ಕುಂದಾಪುರ, ಸೆ.2: ಕುಂದಾಪುರ ನಗರದ ಸಂತ ಜೋಸೆಫ್ ಕನ್ನಡ ಮಾಧ್ಯಮ ಶಾಲೆಗೆ ಶಾಲೆಯ 1975- 80 ರ ಸಾಲಿನ ಹಳೆ ವಿಧ್ಯಾರ್ಥಿಗಳು ಜೊತೆ ಸೇರಿ ತಾವು ವಿಧ್ಯಾರ್ಜನೆ ಮಾಡಿದ ಶಾಲೆಗೆ ಸುಮಾರು 25 ಸಾವಿರ ರೂಪಾಯಿ ಬೆಲೆ ಬಾಳುವ ಟೇಬಲ್ ಟೆನ್ನಿಸ್ ಆಟೋಟಿಕೆಯನ್ನು ಶುಕ್ರಾವಾರದಂದು ಶಾಲೆಯ ಮುಖ್ಯೊಪ್ಯಾಧಿನಿ ಸಿಸ್ಟರ್ ಕೀರ್ತನ ಮತ್ತು ಶಾಲಾ ಸಂಚಾಲಕಿ ಸಿಸ್ಟರ್ ವಾಯ್ಲೆಟ್ ತಾವ್ರೊರವರಿಗೆ ಹಸ್ತಾಂತರಿಸಿದರು.
ಟೇಬಲ್ ಟೆನಿಸ್ ಕೊರ್ಟನ್ನು ಶಾಲಾ ಹಳೆ ವಿಧ್ಯಾರ್ಥಿ ಪುರಸಭಾ ಸದಸ್ಯ ವಿಜಯ ಪೂಜಾರಿ ಉದ್ಘಾಟಿಸಿ ಶುಭ ಹಾರೈಸಿದರು. ನಂತರ ನೆಡದ ಸಮಾರಂಭದಲ್ಲಿ ಸಂಘಟಕ ಜೋಯ್ ಕರ್ವಾಲ್ಲೊ ಮಾತಾಡಿ ‘ನಮ್ಮ ಶಾಲೆಯೆಂದು ನಮಗೆ ಹೆಮ್ಮೆಯಿದೆ, ಅದಕ್ಕೆ ಪೂರಕವಾಗಿ ನಾವು ಮಕ್ಕಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಮುಂದೆ ಬರಲು ಇಂತಹ ಕಾರ್ಯವನ್ನು ಹಮ್ಮಿಕೊಳ್ಳಲಾಯಿತು’ ಎಂದು ತಿಳಿಸಿದರು. ಕಮಾಲಕ್ಷ ಅಮೀನ್, ಪೂರ್ಣಿಮಾ ಮೇಸ್ತಾ ಹಳೆ ವಿಧ್ಯಾಥಿಗಳು ಹಾಗೂ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹರೀಶ್ ಭಂಡಾರಿ ಶುಭ ಕೋರಿದರು. ಸಭೆಯಲ್ಲಿ ಎಡಿಟಾ ಫೆರ್ನಾಂಡಿಸ್ (ಸೋಜಾ) ಗಣೇಶ ಪೂಜಾರಿ, ಕಲ್ಪನಾ, ಗಣೇಶ ಶೆಟ್ಟಿ ಮಾಧವ ಮೇಸ್ತ, ಲೀನಸ್ ಕ್ರಾಸ್ಟಾ ಮೊದಲಾದವರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕಿ ಸಿಸ್ಟರ್ ವಾಯ್ಲೆಟ್ ತಾವ್ರೊ ಶಾಲೆಗೆ ಉಪಕಾರ ಸ್ಮರಣೆ ಮಾಡಿ ಟೇಬಲ್ ಟೆನಿಸ್ ದಾನವನ್ನು ಮಾಡಿದಕ್ಕಾಗಿ ಹಳೆ ವಿಧ್ಯಾರ್ಥಿಗಳ ಉಪಕಾರವನ್ನು ಸ್ಮರಿಸಿದರು. ಶಾಲೆಯ ಮುಖ್ಯೊಪ್ಯಾಧಿನಿ ಸಿಸ್ಟರ್ ಕೀರ್ತನ ಸ್ವಾಗತವನ್ನು ಕೋರಿ ಎಲ್ಲರ ಉಪಕಾರ ಸ್ಮರಿಸಿ ಧನ್ಯವಾದಗಳನ್ನು ಅರ್ಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅನಿಲ್ ಪಾಯ್ಸ್ ಕಾರ್ಯಕ್ರಮವನ್ನು ನಿರೂಪಿಸಿದರು.