Saturday 10th, May 2025
canara news

ದಹಿಸರ್‍ನ ಕಾಶೀ ಮಠದ ವಿಠಲ ರುಖುಮಯಿ ಸನ್ನಿಧಿಯಲ್ಲಿ ನೆರವೇರಿದ ಪೂಜೆ ಮತ್ತು ಲಕ್ಷ್ಮೀ ನಾರಾಯಣ ಹೃದಯ ಹವನ

Published On : 25 Aug 2017   |  Reported By : Rons Bantwal


ಮುಂಬಯಿ, ಆ.25: ದಹಿಸರ್ ಪೂರ್ವದ ಸುದೀಂದ್ರ ನಗರದಲ್ಲಿನ ಕಾಶೀ ಮಠದಲ್ಲಿ ಲಕ್ಷ್ಮೀ ನಾರಾಯಣ ಹೃದಯ ಹವನ ಕಳೆದ ಶನಿವಾರ ನೇರವೇರಿಸಲ್ಪಟ್ಟಿತು. ವೇದಮೂರ್ತಿ ಹರಿಖಂಡಿಗೆ ಉಲ್ಲಾಸ್ ಭಟ್ ತನ್ನ ಪೌರೋಹಿತ್ಯದಲ್ಲಿ ಶಾಸ್ತ್ರೋಕ್ತವಾಗಿ ಲಕ್ಷ್ಮೀ ನಾರಾಯಣ ಹೃದಯ ಹವನ ನೆರವೇರಿಸಿ ನೆರೆದ ಸದ್ಭಕ್ತರನ್ನು ಹರಸಿದರು.

ಕಾಶೀ ಮಠ ಸಂಸ್ಥಾನದ ದೈವಕ್ಯ ಪರಮಪೂಜ್ಯ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಹಾಗೂ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ಅನುಗ್ರಹಗಳೊಂದಿಗೆ ವಾಲ್ಕೇಶ್ವರ ನಾರಾಯಣ ಭಟ್ ಮತ್ತಿತರ ವೈಧಿಕರು ಇತರ ಪೂಜಾಧಿಗಳನ್ನು ನಡೆಸಿದರು.

ಪುಣ್ಯಾಧಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಮುಖರಾಗಿ ಶೋಭಾ ವಿನಾಯಕ ಕುಲಕರ್ಣಿ, ಸುಗುಣಾ ಕಮಲಾಕ್ಷ ಕಾಮತ್, ಮೋಹನದಾಸ್ ಪಿ.ಮಲ್ಯ, ಎಂ.ಉದಯ ಪಡಿಯಾರ್, ಸಾಣೂರು ಮನೋಹರ್ ವಿ.ಕಾಮತ್, ಸುಧಾಕರ ಕಾಮತ್, ಅಜೇಯ ತಂತ್ರಿ ಹಾಗೂ ಜಿಎಸ್‍ಬಿ ಸಭಾ ದಹಿಸರ್ ಬೊರಿವಿಲಿ, ಸಾರಸ್ವತ್ ಕಲ್ಚರಲ್ ಎಂಡ್ ರಿಕ್ರಿಯೇಶನ್ ಸೆಂಟರ್‍ನ ಪದಾಧಿಕಾರಿಗಳು ಸೇರಿದಂತೆ ಅನೇಕ ಗಣ್ಯರು, ನೂರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಜಿಎಸ್‍ಬಿ ಸಭಾ ಭಜನಾ ಮಂಡಳಿ ದಹಿಸರ್ ಬೊರಿವಿಲಿ ಇದರ ಭಜನಾ ಕಾರ್ಯಕ್ರಮ ನೆರವೇರಿಸಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here