Saturday 10th, May 2025
canara news

ಐಜಿಪಿ ಬಂಗ್ಲೆಯಲ್ಲಿನ ಶ್ರೀಗಂಧ ಮರ ಕಳವು ಪ್ರಕರಣ; ರೈ ವಿರುದ್ಧ ನಳಿನ್ ಗಂಭೀರ ಆರೋಪ

Published On : 25 Aug 2017   |  Reported By : Canaranews network


ಮಂಗಳೂರು: ಮಂಗಳೂರಿನ ಐಜಿಪಿ ವಸತಿಗೃಹದ ಆವರಣದಿಂದ ಶ್ರೀಗಂಧದ ಮರಗಳು ರಾಜಾರೋಷವಾಗಿ ಕಳವಾಗಿರುವ ಘಟನೆ ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಗೊತ್ತೇ ಇಲ್ಲ ಎನ್ನುತ್ತಿದ್ದಾರೆ. ಸಚಿವರ ಈ ರೀತಿಯ ಹೇಳಿಕೆನೋಡಿದರೆ, ಬಹುಶಃ ಈ ಮರಗಳನ್ನು ಅವರು ತಮ್ಮ ಮನೆಗೇ ಸಾಗಿಸಿರುವ ಶಂಕೆ ಇದೆ ಎಂದು ಸಂಸದ ನಳಿನ್ಕುಮಾರ್ ಕಟೀಲು ಆರೋಪಿಸಿದ್ದಾರೆ.

ರಾಜ್ಯ ಸರಕಾರದ ಆಡಳಿತ ವೈಫಲ್ಯ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅರಣ್ಯ ಸಚಿವರಿಗೆ ಅರಣ್ಯ ಎಲ್ಲಿದೆ ಎಂದೇ ಗೊತ್ತಿಲ್ಲ. ಹಾಗಾಗಿ, ಐಜಿಪಿ ಬಂಗ್ಲೆಯಿಂದ ಶ್ರೀಗಂಧ ಮರ ಕಳವು ಆಗಿರುವ ವಿಷಯವೂ ಗೊತ್ತಾಗಿಲ್ಲ. ಬಹುಶಃ ಅವರು ಈ ಮರಗಳನ್ನು ತಮ್ಮ ಮನೆಗೇ ಕೊಂಡೊಯ್ದಿರಬಹುದು. ಇಲ್ಲವಾಗಿದ್ದರೆ ಆರೋಪಿಗಳನ್ನು ಇಷ್ಟೊತ್ತಿಗೆ ಪತ್ತೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದು ಅವರು ಆರೋಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here