Saturday 10th, May 2025
canara news

ಮೈಸೂರು ಅಸೋಸಿಯೇಶನ್ ಮುಂಬಯಿ ಭವನದಲ್ಲಿ ಸ್ವರ್ಣಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾ ಮಹೋತ್ಸವ

Published On : 26 Aug 2017   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಆ.25: ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಯ ವತಿಯಿಂದ ಅಸೋಸಿಯೇಶನ್‍ನ ಭವನದಲ್ಲಿನ ಪ್ರತಿಷ್ಠಾಪಿತ ಮಹಾಗಣಪತಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಅಂತೆಯೇ ಭವನದ ಗಣಪತಿ ಮಂದಿರದ ಸನ್ನಿಧಿಯಲ್ಲಿ ವಾರ್ಷಿಕವಾಗಿ ನಡೆಸುವ ಸ್ವರ್ಣ ಗೌರಿ ಮತ್ತು ಶ್ರೀ ಮಹಾಗಣಪತಿ ಪೂಜಾ ಮಹೋತ್ಸವ ಆಚರಿಸಲಾಯಿತು.

ನಾರಾಯಣ ನವಿಲೇಕರ್ ಮತ್ತು ಡಾ| ಸತಿತಾ ಎನ್.ನವಿಲೇಕರ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದು, ಪುರೋಹಿತ ಸುರೇಶ್ ಕೆ.ಎಸ್ ಭಟ್ ತೀರ್ಥಹಳ್ಳಿ ಪೂಜಾಧಿಗಳನ್ನು ನೆರವೇರಿಸಿ ಅನುಗ್ರಹಿಸಿದರು.

ಶಶಿಕಾಂತ್ ಜೋಶಿ ಅವರ ಸಂಘಟನೆಯಲ್ಲಿ ನಡೆಸಲ್ಪಟ್ಟ ಪೂಜಾ ಮಹೋತ್ಸವದ ಪೂಜಾಧಿಗಳಲ್ಲಿ ಅಸೋಸಿಯೇಶನ್‍ನ ವೀಣಾ ಎಸ್.ಜೋಶಿ ಭವಾನಿ ಭರ್ಗವಿ, ಉದಯ್ ಪೂಜಾರಿ, ಜ್ಯೋತಿ ಉದಯ್, ಉಮೇಶ್ ದೇವಾಡಿಗ, ಸತೀಶ್ ಎನ್.ಬಂಗೇರ ಸೇರಿದಂತೆ ಭಕ್ತರು, ಸದಸ್ಯರನೇಕÀರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here