Saturday 10th, May 2025
canara news

ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ವತಿಯಿಂದ ಸಂಭ್ರಮಿಸಲ್ಪಟ್ಟ163ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

Published On : 06 Sep 2017   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಕೋಲಾಪುರ (ಸಾಂಗ್ಲಿ), ಸೆ.06: ಮಹಾರಾಷ್ಟ್ರ ರಾಜ್ಯದ ಕೋಲಾಪುರದಲ್ಲಿ ಸೇವಾನಿರತ ಬಿಲ್ಲವರ ಅಸೋಸಿಯೇಶನ್ ಸಾಂಗ್ಲಿ ಸಂಸ್ಥೆಯು ಇಂದಿಲ್ಲಿ ಬುಧವಾರ ಪೂರ್ವಾಹ್ನ ಸಾಂಗ್ಲಿ ನಗರದ ಶಿಂಧೆಮಾಲ ಇಲ್ಲಿನ ದುರ್ಗಾದಯಾ ಕಾಂಪ್ಲೆಕ್ಸ್‍ನಲ್ಲಿ ಅಸೋಸಿಯೇಶನ್‍ನ ಕಾರ್ಯಾಲಯದಲ್ಲಿ ಸಾಂಪ್ರದಾಯಿಕವಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳÀ 163ನೇ ಜಯಂತ್ಯೋತ್ಸವ ಸಂಭ್ರಮಿಸಿತು.

ಅಸೋಸಿಯೇಶನ್‍ನ ಅಧ್ಯಕ್ಷ ನಾರಾಯಣ ಪೂಜಾರಿ ಅವರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಪ್ರಸ್ತಾವನೆಗೈದು ನಾರಾಯಣ ಗುರುಗಳÀ ತತ್ವ ಮತ್ತು ಅವರ ಗುಣನಡೆತೆಗಳ ವೈಶಿಷ್ಟ ್ಯ ಮನವರಿಸಿ ಅವರಂತೆಯೇ ನಾವೂ ಜೀವನ ರೂಪಿಸಿಕೊಂಡು ಸಮಾಜ ಮತ್ತು ರಾಷ್ಟ್ರಕ್ಕೆ ಗೌರವಯುತರಾಗಿ ಬಾಳುವಂತೆ ಕರೆಯಿತ್ತರು.

ಉಪಾಧ್ಯಕ್ಷ ಸುಧಾಕರ ಪೂಜಾರಿ ಹೊಸ್ಮಾರು ಸ್ವಾಗತಿಸಿ ಗುರುವರ್ಯರ ಆದರಶಗಳನ್ನು ನಾವೆಲ್ಲರೂ ಮೈಗೂಡಿಸಿ ಸಮಗ್ರ ಸಮಾಜಕ್ಕೆ ಮಾದರಿಗಳಗೋಣ ಎಂದರು.

ಈ ಸಂದರ್ಭದಲ್ಲಿ ಗೌರವ ಕಾರ್ಯದರ್ಶಿ ದೇವಿಕಿರಣ್ ಪೂಜಾರಿ, ಗೌರವ ಕೋಶಾಧಿಕಾರಿ ಧೀರಜ್ ಪೂಜಾರಿ, ಮಹಿಳಾ ವಿಭಾಗಧ್ಯಕ್ಷೆ ಶಕುಂತಲಾ ಎಸ್.ಪೂಜಾರಿ, ಕಾರ್ಯಕಾರಿ ಸಮಿತಿ ಸದಸ್ಯರಾದ ರಘುರಾಮ ಪೂಜಾರಿ, ಪ್ರವೀಣ್ ಪೂಜಾರಿ, ಶೇಖರ್ ಪೂಜಾರಿ, ನಾರಾಯಣ ಎಸ್. ಪೂಜಾರಿ, ಆನಂದ ವಿ.ಪೂಜಾರಿ, ಗಣೇಶ್ ಪೂಜಾರಿ, ಮನೋಜ್ ಪೂಜಾರಿ, ಆನಂದ ಡಿ. ಪೂಜಾರಿ, ಚಂದ್ರಾಕ್ಷಿ ಪೂಜಾರಿ, ಸೇರಿದಂತೆ ಅನೇಕ ಸದಸ್ಯರು ಉಪಸ್ಥಿತರಿದ್ದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here