Friday 4th, July 2025
canara news

ಮಂಗಳೂರಿನಲ್ಲಿ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭ

Published On : 03 Sep 2017   |  Reported By : Canaranews network


ಮಂಗಳೂರು: ರಾಷ್ಟ್ರೀಯ ಗ್ರಾಹಕರ ಮೇಳವು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಸೆ. 1ರಂದು ಸಂಜೆ 6 ಗಂಟೆಗೆ ಶುಭಾರಂಭಗೊಂಡಿದೆ.

ಎನ್ಸಿಎಫ್ ಸಂಘಟನೆಯು ಮೇಳವನ್ನು ಸಂಘಟಿಸುತ್ತಿದೆ. ಮಂಗಳೂರಿಗೆ ಸ್ನೋವರ್ಲ್ಡ್, ಅಕ್ವಾ ಶೋ, ಬರ್ಡ್ ಶೋ, ತಾಜ್ಮಹಲ್ನಂತಹ ವಿನೂತನ ರೀತಿಯ ಮೆಗಾ ಶೋಗಳನ್ನು ನೀಡಿರುವ ಈ ಸಂಸ್ಥೆ ಪ್ರತಿ ಬಾರಿಯೂ ಹೊಸ ಶೋಗಳನ್ನು ನೀಡುತ್ತಿದ್ದು, ಯಶಸ್ವಿ ಹತ್ತನೇ ರಾಷ್ಟ್ರೀಯ ಗ್ರಾಹಕರ ಮೇಳವು ಸಂಪೂರ್ಣ ಕುಟುಂಬಕ್ಕಾಗಿನ ಶಾಪಿಂಗ್ ಮತ್ತು ಮನೋರಂಜನಾ ಮೇಳವಾಗಿರುತ್ತದೆ.

ಈ ಬಾರಿ ಅತೀ ದೊಡ್ಡ ಐಫೆಲ್ ಗೋಪುರದ ಪ್ರತಿಕೃತಿ ಮತ್ತು ರೊಬೊಟ್ ಪ್ರಾಣಿಗಳ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಇದರ ಎದುರು ಸೆಲ್ಫಿ ಕ್ಲಿಕ್ಕಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.ಕಲಾವಿದ ಶೇಖರ್ ಅವರ ಕೊಡುಗೆಯಾದ 90 ಅಡಿ ಎತ್ತರದ ಉಕ್ಕಿನ ಐಫೆಲ್ ಗೋಪುರದ ಪ್ರತಿಕೃತಿ ನಿರ್ಮಾಣ ಮಾಡಲಾಗಿದ್ದು, 20 ಟನ್ ಉಕ್ಕಿನಿಂದ ನಿರ್ಮಾಣಗೊಂಡ ಈ ಪ್ರತಿಕೃತಿ ಕರಾವಳಿ ವಸ್ತು ಪ್ರದರ್ಶನ ಮೈದಾನದಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.

10 ಸಾವಿರ ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ನೈಜ ಗಾತ್ರದ ರೊಬೊಟ್ ಪ್ರಾಣಿಗಳ ಪ್ರದರ್ಶನ, ವಿವಿಧ ಖಂಡದ ವನ್ಯಮೃಗಗಳನ್ನು ಒಂದೇ ಮೃಗಾಲಯದಲ್ಲಿ ವೀಕ್ಷಣೆಗೆ ಅವಕಾಶವಿದೆ. ಇದು ಸಹಜ ಎನಿಸುವ ಪ್ರಾಣಿಗಳ ಚಲನೆ ಹಾಗೂ ಶಬ್ದ ನೈಜತೆಯ ಅನುಭವ ನೀಡುತ್ತದೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here