Saturday 10th, May 2025
canara news

ಸುಂಕದಕಟ್ಟೆ ಮಹೇಶ್ ಎನ್.ಪೂಜಾರಿ ನಿಧನ

Published On : 08 Sep 2017   |  Reported By : Rons Bantwal


ಮುಂಬಯಿ, ಸೆ.07: ಮಂಗಳೂರು ಬಜ್ಪೆ ಅಲ್ಲಿನ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮಹೇಶ್ ನೀಲಯ್ಯ ಪೂಜಾರಿ (44.) ಅನಾರೋಗ್ಯದಿಂದ ಇಂದು ಮಹಾನಗರದ ಬೈಕುಲದಲ್ಲಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮಂಗಳೂರು ಬಜ್ಪೆಯ ಶ್ರೀ ಕ್ಷೇತ್ರ ಸುಂಕದಕಟ್ಟೆ ಹಾಗೂ ಬೃಹನ್ಮುಂಬಯಿ ಮಹಾಲಕ್ಷ್ಮೀ ಸಾತ್‍ರಸ್ತಾ ಜಾಕೋಬ್ ಸರ್ಕಲ್‍ನ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕ ಮತ್ತು ಬಜ್ಪೆ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಶೈಕ್ಷಣಿಕ ಸಂಸ್ಥೆಗಳ ಸಂಸ್ಥಾಪಕ ದೈವಕ್ಯ ಶ್ರೀ ನಿರಂಜನ ಸ್ವಾಮೀಜಿ ಅವರ ಪೂರ್ವಾಶ್ರಮದ ಕುಟುಂಬಸ್ಥರಾಗಿದ್ದ ಮೃತರು ತಾಯಿ, ಪತ್ನಿ, ಎರಡು ಗಂಡು ಸೇರಿದಂತೆ ಬಂಧು ಬಳಗ ಅಗಲಿದ್ದಾರೆ.

ಸುದ್ದಿ ತಿಳಿದಾಕ್ಷಣ ಧಾವಿಸಿದ್ದ ನಿರಂಜನ ಸ್ವಾಮೀಜಿ ಅವರ ಆಪ್ತರಾದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಉಡುಪಿ ಇದರ ಆಡಳಿತ ಮೊಕ್ತೇಸರ ಮನಿಫೆÇೀಲ್ಡ್ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಮುಂಬಯಿ ಕಾರ್ಯಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ, ಪುರೋಹಿತ ಲಕ್ಷಿ ್ಮೀನಾರಾಯಣ ಭಟ್ ಭಾಂಡೂಪ್, ಸಹೋದರ ನಾರಾಯಣ ಎನ್.ಪೂಜಾರಿ ಮಾಜಿ ಶಾಸಕ ಸಚಿನ್ ಅಹಿರೆ, ಗಣೇಶ್ ಪೂಜಾರಿ, ಆರ್ಚಕ ವಿಶ್ವನಾಥ್ ಭಟ್, ಕಮಲೇಶ್ ಗುಪ್ತಾ ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದು ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡರು.

ಮಹೇಶ್ ನಿಧನಕ್ಕೆ ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಬಜಪೆ ದೊಡ್ಡಿಕಟ್ಟಾ ಶ್ರೀ ಸ್ವಯಂ ಭೂಲಿಂಗೇಶ್ವರ ಕ್ಷೇತ್ರÀದ ಆಡಳಿತ ಮೊಕ್ತೇಸರ ಎಲ್.ವಿ ಅವಿೂನ್, ಪೆÇೀಲಿಸ್ ಅಧಿಕಾರಿ ಗೋಪಾಲ್ ಕುಂದರ್ ಬಜ್ಪೆ, ಭಾರತ್ ಬ್ಯಾಂಕ್‍ನ ನಿರ್ದೇಶಕಿ ಪುಷ್ಪಲತಾ ಎಸ್.ಸಾಲ್ಯಾನ್, ಮಾಜಿ ಕಾರ್ಯಾಧ್ಯಕ್ಷ ವಿ.ಆರ್ ಕೋಟ್ಯಾನ್, ಕೆ.ಟಿ ಕುಂದರ್, ನರ್ಸಪ್ಪ ಎಸ್.ಸಾಲ್ಯಾನ್, ಶ್ಯಾಮ ಎಸ್. ಸಾಲಿಯಾನ್, ತೋನ್ಸೆ ಸಂಜೀವ ಪೂಜಾರಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.


ಅಪರಾಹ್ನ ಪಾರ್ಥೀವ ಶರೀರವನ್ನು ಸಾತ್‍ರಸ್ತಾ ಜಾಕೋಬ್ ಸರ್ಕಲ್‍ನ ಮೆಹರ್ ಲಾಡ್ಜ್‍ವಾಡಿಯ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಿ ಬಳಿಕ ವರ್ಲಿ ಅಲ್ಲಿನ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲ್ಪಟ್ಟಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here