ಮಂಗಳೂರು: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳಿಗೆ ಮಂಗಳೂರಿನ ವಿಶೇಷ ನ್ಯಾಯಾಲಯವು ಶಿಕ್ಷೆ ನೀಡಿ ತೀರ್ಪು ನೀಡಿದೆ.
ನರಿಂಗಾನ ತೌಡುಗೋಳಿಯ ಹಫೀಝ್ , ಮಂಜೇಶ್ವರ ಉಪ್ಪಳದ ಮಹಮ್ಮದ್ ಸಿರಾಜ್, ಬೆಳ್ಮ ರೆಂಜಾಡಿಯ ಮಹಮ್ಮದ್ ಇಮ್ತಿಯಾಜ್ ಅವರಿಗೆ ಮಾದಕ ದ್ರವ್ಯ ಕಾಯ್ದೆಯಡಿ ಶುಕ್ರವಾರ ಇಲ್ಲಿನ ವಿಶೇಷ ನ್ಯಾಯಾಲಯ 1 ವರ್ಷ 6 ತಿಂಗಳು ಜೈಲು ಶಿಕ್ಷೆ ಮತ್ತು 15 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.