Saturday 10th, May 2025
canara news

ವೈ.ಸಿ.ಎಸ್ ಸಂಘಟನೆಯಿಂದ ಕುಂದಾಪುರದಲ್ಲಿ ಟೀಚರ್ಸ್ ಡೇ

Published On : 04 Sep 2017   |  Reported By : Bernard J Costa


ಕುಂದಾಪುರ, ಸೆ.4: ಕುಂದಾಪುರ ಹೋಲಿ ರೊಜರಿ ಇಗರ್ಜಿಯ ವೈ.ಸಿ.ಎಸ್ ಸಂಘಟನೆಯ ಸದಸ್ಯರು, ಕುಂದಾಪುರ ಇಗರ್ಜಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲಾ ಪ್ರಸ್ತೂತ ಮತ್ತು ನಿವ್ರತ್ತಿ ಹೊಂದಿದ ಕ್ರಿಶ್ಚಿಯನ್ ಶಿಕ್ಷಕ ಶಿಕ್ಷಕಿಯರೊಂದಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.

 

 

ಭಾನುವಾರದಂದು ಬೆಳಗ್ಗೆ ರೋಜರಿ ಮಾತೆಯ ಇಗರ್ಜಿಯಲ್ಲಿ ಶಿಕ್ಷಕರೊಡಗೂಡಿ ಪ್ರಾಂಶುಪಾಲರಾದ ಫಾ|ಪ್ರವೀಣ್ ಅಮ್ರತ್ ಮಾರ್ಟಿಸ್ ಪ್ರಧಾನ ಯಾಜಕತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿಲಯಿತು ‘ಯೇಸು ಸ್ವಾಮಿ ಒಬ್ಬ ಶ್ರೇಷ್ಠ ಶಿಕ್ಷಕರಾಗಿದ್ದರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಪ್ರೇರಣಯನ್ನು ತುಂಬುವರಾಗಬೇಕು’ ಎಂದು ಅವರು ಪ್ರವಚನ ನೀಡಿದರು. ನಂತರ ಇಗರ್ಜಿಯ ಸಭಾ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶಿಕ್ಷರೆಲ್ಲರೂ ಸರ್ವಪಳ್ಳಿ ರಾಧಕ್ರಷ್ಣ ಅವರ ಛಾಯ ಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಅವರನ್ನು ಸ್ಮರಿಸಿ ಗೌರವಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ನಿವ್ರತ್ತ ಶಿಕ್ಷಕ ಜೋನ್ ಡಿಸೋಜಾ ‘ಶಿಕ್ಷರು ರೈತರಂತೆ, ರೈತ ಭೂಮಿಯನ್ನು ಚೆನ್ನಾಗಿ ಬೇಸಾಯಕ್ಕೆ ಯೋಗ್ಯವನ್ನಾಗಿಸಿ. ಮಾಡಿ ಫಲ ಬಿತ್ತಿ ಉತ್ತಮ ಫಲವನ್ನು ಪಡೆದುಕೊಳ್ಳುತ್ತಾನೊ ಹಾಗೆ ಶಿಕ್ಷಕರು ಶಾಲೆಗಳಲ್ಲಿ ಉತ್ತಮ ವಿದ್ಯಾರ್ಥಿಗಳನ್ನಾಗಿ ಮಾರ್ಪಡಿಸುವ ಶ್ರಮ ವಹಿಸ ಬೇಕೆಂದರು. ಅಧ್ಯಕ್ಷತೆ ವಹಿಸಿದ ಪ್ರಧಾನ ಧರ್ಮಗುರು ಫಾ|ಅನಿಲ್ ಡಿಸೋಜಾ ‘ಶಿಕ್ಷರು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅದನ್ನು ಹೊರಹೊಮ್ಮುವಂತೆ ಮಾಡಬೇಕು. ಮಕ್ಕಳಿಗೆ ನೊಯಿಸ ಬೇಡಿ, ಮಕ್ಕಳನ್ನು ಅರ್ಥೈಸಿಕೊಳ್ಳಿ. ಮುಂಜಾನೆ ನಿಮ್ಮನ್ನೆ ದೇವರಿಗೆ ಸಮರ್ಪಿಸಿಕೊಳ್ಳಿ, ಎಲ್ಲವನ್ನು ದೇವರ ಮೇಲೆ ಭಾರ ಹಾಕಿರಿ, ನಿಮ್ಮ ಎಲ್ಲ ಸಮಸ್ಯೆಗಳಿಗೆ ದೇವರೆ ಬಗೆಹರಿಸುತ್ತಾರೆ’ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ವ|ಫಾ|ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ವೈ.ಸಿ.ಎಸ್ ಸಂಘಟನೇಯ ಮಕ್ಕಳು ಶಿಕ್ಷಕರಿಗಾಗಿ ಮನೋರಂಜನ ಆಟಗಳನ್ನು ಎರ್ಪಡಿಸಿದ್ದರು. ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ವಾಯ್ಲೆಟ್ ತಾವ್ರೊ, ಸಚೇತಕಿ ಲೋನಾ ಲುವಿಸ್ ಉಪಸ್ಥಿತರಿದ್ದರು. ವೆನಿಷಾ ಡಿಸೋಜಾ ಶಿಕ್ಷಕ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ವೈ.ಸಿ.ಎಸ್ ವಲಯ ಅಧ್ಯಕ್ಷ ಸ್ಯಾಮುಯೇಲ್ ಲುವಿಸ್ ಸ್ವಾಗತಿಸಿದರು, ಕುಂದಾಪುರ ಘಟಕ ಅಧ್ಯಕ್ಷೆ ಅಶ್ವಿನ್ ಡಿಸೋೀಜಾ ಆಟೋಟವನ್ನು ನೆಡೆಸಿದರು. ಕಾರ್ಯಕ್ರಮವನ್ನು ಅನಿಶಾ ರೆಬೆಲ್ಲೊ ನಿರೂಪಿಸಿದರು. ಸಿಯೋನಾ ಡಿಸೋಜಾ ಧನ್ಯವಾದಗಳನ್ನು ಅರ್ಪಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here