Saturday 10th, May 2025
canara news

ದಕ್ಷಿಣ ಮುಂಬಯಿಯ ಬೆಂಢೀ ಬಜ್ಹಾರ್‍ನಲ್ಲಿ ಶತಮಾನ ಹಳೆಯ ಕಟ್ಟಡ ಕುಸಿತ 21-ದುರ್ದೈವಿಗಳು ವಿಧಿವಶ 16-ಮಂದಿ ಜಖಂ 5-ಮಂದಿ ಸ್ಥಿತಿ ಗಂಭೀರ

Published On : 31 Aug 2017   |  Reported By : Rons Bantwal


(ರೋನ್ಸ್ ಬಂಟ್ವಾಳ್)

ಮುಂಬಯಿ, ಆ.31: ಕಳೆದ ಮಂಗಳವಾರ ಸುರಿದ ಭಾರೀ ಮಳೆಯಿಂದ ಯಥಾಸ್ಥಿತಿಗೆ ಮರಳಿದ ಮುಂಬಯಿ ಮಹಾನಗರ ಇಂದು ಮತ್ತೆ ಭಾರೀ ಸುದ್ದಿಗೆ ಗ್ರಾಸವಾಯಿ. ದಕ್ಷಿಣ ಮುಂಬಯಿ ಬೈಕುಲಾ ಅಲ್ಲಿನ ಜೆಜೆ ಜಂಕ್ಷನ್ ಪರಿಸರದ ಬೆಂಡೀ ಬಜ್ಹಾರ್‍ನ ಪಕ್‍ಮೋದಿಯಾ ಸ್ಟ್ರೀಟ್‍ನ ಹುಸೈೀನಿ ನಿವಾಸ ನಾಮಾಂಕಿತ ಸುಮಾರು 117 ವರ್ಷಗಳ ಹಳೆಯ ಐದು ಅಂತಸ್ತಿನ ಕಟ್ಟಡ ಇಂದಿಲ್ಲಿ ಗುರುವಾರ ಬೆಳಿಗ್ಗೆ ಸುಮಾರು 8.30 ಗಂಟೆಗೆ ಕುಸಿದು ಬಿದ್ದು ಇಪ್ಪತ್ತೊಂದು ಮಂದಿ ಮೃತಪಟ್ಟರೆ 16ಕ್ಕೂ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಪಯ್ಕಿ ಐದು ಮಂದಿಯ ಸ್ಥಿತಿ ಗಂಭೀರಾವಸ್ಥೆಯಲ್ಲಿದೆ ಎನ್ನಲಾಗಿದೆ

ಮಾಡಾ ಇಲಾಖೆಗೆ ಸಂಬಂಧಿಸಿದ್ದ ಈ ಕಟ್ಟಡದ ತಳ ಮಹಡಿಯಲ್ಲಿ ಹೊಟೇಲು ಮತ್ತು ಐದಾರು ಸಾಮಾನು ದಾಸ್ತಾನು ಗೋದಾಮುಗಳಿದ್ದು ಮೇಲ್ಭಾಗದಲ್ಲಿ ಒಟ್ಟು 12 ಒಕ್ಕಲುದಾರರು (ಟೆನೆಂಟ್ಸ್) ಇದ್ದು ಎಂಭತ್ತಕ್ಕೂ ಅಧಿಕ ಮಂದಿ ವಾಸವಾಗಿದ್ದರು. ಈ ಕಟ್ಟಡವು ಪುನ:ರ್ ನಿರ್ಮಾಣ ಹಂತದಲ್ಲಿತ್ತು ಎನ್ನಲಾಗಿದೆ.

ತಕ್ಷಣ ಆಗಮಿಸಿದ್ದ ಆಗ್ನಿಶಾಮಕ ದಳ, ಎಂಎಫ್‍ಬಿ, ಎನ್‍ಡಿಆರ್‍ಎಫ್ ರಕ್ಷಣಾ ಪಡೆ, ಸರಕರೇತರ ಸಂಸ್ಥೆಗಳು ಹಾಗೂ ಪೆÇಲೀಸ್ ಅಧಿಕಾರಿಗಳು ಶ್ವಾನದಳದೊದಿಗೆ ತತ್‍ಕ್ಷಣ ರಕ್ಷಣಾ ಕಾರ್ಯದಲ್ಲಿ ಕಾರ್ಯಪ್ರವೃತ್ತರಾಗಿ ಕುಸಿತಕ್ಕೊಳಗಾದ ಕಟ್ಟಡದೊಳಗೆ ಸಿಲುಕಿದ್ದ ಸುಮಾರು 7 ಮಕ್ಕಳು ಸಹಿತ ಸುಮಾರು 52 ಮಂದಿಯನ್ನು ಸಂಜೆ ವೇಳೆಗೆ ರಕ್ಷಿಸಿದ್ದಾರೆ. ಹೆಚ್ಚಿನ ಗಾಯಾಳುಗಳನ್ನು ಸ್ಥಳಿಯ ಜೆಜೆ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು ಆ ಪಯ್ಕಿ 7ಕ್ಕೂ ಅಧಿಕ ಮಂದಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ ಎಂದು ಜೆಜೆ ಆಸ್ಪತ್ರೆ ವೈದ್ಯಾಧಿಕಾರಿ ಟಿ.ಪಿ ಲಹನೆ ತಿಳಿಸಿದ್ದಾರೆ.ಇನ್ನೂ 11 ಜನರು ಒಳಗೆ ಸಿಕ್ಕಾಕಿ ಕೊಂಡಿರುವ ಅನುಮಾನವಿದೆ ಎಂದು ಬೈಕುಲಾ ಆಗ್ನಿಶಾಮಕ ದಳದ ಉನ್ನತಾಧಿಆರಿ ಪ್ರಭಾತ್ ರಹಂಗ್ದಾಳೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್, ಪಾಲನಾ (ಉಸ್ತುವರಿ) ಸಚಿವ ಸುಭಾಶ್ ದೇಸಾಯಿ, ಬೈಕುಲಾ ಶಾಸಕ ವಾರೀಸ್ ಪಠಣ್, ಮೇಯರ್ ಪೆÇ್ರ| ವಿಶ್ವನಾಥ್ ಮಹಾದೇಶ್ವರ್, ಬಿಜೆಪಿ ನೇತೆ ಶೈನಾ ಎನ್.ಸಿ, ಭೂಗತದೊರೆ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕಾರ್ ಸೇರಿದಂತೆ ಅನೇಕರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಂತ್ವಾನ ಹೇಳಿ ಗಾಯಾಳುಗಳ ಸ್ಥಿತಿಗತಿ ಪರಿಶೀಲಿಸಿ ಸಹಾಯಧನದ ಭರವಸೆಯನ್ನಿತ್ತರು. ಮುಖ್ಯಮಂತ್ರಿ ಫಡ್ನಾವಿಸ್ ಅವರು ಘಟನೆಯ ಮೂಲ ಕಾರಣ ನಡೆಸಿ ವಿಸ್ತ್ಕೃತ ವರದಿ ನೀಡುವಂತೆ ಗೃಹ ನಿರ್ಮಾಣ ಇಲಾಖೆ ಹಾಗೂ ತನಿಖಾ ಅಧಿಕಾರಿಗಳಿಗೆ ಸೂಚಿಸಿದ್ದು ಮೃತರೋರ್ವರಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಆಸ್ಪತ್ರೆಯಲ್ಲಿ ದಾಖಲಾದವರಿಗೆ ಚಿಕಿತ್ಸೆ ವೆಚ್ಚ ರಾಜ್ಯ ಸರಕಾರವು ಭರಿಸುವುದಾಗಿ ತಿಳಿಸಿದ್ದಾರೆ. ಮಹಾನಗರದಲ್ಲಿ ಒಂದು ತಿಂಗಳಲ್ಲೇ ಇದು ಮೂರನೇ ಕಟ್ಟಡ ಕುಸಿತದ ಘಟನೆಯಾಗಿದೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here