Saturday 10th, May 2025
canara news

ಕೊಂಕಣಿ ವಿದ್ಯಾರ್ಥಿ ಸಮ್ಮೇಳನ ಪ್ರತಿಭಾ ಸಮರ್ಪಣ್

Published On : 01 Sep 2017   |  Reported By : Bernard J Costa


ಕುಂದಾಪುರದ ಜೈಕೊಂಕಣಿ(ರಿ) ಸಂಸ್ಥೆಯ ಆಶ್ರಯದಲ್ಲಿ ಸೆ.3 ರಂದು ಕೊಂಕಣಿ ವಿದ್ಯಾರ್ಥಿ ಸಮ್ಮೇಳನ "ಪ್ರತಿಭಾ ಸಮರ್ಪಣ್" ಕುಂದಾಪುರದ ಸರಕಾರಿ ಪ.ಪೂ.ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಲಿದೆ.

ಸಮ್ಮೇಳನ ಬೆಳಿಗ್ಗೆ 9.30ಕ್ಕೆ ಪ್ರಾರಂಭಗೊಳ್ಳಲಿದ್ದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಆರ್.ಪಿ.ನಾಯಕ್ ದಾಂಡೇಲಿ ಉದ್ಘಾಟನೆ ನಡೆಸಲಿದ್ದಾರೆ. ಸಮ್ಮೇಳನಕ್ಕೆ ಫ್ಯಾನ್ಸಿಟಾ ಚಾಲನೆ ನೀಡಲಿದ್ದು ಅಧ್ಯಕ್ಷತೆಯನ್ನು ಶ್ರೇಯಾ ಎಸ್.ಕಾಮತ್ ವಹಿಸಲಿದ್ದಾರೆ. ಪ್ರಧಾನ ಅತಿಥಿಯಾಗಿ ಸುಧೀಂದ್ರ ಶೇಟ್ ಪಾಲ್ಗೊಳ್ಳಲಿದ್ದಾರೆ.

ಶ್ರದ್ಧಾ ನಾಯಕ್, ದೀಕ್ಷಾ ಆರ್.ಕಾಮತ್, ಮೇಘಾ, ಪ್ರಮೀಳಾ ಕಾರ್ವೆಲ್ಲೋ ಮುಖ್ಯ ಅತಿಥಿಗಳಾಗಿ ಮಾತನಾಡಲಿದ್ದಾರೆ.

ಒಟ್ಟು 4 ಗೋಷ್ಠಿಗಳು ನಡೆಯಲಿದ್ದು "ಅಂಕ್ ಜಾವ್ಕಾಕೀ ಜ್ಞಾನ"ಗೋಷ್ಠಿಯಲ್ಲಿ ಉಮಾನಾಯಕ್, ಶ್ರೀನಿಧಿ ಖಾರ್ವಿ, ಸ್ವಾತಿ ಪೈ, ಸನ್ನಿಧಿ ಶೇಟ್, ಶ್ರೀರಾಮ ಭಾಗವಹಿಸಲಿದ್ದಾರೆ.

ಆರೋಗ್ಯ ಜಾವ್ಕಾಕೀ ಐಶ್ವರ್ಯ?" ಗೋಷ್ಠಿಯಲ್ಲಿ ಅಕ್ಷಯ ಕಾಮತ್, ಮೇಘನಾ ಪ್ರಭು, ಅಕಾೈಯ್ಯ ಮೆಂಡೋನ್ಸಾ, ರಿತಿಕಾ ಜೊಯ್, ಅಶ್ವಿನಿ ಮಾತನಾಡಲಿದ್ದಾರೆ.

"ಸ್ವಚ್ಛತಾ -ಸತ್ಕಾರ್ಯ" ಗೋಷ್ಠಿಯಲ್ಲಿ ಜಯಶ್ರೀ ಶೇಟ್, ಅಕ್ಷಯ ಸಿ.ಮೇಸ್ತ, ದೀಕ್ಷಾ ಶ್ಯಾನುಭಾಗ್, ಕೆ.ನಮಿತಾ ಭಟ್, ವಂದ್ಯಾ ಕಾಮತ್ ವಿಷಯ ಮಂಡಿಸಲಿದ್ದಾರೆ.

"ಕೊಂಕಣಿ ಭಾಷಾ ಆನಿ ಸಂಸ್ಕøತಿ" ಗೋಷ್ಠಿಯಲ್ಲಿ ಮೇಘನಾ ಪ್ರಭು, ಪವನ ಬಾಳಗ, ಯು.ಶಶಾಂಕ ಶೆಣೈ, ವಿಜಯೇಂದ್ರ ಶ್ಯಾನುಭಾಗ, ಮಿಥುನಾ ಪ್ರಭು, ಶರಲ್ ಆಲ್ಮೇಡಾ, ರಿತು ಖಾರ್ವಿ ವಿಷಯ ಮಂಡನೆ ಮಾಡಲಿದ್ದಾರೆ.

ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ಬಿ.ಬಿ.ಹೆಗ್ಡೆ ಕಾಲೇಜು, ಭಂಡಾರ್‍ಕಾರ್ಸ್ ಕಾಲೇಜು, ಆರ್.ಎನ್.ಶೆಟ್ಟಿ ಪ.ಪೂ. ಕಾಲೇಜು, ವೆಂಕಟರಮಣ ಪ.ಪೂ.ಕಾಲೇಜು, ಸರಕಾರಿ ಪ.ಪೂ.ಕಾಲೇಜು, ಸೈಂಟ್ ಮೇರೀಸ್ ಪ.ಪೂ.ಕಾಲೇಜು, ವೆಂಕಟರಮಣ ಪ್ರೌಢಶಾಲೆ, ಎಸ್.ವಿ.ಪ್ರೌಢ ಶಾಲೆ, ಗಂಗೊಳ್ಳಿ, ಸರಕಾರಿ ಪ್ರೌಢಶಾಲೆ , ಕುಂದಾಪುರ , ವಿ.ಕೆ.ಆಚಾರ್ಯ ಪ್ರೌಢಶಾಲೆ ಮುಂತಾದ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿ ರೋಜರಿ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಡಿ' ಆಲ್ಮೇಡಾ , ಉದಯ್ ಕುಮಾರ್ ಶೇಟ್ ಪ್ರಧಾನ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಂಜಿತಾ ಮಲ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ದಿವ್ಯಾ ಡಿ'ಮೆಲ್ಲೋ , ನಂದಿನಿ ಆಚಾರ್ಯ, ರೋಹಿಣಿ, ಚೇತನಾ ಶೆಣೈ, ಕೇದಾರ ಭಟ್ ಮಾತನಾಡಲಿದ್ದಾರೆ.

"ಪ್ರತಿಭಾ ಸಮರ್ಪಣಾ ಸಮ್ಮೇಳನವನ್ನು ಯು.ಸುಷ್ಮಾ ಶೆಣೈ , ದೀಪಿಕಾ ಶ್ಯಾನುಭಾಗ್, ಯು.ಸಂಗೀತಾ ಶೆಣೈ, ಅರುಂಧತಿ ನಾಯಕ್, ಭಾರತಿ ಶೆಣೈ, ಚೈತ್ರಾ ಶ್ಯಾನುಭಾಗ್ ಉದಯ ಭಂಡಾರ್‍ಕಾರ್, ಉಮೇಶ್ ನಾಯಕ್, ಅನಿಶಾ ಜ್ಯೊತಿ ರೆಬೆಲ್ಲೋ ಅಂಕಿತಾ ಪ್ರಥ್ವಿ ಪೈ, ಪವನ ಪೈ, ಅರ್ಜುನ್ ಭಟ್, ದೀಕ್ಷಾ ಆರ್.ಕಾಮತ್, ಅಂಕಿತಾ ಶೆಣೈ, ಫ್ಲೆಕ್ಸೊನ್ ನಜರತ್ ವರ್ಷಾ ಆರ್.ಕಿಣಿ, ಚಂದ್ರಿಕಾ ಕಾಮತ್, ವಾಣಿ ರೋಶನ್ ಲೂಯಿಸ್ ಸಮ್ಮೇಳನ ನಡೆಸಿಕೊಡಲಿದ್ದಾರೆ.

ಈ ಸಮ್ಮೇಳನದಲ್ಲಿ ಎಲ್ಲಾ ಕೊಂಕಣಿ ಬಾಂಧವರು ಭಾಗವಹಿಸಿ ಸಹಕರಿಸಬೇಕೆಂದು ಜೈಕೊಂಕಣಿ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ , ಕಾರ್ಯದರ್ಶಿ ಪಿ.ಜಯವಂತ ಪೈ ವಿನಂತಿಸಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here