Friday 4th, July 2025
canara news

ಕನ್ನಡ ಸಂಘ ಸಾಂತಾಕ್ರೂಜ್ ಜರುಗಿಸಿದ 60ನೇ ವಾರ್ಷಿಕ ಮಹಾಸಭೆ

Published On : 04 Sep 2017   |  Reported By : Rons Bantwal


ಸಂಘಸಂಸ್ಥೆಗಳಲ್ಲಿ ವೈಯಕ್ತಿಕ ಸ್ವಾರ್ಥ ಸಲ್ಲದು:ಎಲ್.ವಿ ಅವಿೂನ್

ಮುಂಬಯಿ, ಸೆ.04: ಕನ್ನಡ ಸಂಘ ಸಾಂತಾಕ್ರೂಜ್ (ರಿ).ಇದರ 60ನೇ ವಾರ್ಷಿಕ ಮಹಾಸಭೆಯು ಇಂದಿಲ್ಲಿ ಶನಿವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವ ಭವನದ ಕಿರು ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ಎಲ್.ವಿ ಅವಿೂನ್ ಅಧ್ಯಕ್ಷತೆಯಲ್ಲಿ ಜರುಗಿತು.

ನಮ್ಮ ಹಿರಿಯರು ನಮ್ಮ ಮತ್ತು ನಮ್ಮ ಭವಿಷ್ಯದ ಜನತೆಯ ಹಿತಕ್ಕಾಗಿ ಸಂಘಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಯಾವುದೋ ಪುಣ್ಯದ ಫಲವಾಗಿ ಈ ಸಂಘದ ಸಾರಥ್ಯ ವಹಿಸಿ ಮುನ್ನಡೆಸುವ ಭಾಗ್ಯ ನಮ್ಮ ಪಾಲಿಗೆ ಒದಗಿದೆ. ಇದನ್ನು ನಾವು ಪ್ರಾಮಾಣಿಕವಾಗಿ ಮುನ್ನಡೆಸಬೇಕೇ ಹೊರತು ನಮ್ಮ ಖಾಸಾಗಿತನ ಯಾ ಸ್ವಾರ್ಥಕ್ಕಾಗಿ ಸದ್ಭಳಕೆ ಮಾಡಬಾರದು.ಸಂಘಸಂಸ್ಥೆಗಳಲ್ಲಿ ಎಂದಿಗೂ ವೈಯಕ್ತಿಕ ಸ್ವಾರ್ಥ ಸಲ್ಲದು ಎಂದÀು ಅಧ್ಯಕ್ಷೀಯ ಭಾಷಣದಲ್ಲಿ ಎಲ್.ವಿ ಅವಿೂನ್ ತಿಳಿಸಿದರು.

ಜೊತೆ ಕೋಶಾಧಿಕಾರಿ ಆರ್.ಪಿ ಹೆಗ್ಡೆ, ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ವೇದಿಕೆಯಲ್ಲಿ ಆಸೀನರಾಗಿದ್ದು ಗೌರವ ಪ್ರಧಾನ ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಗತ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಸಿಎ| ರಮೇಶ್ ಎ.ಶೆಟ್ಟಿ ಗತ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ ಕಾರ್ಯಕಾರಿ ಸಮಿತಿಗೆ 15 ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆಗೊಳಿಸಲಾಯಿತು.

ಸೂಕ್ತ ಸಲಹೆ ಸೂಚನೆಗಳಿಂದ ಸಂಘ ಸಂಸ್ಥೆಗಳು ಪ್ರಾಮಾಣಿಕವಾಗಿ ಮುನ್ನಡೆಯುವುದು. ನಮ್ಮ ಸಂಘವು ಸದಸ್ಯರ ಮಾನ್ಯತೆ ಅಂತೆಯೇ ಮುನ್ನಡೆಯುತ್ತಿದೆ. ಇದರಿಂದ ಸಾರ್ಥಕ 60 ವರ್ಷದ ಸೇವೆಗೆ ಅಣಿಯಾಗಿದೆ. ಸಂಸ್ಥೆ ಹುಟ್ಟು ಹಾಕಿದವರ ಕನಸು ನನಸಾಗುತ್ತಿದೆ. ಹಿರಿಯರ ಚಿಂತನೆಗೆ ನಾವೂ ಬದ್ಧರಾಗಿ ಭವಿಷ್ಯತ್ತಿನ ಪೀಳಿಗೆಗೆ ಈ ಸಂಸ್ಥೆಯನ್ನು ಮುನ್ನಡೆಸಬೇಕಾಗಿದೆ. ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂದು ದತ್ತಿ ಸ್ವೀಕಾರದ ಮುಖೇನ ಶೈಕ್ಷಣಿಕವಾಗಿ ಪೆÇ್ರೀತ್ಸಾಹಿಸುತ್ತಿದೆ. ದಾನಿಗಳ ಪೆÇ್ರೀತ್ಸಾಹದಿಂದ ಸಂಘವು ಬಲಾಢ್ಯಹೊಂದಿದು ಇದನ್ನು ಸಮಾಜಮುಖಿ ಸೇವೆಗೆ ವಿನಿಯೋಗಿಸುತ್ತೇವೆ ಎಂದು ಎಲ್ವೀ ಅವಿೂನ್ ತಿಳಿಸಿದರು.

ಸಭೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶಿಮರಾಮ ಕೋಟ್ಯಾನ್, ಜಿ.ಆರ್ ಬಂಗೇರಾ, ಸುಧಾಕರ್ ಉಚ್ಚಿಲ್, ಲಕ್ಷ್ಮೀ ಎನ್.ಕೋಟ್ಯಾನ್, ಸುಮಾ ಎಂ.ಪೂಜಾರಿ, ವನಿತಾ ನೋಂದ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅವಿೂನ್ ಸಲಹಾ ಸಮಿತಿ ಸದಸ್ಯರುಗಳಾದ ನಾರಾಯಣ ಎಸ್.ಶೆಟ್ಟಿ, ಬಿ.ಆರ್ ಪೂಂಜಾ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಶಾರಾದ ಎಸ್.ಪೂಜಾರಿ, ಲೆಕ್ಕ ಪರಿಶೋಧಕರುಗಳಾದ ದಿನೇಶ್ ಅಮೀನ್, ವಿವಿಧ ಉಪ ಸಮಿತಿಗಳ ಪ್ರಸನ್ನ ಶೆಟ್ಟಿ, ಶಿವರಾಮ ಕೋಟ್ಯಾನ್, ಲಿಂಗಪ್ಪ ಬಿ.ಅವಿೂನ್, ಉಷಾ ಪಿ.ಶೆಟ್ಟಿ, ಚಂದಯ್ಯ ಪೂಜಾರಿ, ಶಾಲಿನಿ ಜಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಲಕ್ಷ್ಮೀ ಎನ್.ಕೋಟ್ಯಾನ್ ಪ್ರಾರ್ಥನೆಯನ್ನಾಡಿದರು. ಗೌರವ ಪ್ರಧಾನ ಕಾರ್ಯದರ್ಶಿ ಸುಜತಾ ಆರ್.ಶೆಟ್ಟಿ ಸ್ವಾಗತಿಸಿ ಧನ್ಯವದಿಸಿದರು. ಸಂಘವು ವಾರ್ಷಿಕವಾಗಿ ನೀಡುವ 2017ನೇ ಸಾಲಿನ ವಿದ್ಯಾಥಿರ್ü ವೇತನ ವಿತರಣೆ, ದತ್ತು ಸ್ವೀಕೃತ ವಿದ್ಯಾಥಿರ್üಗಳ ವಿದ್ಯಾಸಹಾಯ ವಿತರಣೆ ಸಭೆಯ ವಿತರಿಸಿದರು.

ಆರುದಶಕಗಳ ಇತಿಹಾಸದಲ್ಲೇ ಮೊದಲ ಚುನಾವಣೆ
ಒಟ್ಟು 556 ಸದಸ್ಯತ್ವವುಳ್ಳ ಸಂಘದ ಕಾರ್ಯಕಾರಿ ಸಮಿತಿಗೆ ಹದಿನೈದು ಸದಸ್ಯತ್ವಕ್ಕಾಗಿ ಸುಮಾರು 28 ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಆ ಹಿನ್ನಲೆಯಲ್ಲಿ ಆರುದಶಕಗಳ ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ ಚುನಾವಣೆ ನಡೆಸಲ್ಪಟ್ಟಿತು. 74 ಒಟ್ಟು ಮತಗಳು ಚಲಾವಣೆ ಆಗಿದ್ದು 13 ಮತಗಳು ಅಸಿಂಧು ಗೊಂಡಿದ್ದವು. ಅಂತೆಯೇ ಪ್ರಸಕ್ತ ಅಧ್ಯಕ್ಷ ಎಲ್.ವಿ ಅವಿೂನ್ ಅವರಿಗೆ 52 ಮತಗಳು ಲಭ್ಯವಾದವು. ಇತರ ಸದಸ್ಯರುಗಳಾಗಿ ದಿನೇಶ್ ಬಿ.ಅಮೀನ್ (50), ಲಕ್ಷ್ಮೀ ಎನ್. ಕೋಟ್ಯಾನ್ (49), ಬನ್ನಂಜೆ ರವೀಂದ್ರ ಅಮೀನ್ (48), ಚಂದ್ರಹಾಸ ಜೆ.ಕೋಟ್ಯಾನ್ (46), ಸುಜತಾ ಆರ್.ಶೆಟ್ಟಿ (45), ಗೋವಿಂದ ಆರ್.ಬಂಗೇರಾ (41), ಶಾರದಾ ಎಸ್.ಪೂಜಾರಿ (39), ಸುಮಾ ಪೂಜಾರಿ (38), ಸುಧಾಕರ್ ಉಚ್ಚಿಲ್ (35), ಶಕೀಲಾ ಪಿ.ಶೆಟ್ಟಿ (34), ವನಿತಾ ನೋಂದ (34), ಶಾಲಿನಿ ಎಸ್.ಶೆಟ್ಟಿ (33), ಗುಣಪಾಲ ಶೆಟ್ಟಿ ಐಕಳ (31), ರಾಮಚಂದ್ರ ಪರಮೇಶ್ವರ್ ಹೆಗ್ಡೆ (30) ಮತಗಳೊಂದಿಗೆ ಚುನಾಯಿತರಾದರು. ಚುನಾವಣಾ ಅಧಿಕಾರಿಗಳಾಗಿ ಧರ್ಮೇಶ್ ಎಸ್.ಸಾಲ್ಯಾನ್, ಬಿ.ಆರ್ ಪೂಂಜಾ ಮತ್ತು ವಿಜಯಕುಮಾರ್ ಕೋಟ್ಯಾನ್ ಚುನಾವಣಾ ಪ್ರಕ್ರಿಯೆ ನಡೆಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here