Saturday 10th, May 2025
canara news

ಸಂತ ಜೋಸೆಫ್ ಶಾಲೆಯಲ್ಲಿ ಕುಂದಾಪುರ ತಾಲೂಕು ಮಟ್ಟದ ಖೊಕೊ ಪಂದ್ಯಾಟ

Published On : 30 Aug 2017   |  Reported By : Bernard J Costa


ಕುಂದಾಪುರ,:ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ ಮತ್ತು ಕುಂದಾಪುರ ವಲಯ ದೈಹಿಕ ಶಿಕ್ಷಣ ಶಿಕ್ಷಕ ವತಿಯಿಂದ, ಕುಂದಾಪುರ ಸಂತ ಜೋಸೆಫ್ ಫ್ರೌಡ ಶಾಲೆಯ ಆಶ್ರಯದಲ್ಲಿ, ಶಾಲೆಯ ಮೈದಾನದಲ್ಲಿ ಫ್ರೌಡ ಶಾಲಾ ಬಾಲಕ ಬಾಲಕಿಯರ ಖೊಕೊ ಪಂದ್ಯಾಟ ನೆಡೆಯಿತು.

 

 

ಪಂದ್ಯಾಟವನ್ನು ಪುರಸಭೆಯ ಸದಸ್ಯ ವಿಜಯ ಪೂಜಾರಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕ್ರೀಡಾಳುಗಳನ್ನು ಉತ್ತೇಜಿಸುವ ಮಾತುಗಳನ್ನಡಿದರು. ದತ್ತಾತ್ರೇಯ ನಾಯಕ್ ಪ್ರಸ್ತಾವನದ ಮಾತುಗಳನ್ನಾಡಿದರು. ಶಾಲೆಯ ಸಂಚಾಲಕಿ ಸಿಸ್ಟರ್ ಕೀರ್ತನ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ ಮೇಸ್ತಾ, ಕುಂದಾಪುರ ವಲಯ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಸತ್ಯಾನಂದ ಸಾಲಿನ್ಸ್, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಕ್ರಷ್ಣ ಶೆಟ್ಟಿ ಅಂಪಾರು, ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ವಾಯ್ಲೆಟ್ ತಾವ್ರೊ ಸ್ವಾಗತಿಸಿದರು. ಶಿಕ್ಷಕಿ ಶ್ರೀಲತಾ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಕಾರ್ಯಕ್ರಮವನ್ನು ನಿರೂಪಿಸಿದರು.

ಬಾಲಾಕರ ವಿಭಾಗದಲ್ಲಿ ಸ.ಪ.ಪೂ.ಕಾಲೇಜಿನ ಫ್ರೌಡ ಶಾಲೆ ಶಂಕರನಾರಯಣ, ಪ್ರಥಮ ಮತ್ತು ಸ.ಫ್ರೌ.ಶಾಲೆ ಅಮಾಸೆಬೈಲ್ ದ್ವೀತಿಯ ಸ್ಥಾನ, ಹಾಗೇ ಬಾಲಕಿಯರ ವಿಭಾಗದಲ್ಲಿ ಸ.ಫ್ರೌ.ಶಾಲೆ ಅಮಾಸೆಬೈಲ್ ಪ್ರಥಮ ಮತ್ತು ರಾಂ ಸನ್ ಫ್ರೌ.ಶಾಲೆ ದ್ವೀತಿಯ ಸ್ಥಾನವನ್ನು ಗಳಿಸಿ ಪ್ರಶಸ್ತಿ ಪಡೆದುಕೊಂಡರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here