ಮುಂಬಯಿ,ಆ.27: ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಅಲ್ಲಿನ ಹರಿಪುರ್ ರಸ್ತೆಯಲ್ಲಿನ ಪಾತ್ನೆ ಪ್ಲಾಟ್‍ನಲ್ಲಿನ ಮಂಜುಶ್ರೀ ಎಂಟರ್‍ಪ್ರೈಸಸ್‍ನಲ್ಲಿ ಸಾರ್ವಜನಿಕವಾಗಿ ಪೂಜಿಸಲ್ಪಟ್ಟ ಮಹಾಗಣಪತಿ.
ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಇದರ ಉಪಾಧ್ಯಕ್ಷ ಸುಧಾಕರ ಪೂಜಾರಿ ಹೊಸ್ಮಾರು ಮತ್ತು ಸೌಮ್ಯ ಸುಧಾಕರ್ ಸಾರಥ್ಯದಲ್ಲಿ ವಾರ್ಷಿಕವಾಗಿ ಇಲ್ಲಿ ಗಣಪತಿ ಸ್ತುತಿ, ಭಜನೆ, ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪಂಚದಿನಗಳಲ್ಲಿ ಪೂಜಿಸಲ್ಪಡುವ ಈ ಮಂಡಲದಲ್ಲಿ ಇದೇ ಬುಧವಾರ (ಆ.30) ಮಧ್ಯಾಹ್ನ ಶ್ರೀ ಗಣೇಶ ಹವನ ಮತ್ತು ಪ್ರಸಾದ ವಿತರಣಾ ಕಾರ್ಯಕ್ರಮದ ನಂತರ ವಿಸರ್ಜನೆ ನಡೆಸಲಾಗುತ್ತಿದೆ. ಚಿತ್ರ: ರೋನ್ಸ್ ಬಂಟ್ವಾಳ್