋತ್ಸವ

Published On : 23 Aug 2017   |  Reported By : Bernard J Costa


ಕುಂದಾಪುರ: ಬೀಜಾಡಿ ಗ್ರಾಮದ ದೊಡ್ಮನೆಬೆಟ್ಟು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿನ ತೃತೀಯ ವರ್ಷದ ಶ್ರೀ ಗಣೇಶೋತ್ಸವವು ಆ25ರಿಂದ 27 ರವರೆಗೆ ನಡೆಯಲಿದೆ. ಆ 25ರ ಶುಕ್ರವಾರ ಬೆಳಿಗ್ಗೆ 9:30ಕ್ಕೆ ಗಣಹೋಮ, ಶ್ರೀ ಗಣಪತಿ ದೇವರ ಪ್ರತಿಷ್ಠಾಪನೆಯೊಂದಿಗೆ ಕಾರ್ಯ-ಕಲಾಪಗಳು ಪ್ರಾರಂಭಗೊಳ್ಳುವವು.

ಮೂರು ದಿನಗಳ ಕಾಲ ಮಹಾಪೂಜೆ, ರಂಗಪೂಜೆ ಇತ್ಯಾದಿ ವಿಶೇಷ ಪೂಜಾಕಾರ್ಯಕ್ರಮಗಳು, ವಿವಿಧ ಭಜನಾ ತಂಡದವರಿಂದ ಭಜನೆ ನಡೆಯಲಿದೆ. ಆ 27ರ ಭಾನುವಾರ ಮಧ್ಯಾಹ್ನ 3:00ರಿಂದ ವೈಭವದ ಮೆರವಣಿಗೆಯೊಂದಿಗೆ ಸಾಗಿ ಅಮಾವಾಸ್ಯೆ ಕಡು ಮೂಲಕ ಗಣೇಶ ವಿಗ್ರಹವನ್ನು ಅರಬಿ ಸಮುದ್ರದಲ್ಲಿ ಜಲಸ್ತಂಭನಗೊಳಿಸಲಾಗುವುದು. ಮೂರು ದಿನಗಳ ಕಾಲ ಸಾರ್ವಜನಿಕ ಭಕ್ತಾಭಿಮಾನಿಗಳಿಗೆ ಶ್ರೀ ದೇವರ ಸನ್ನಿಧಿಯಲ್ಲಿ ವಿವಿಧ ಸೇವಗಳನ್ನು ಸಲ್ಲಿಸುವ ಆವಕಾಶವಿದೆಯೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here