ಮುಂಬಯಿ, ಆ.24: ಗಾಣಿಗ ಸಮಾಜ ಮುಂಬಯಿ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಹನೇಹಳ್ಳಿ ಶಂಕರ್ (65) ಕಳೆದ ಬುಧವಾರ ರಾತ್ರಿ ಮುಂಬಯಿ ಉಪನಗರದ ವಿೂರಾರೋಡು ಪೂರ್ವದ ಖಾಸಾಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಉಡುಪಿ ಜಿಲ್ಲೆಯ ಬಾರ್ಕೂರು ಹನೇಹಳ್ಳಿ ಮೂಲದವರಾಗಿದ್ದ ಮೃತರು ಸದ್ಯ ವಿೂರಾರೋಡು ಪೂರ್ವದ ಕಿಂಗ್‍ಸ್ ಪ್ಯಾಲೇಶ್ ಅಪಾರ್ಟ್‍ಮೆಂಟ್ ನಿವಾಸಿ ಆಗಿದ್ದು ಅನೇಕ ವರ್ಶಗಳಿಂದ ಮುಂಬಯಿಯಲ್ಲಿ ಎಲ್‍ಐಸಿ ವ್ಯವಹಾರದಲ್ಲಿ ತೊಡಗಿಸಿ ಕೊಂಡಿದ್ದರು.
ಓರ್ವ ನಿಷ್ಠಾವಂತ ಲೇಖಕ, ಬರಹಗಾರರಾಗಿ, ಸಕ್ರೀಯವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದ ಮೃತರು ಒಂದು ಹೆಣ್ಣು, ಒಂದು ಗಂಡು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
ಹನೇಹಳ್ಳಿ ನಿಧನಕ್ಕೆ ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ಕುತ್ಪಾಡಿ ರಾಮಚಂದ್ರ ಎಂ.ಗಾಣಿಗ, ಗೌಅರವಾಧ್ಯಕ್ಷ ಜಗನ್ನಾಥ ಎಂ.ಗಾಣಿಗ, ಉಪಾಧ್ಯಕ್ಷ ಭಾಸ್ಕರ ಎಂ.ಗಾಣಿಗ, ಗೌ| ಪ್ರ| ಕಾರ್ಯದರ್ಶಿ ಚಂದ್ರಶೇಖರ್ ಆರ್.ಗಾಣಿಗ, ಗೌ| ಕೋಶಾಧಿಕಾರಿ ಜಯಂತ ಪದ್ಮನಾಭ ಗಾಣಿಗ, ವಿದ್ಯೋದಯ ಸಮಿತಿ ಕಾರ್ಯಾಧ್ಯಕ್ಷ ವಿಜಯೇಂದ್ರ ಗಾಣಿಗ, ಮಹಿಳಾ ವಿಭಾಗಧ್ಯಕ್ಷೆ ತಾರಾ ಎನ್.ಭಟ್ಕಳ್, ಯುವ ವಿಭಾಗಧ್ಯಕ್ಷ ಗಣೀಶ್ ಆರ್.ಕುತ್ಪಾಡಿ, ಮಾಜಿ ಕಾರ್ಯದರ್ಶಿ ಬಿ.ವಿ ರಾವ್, ರಾಜೇಶ್ ಕುತ್ಪಾಡಿ, ಗೋಪಾಲಕೃಷ್ಣ ಗೋವಿಂದ ಗಾಣಿಗ (4ಜಿ) ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.