Saturday 10th, May 2025
canara news

ಬಾನುಲಿ “ಸ್ವರ ಮಂಟಮೆ”ಯಲ್ಲಿ ಬೋಲ ‘ಕೃತಿ ಅನಾವರಣ’

Published On : 02 Sep 2017   |  Reported By : Rons Bantwal


ಮಂಗಳೂರು ಆಕಾಶವಾಣಿ ಕೇಂದ್ರದ ತುಳು ವಿಭಾಗದ ‘ಸ್ವರ ಮಂಟಮೆ’ ಸಿ.ಡಿ. ಪುಸ್ತಕ ಅನಾವರಣದ ನೇರಪ್ರಸಾರÀ ಕಾರ್ಯಕ್ರಮದ 10ನೇ ಸಂಚಿಕೆಯಲ್ಲಿ ಸೆಪ್ಟಂಬರ್ ಎರಡರಂದು ಬೆಳಿಗ್ಗೆ 10.30 ರಿಂದ 11.30ರವರೆಗೆ ದಿವಂಗತ ಬೋಲ ಚಿತ್ತರಂಜನ್‍ದಾಸ ಶೆಟ್ಟಿ ಅವರ ‘ಮಾತೃಧರ್ಮ ಅಳಿಯ ಸಂತಾನ’ ಕೃತಿಯ ಅನಾವರಣ ನಡೆಯಲಿದೆ.

ಹಿರಿಯ ತುಳು-ಕನ್ನಡ ಸಾಹಿತಿ ಡಾ.ವಾಮನ ನಂದಾವರ ಅವರು ಕೃತಿಯನ್ನು ಅನಾವರಣ ಮಾಡಲಿದ್ದು ಕೃತಿ ವಿಮರ್ಶೆ ಮಾಡಲಿರುವರು. ಈ ಕಾರ್ಯಕ್ರಮದಲ್ಲಿ ಪ್ರಭಾಕರ ಶೆಟ್ಟಿ ಕುತ್ತಾರ್, ರೂಪಕಲಾ ಆಳ್ವ ಮಾಜಿ ಸದಸ್ಯರು, ತುಳು ಅಕಾಡೆಮಿ, ಚಂದ್ರಶೇಖರ ಶೆಟ್ಟಿ, ನಿರ್ದೇಶಕರು, ಸನಾತನ ನಾಟಾ ್ಯಲಯ, ಪತ್ರಕÀರ್ತೆ ರೇಶ್ಯ ಉಳಾ ್ಳಲ , ಅಕ್ಷಯ ಆರ್ ಶೆಟ್ಟಿ ಹಾಗೂ ಸದಾಶಿವ ಶೆಟ್ಟಿ ಭಾಗವಹಿಸಲಿದ್ದಾರೆ.

ಅಳಿದುಳಿದವರು, ಕುಡಿ, ಒಂಟಿ-ಒಬ್ಬಂಟಿ ಕಾದಂಬರಿ ನೀರ್, ಪೊಣ್ಣ್ ಮಣ್ಣ್‍ದ ಬೊಂಬೆ ನಾಟಕಗಳು, ಬಿನ್ನೆದಿ ಮುಂತಾದ ಕೃತಿಗಳನ್ನು ಬರೆದ ಬೋಲ ಅವರ ಸಾಹಿತ್ಯಕ ಮತ್ತು ಸಮಾಜ ಮುಖಿ ಜೀವನದ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮ ಇದಾಗಿದೆ. ಕೇಳುಗರು ಕೂಡಾ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಲು. 2211999(ಎಸ್‍ಟಿಡಿ 0824) ಮೊಬೈಲ್ 8277038000ಯನ್ನು ಸಂಪರ್ಕಿಸಬಹುದು. ಈ ಕಾರ್ಯಕ್ರಮವನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ನಡೆಸಿಕೊಡಲಿದ್ದಾರೆ ಎಂದು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಉಷಾಲತಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here