Friday 4th, July 2025
canara news

ಸೆ.09: ಮಾಟುಂಗಾದ ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ

Published On : 08 Sep 2017   |  Reported By : Rons Bantwal


ಯಂಗ್‍ಮೆನ್ಸ್ ಎಜ್ಯುಕೇಶನ್ ಸೊಸೈಟಿಯ 72ನೇ ವರ್ಧಂತ್ಯೋತ್ಸವ

ಮುಂಬಯಿ, ಸೆ.07: ಮಹಾನಗರದ ಫೆÇೀರ್ಟ್ (ವಿಟಿ) ಪರಿಸರದಲ್ಲಿ ಸುಮಾರು ಏಳುವರೆ ದಶಕಗಳಿಂದ ಸೇವಾನಿರತ ತುಳುಕನ್ನಡಿಗರ ಸಂಚಾಲಕತ್ವದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಯಂಗ್‍ಮೆನ್ಸ್ ಎಜ್ಯುಕೇಶನ್ ಸೊಸೈಟಿ (ರಿ.) ಇದರ 72ನೇ ವರ್ಧಂತ್ಯೋತ್ಸವವು ನಾಳೆ (ಸೆ.09) ಶನಿವಾರ ಸಂಜೆ 6.00 ಗಂಟೆಯಿಂದ ಮಾಟುಂಗಾ ಪೂರ್ವದ (ಸೆಂಟ್ರಲ್ ರೈಲ್ವೇ) ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆಯ ಒಂದನೇ ಮಹಡಿಯಲ್ಲಿನ ಸಭಾಗೃಹದಲ್ಲಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಎನ್.ಪಿ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸೊಸೈಟಿಯ ಉಪಾಧ್ಯಕ್ಷ ಆನಂದ ಎ.ಶೆಟ್ಟಿ ತಿಳಿಸಿದ್ದಾರೆ.

 N P Suvarna

 N.K Billava

Dr. G D Joshi.

Prabha N. Suvarna

ವಾರ್ಷಿಕೋತ್ಸವದ ಶುಭಾವಸರದಲ್ಲಿ ನಾವುಂದ ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಡಾ| ಎನ್.ಕೆ ಬಿಲ್ಲವ ಮುಖ್ಯ ಅತಿಥಿüಯಾಗಿ ಆಗಮಿಸಿ ಪ್ರಭಾ ಎನ್.ಪಿ ಸುವರ್ಣ ರಚಿತ ಗೊಂಚಲು ಕೃತಿ ಬಿಡುಗಡೆ ಗೊಳಿಸಲಾಗುವುದು.ನಾಡಿನ ಹಿರಿಯ ಸಾಹಿತಿ ಡಾ| ಜಿ.ಡಿ ಜೋಶಿ ಅವರ ಕೃತಿ ಬಿಡುಗಡೆ ಮಾಡಲಿದ್ದಾರೆ. ಅಂತೆಯೇ ಕನ್ನಡ ಶಾಲಾ ವಿದ್ಯಾಥಿರ್üಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಿದ್ದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಾಧಾಕೃಷ್ಣ ನೃತ್ಯ ಅಕಾಡೆಮಿ ವಿೂರಾರೋಡ್ ಇದರ ಕಲಾವಿದರು ನಾಟ್ಯಗುರು ಸುಕಾನ್ಯ ಭಟ್ ನಿರ್ದೇಶನದಲ್ಲಿ ನೃತ್ಯವೈಭವವನ್ನು ಪ್ರದರ್ಶಿಸಲಿದ್ದಾರೆ ಎಂದು ಸೊಸೈಟಿಯ ಗೌ| ಕೋಶಾಧಿಕಾರಿ ಶೇಖರ್ ಎನ್.ಸುವರ್ಣ ತಿಳಿಸಿದ್ದಾರೆ.

ಮಹಾನಗರಿಯ ಹಿರಿಯ ಸಂಸ್ಥೆಯ ಈ ವರ್ಧಂತ್ಯೋತ್ಸವದಲ್ಲಿ ಶಿಕ್ಷಣಪ್ರೇಮಿಗಳನ್ನು ಒಳಗೊಂಡು ಸೊಸೈಟಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸೊಸೈಟಿಯ ಗೌ| ಪ್ರ| ಕಾರ್ಯದರ್ಶಿ ಪಿ.ಎನ್ ಶೆಟ್ಟಿಗಾರ್, ವಕ್ತಾರ ಚಿತ್ರಾಪು ಕೆ.ಎಂ ಕೋಟ್ಯಾನ್ ಈ ಮೂಲಕ ವಿನಂತಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here