Saturday 10th, May 2025
canara news

ಬಂಟರ ಸಂಘ ಮುಂಬಯಿ ವತಿಯಿಂದ ಆಚರಿಸಲ್ಪಟ್ಟ ಗಣೇಶೋತ್ಸವ

Published On : 26 Aug 2017   |  Reported By : Rons Bantwal


(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಆ.25: ಮುಂಬಯಿಯಾದ್ಯಂತ ಗಣೇಶ ಚತುಥಿರ್ü ಸಂಭ್ರಮವು ಶ್ರದ್ಧಾಪೂರ್ವಕವಾಗಿ ಶಾಸ್ತ್ರೋಕ್ತವಾಗಿ ಸಂಭ್ರಮಿಸಲ್ಪಟ್ಟಿದ್ದು, ಮಹಾನಗರದಲ್ಲಿನ ವಿವಿಧ ತುಳುಕನ್ನಡಿಗ ಸಂಸ್ಥೆಗಳು ವಾರ್ಷಿಕ ಗಣೇಶಚತುಥಿರ್ü ಹಬ್ಬವನ್ನು ವಿಜೃಂಭನೆ, ಭಕ್ತಿಪೂರ್ವಕವಾಗಿ ಆಚರಿಸಿದವು.

ಬಂಟರ ಸಂಘ ಮುಂಬಯಿ ವತಿಯಿಂದ ಸಂಘದ ಆವರಣದಲ್ಲಿನ ಶ್ರೀ ಮಹಾವಿಷ್ಣು ಮಂದಿರದಲ್ಲಿ ಜ್ಞಾನ ಮಂದಿರದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಮುಂದಾಳುತ್ವ ಹಾಗೂ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ಬೊಳ್ನಾಡುಗುತ್ತು ಚಂದ್ರಹಾಸ ಎಂ.ರೈ ಸಾರಥ್ಯದಲ್ಲಿ ವಾರ್ಷಿಕ ಗಣೇಶೋತ್ಸವ ಅದ್ದೂರಿಯಾಗಿ ಆಚರಿಸಲ್ಪಟ್ಟಿತು.

ಮಂದಿರದ ಪ್ರಧಾನ ಆರ್ಚಕ ವಿದ್ವಾನ್ ಅರವಿಂದ ಬನ್ನಿಂತಾಯ ವಿವಿಧ ಪೂಜೆಗಳನ್ನು ವಿಧಿವತ್ತಾಗಿ ನಡೆಸಿದರು. ಪೂರ್ವಾಹ್ನ ನಡೆಸಲಾದ ಗಣಹೋಮ ನೆರವೇರಿಸಿ ಅನುಗ್ರಹಿಸಿದರು. ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿ ಕಾರ್ಯಧ್ಯಕ್ಷ ಸಿಎ| ವಿಶ್ವನಾಥ ಶೆಟ್ಟಿ ಮತ್ತು ರಮ್ಯ ವಿಶ್ವನಾಥ್ ಕುಟುಂಬ ಪೂಜಾಧಿಗಳ ಯಜಮಾನತ್ವ ವಹಿಸಿದ್ದರು.

ನಡೆಸಲ್ಪಟ್ಟ ಧಾರ್ಮಿಕ ವಿಧಿ, ಪೂಜಾಧಿಗಳಲ್ಲಿ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ ಮಾಜಿ ಮಹಿಳಾ ವಿಭಾಗಧ್ಯಕ್ಷೆ ಲತಾ ಪ್ರಭಾಕರ ಶೆಟ್ಟಿ, ಇದರ ಉಪಾಧ್ಯಕ್ಷ ಪದ್ಮನಾಭ ಎಸ್.ಪಯ್ಯಡೆ, ಗೌ| ಪ್ರ| ಕಾರ್ಯದರ್ಶಿ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಹರೀಶ್ ವಾಸು ಶೆಟ್ಟಿ, ದಿವಾಕರ್ ಬಿ.ಶೆಟ್ಟಿ ಕುರ್ಲಾ, ಭರತ್ ಶೆಟ್ಟಿ, ಹರೀಶ್ ಶೆಟ್ಟಿ, ಯುವ ವಿಭಾಗದ ಶರತ್ ವಿ.ಶೆಟ್ಟಿ, ಪ್ರತೀಕ್ ಡಿ.ಶೆಟ್ಟಿ, ಬಂಟರ ಭವನದ ವ್ಯವಸ್ಥಾಪಕ ಪ್ರವೀಣ್ ಎಸ್.ಶೆಟ್ಟಿ ವಾರಂಗ ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಭಕ್ತರನೇಕರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here