Saturday 10th, May 2025
canara news

ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲ್ಪಟ್ಟ ಶ್ರೀ ನಾರಾಯಣ ಗುರುಗಳ 163ನೇ ಜನ್ಮ ದಿನಾಚರಣೆ

Published On : 06 Sep 2017   |  Reported By : Rons Bantwal


ಮುಂಬಯಿ, ಸೆ.06: ಕುಮ್ದಾಪುರ ಇಲ್ಲಿನ ನಾವುಂದ ಕಿರಿಮಂಜೇಶ್ವರ ಇಲ್ಲಿನ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದಿಲ್ಲಿ ಶ್ರೀ ನಾರಾಯಣ ಗುರುಗಳ 163ನೇ ಜನ್ಮ ದಿನಾಚರಣೆಯನ್ನು ಅರ್ಥಗರ್ಬಿತವಾಗಿ ಆಚರಿಸಲಾಯಿತು.

ಶಾಲೆಯ ಸಂಸ್ಥಾಪಕ ಡಾ|. ಎನ್.ಕೆ.ಬಿಲ್ಲವ ಮುಂಬಯಿ ಸಭಾಧ್ಯಕ್ಷತೆ ವಹಿಸಿ ಶ್ರೀ ಗುರುಗಳ ಶ್ರೀರಕ್ಷೆ ಬೇಡುತ್ತಾ ಪುಷ್ಪನಮನ ಸಲ್ಲಿಸಿದರು ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಗೋವಿಂದರಾಜು ಅವರನ್ನು ಸನ್ಮಾನಿ ಶ್ರೀ ಗುರುವರ್ಯರನ್ನು ಸ್ಮರಿಸಿ ಗುರುಗಳ ಜೀವನ ಶೈಲಿ ವಿವರಿಸಿ ನಮ್ಮ ಬಾಳನ್ನೂ ಅವರಂತೆಯೇ ಮುನ್ನಡೆಸುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜ ಸೇವ ಸಂಘ ನಾವುಂದ ಇದರ ಗೌರವಾಧ್ಯಕ್ಷ ಗೋಪಾಲ ಕೆ.ಪೂಜಾರಿ,

ಉಪಾಧ್ಯಕ್ಷ ಶೇಖರ ಪೂಜಾರಿ, ಶ್ರೀ ಗುರು ನಿತ್ಯಾನಂದ ಕೋ.ಆಪರೇಟಿವ್ ಸೊಸೈಟಿ ಅರೆಹೊಳೆ ನಿರ್ದೇಶಕರಾದ ಸುರೇಶ್ ಪೂಜಾರಿ, ಸಾವಿತ್ರಿ ಎಸ್., ಸಂಚಾಲಕ ಶಂಕರ ಪೂಜಾರಿ, ಶುಭದಾ ಶಾಲಾ ಆಡಳಿತಾಧಿಕಾರಿ ಅರುಣ ಬಿ.ಪೂಜಾರಿ ಉಪಸ್ಥಿತರಿದ್ದರು.

ಮುಖ್ಯೋಪಾಧ್ಯಾಯ ಎಂ.ಜಿ ಬಾನಾವಳಿಕರ್ ಅತಿಥಿüಗಳನ್ನು ಸ್ವಾಗತಿಸಿದರು. ಶಿಕ್ಷಕಿ ಆಯಿಷಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಗೀತಾದೇವಿ ವಂದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here